ASHA Volunteers

ಆಶಾ ಕಾರ್ಯಕರ್ತೆಯರು

ASHA – Accredited Social Health Activist

ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಹಾಗೂ ಜನ ಸಮುದಾಯದ ನಡುವೆ ಸಮುದಾಯದ ಆರೋಗ್ಯ ಸ್ವಯಂ ಸೇವಕಿಯರು ಆಗಿದ್ದಾರೆ. ಇವರು ರಾಷ್ಟ್ರೀಯ ರೋಗ್ಯ ಸಂಸ್ಥೆ ಇದರ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಇವರು ಸಮುದಾಯದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಉತ್ತಮ ಪಡಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದರೊಂದಿಗೆ ಇವರು ಗರ್ಬಿಣಿ ತಾಯಂದಿರಿಗೆ ಅವಶ್ಯ ತಿಳುವಳಿಕೆ ಮತ್ತು ಔಷದೋಪಚಾರ ನೀಡಿ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಇವರ ಪಾತ್ರ  ಸಮುದಾಯದಲ್ಲಿ ಮಹತ್ವದ್ದಾಗಿದೆ. ಇವರು ಪ್ರತಿ ಗ್ರಾಮಕ್ಕೆ ಅಥವಾ ೧೦೦೦ ಜನಸಂಖ್ಯೆಗೆ ಒಬ್ಬರಂತೆ ಕಾರ್ಯನಿರ್ವಹಿಸುತ್ತಾರೆ. ಇವರಿಗೆ ಔಷದ ಕಿಟ್ ಗಳನ್ನು ನೀಡಲಾಗಿರುತ್ತದೆ.

 ಆಶಾ ಕಾರ್ಯಕರ್ತೆಯರು ಯಾರು ಆಗಬಹುದು:

  • ಸ್ಥಳಿಯ 18-45 ವರ್ಷದ  ಮಹಿಳೆಯರಿಗೆ ಆದ್ಯತೆ. ಇವರು ಕನಿಷ್ಠ 7 ನೇ ತೇರ್ಗಡೆ ಹೊಂದಿರಬೇಕು ಮತ್ತು ಓದು ಬರಹ ತಿಳಿದವರಾಗಿರಬೇಕು ಹಾಗೂ ಮಾಹಿತಿಯನ್ನು ಪ್ರಚಾರ ಮಾಡುವ ನೈಪುಣ್ಯತೆಯನ್ನು ಹೊಂದಿರಬೇಕು

ಆಶಾ ಕಾರ್ಯಕರ್ತೆಯರ ಆಯ್ಕೆ:

  • ಕಿರಿಯ ಮಹಿಳಾ ಆರೋಗ್ಯ ಸಹಾಯಕರು ಮತ್ತು ಗ್ರಾಮ ನೈರ್ಮಲ್ಯ ಸಮಿತಿಯವರು ಸ್ಥಳಿಯ ಗ್ರಾಮ ಪಂಚಾಯತನ ಸಹಕಾರದೊಂದಿಗೆ  3 ಅರ್ಹ ಆಶಾ ಸ್ವಯಂ ಕಾರ್ಯಕರ್ತೆಯರನ್ನು ಪ್ರತಿ 1೦೦೦ ಜನಸಂಖ್ಯೆಗೆ ಅನುಗುಣವಾಗಿ ಗುರುತಿಸುತ್ತಾರೆ. ನಂತರ ಅವರ ಹೆಸರನ್ನು ಗ್ರಾಮ ನೈರ್ಮಲ್ಯ ಸಮಿತಿ ನಡಾವಳಿ ಪುಸ್ತಕದಲ್ಲಿ ನಮೂದಿಸುತ್ತಾರೆ.
  • ಆಶಾ ಕಾರ್ಯಕರ್ತೆಯರು ಸರ್ಕಾರಿ ನೌಕರರು ಆಗಿರುವದಿಲ್ಲ. ಇವರ ಸೇವೆಗೆ ಸರ್ಕಾರವು ಇವರಿಗೆ ಗೌರವಧನವನ್ನು ನೀಡಲಾಗುತ್ತದೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: