Child labour laws in india

ಭಾರತದಲ್ಲಿ ಬಾಲ ಕಾರ್ಮಿಕ ಪದ್ದತಿ  ನಿಷೇಧ ಕಾನೂನುಗಳು

ಈ ಕೆಳಗಿನ ಕಾನೂನಿನ ವಿಧಿಗಳು ಭಾರತೀಯ ಸಂವಿಧಾನದಲ್ಲಿ ಅಡಕವಾದ ಮೂಲಭೂತ ಹಕ್ಕುಗಳು ಮತ್ತು ನಿರ್ದೇಶಕ ತತ್ವಗಳಲ್ಲಿ ಈ ರೀತಿ ಇರುತ್ತವೆ. :

ಸಂವಿಧಾನದ 24 ನೇ ವಿಧಿ:

ಯಾವುದೇ ೧೪ ವರ್ಷದ ಕೆಳಗಿನ ಮಗುವನ್ನು ಕಾರ್ಖಾನೆಯಲ್ಲಿ, ಗಣಿಗಳಲ್ಲಿ ಅಥವಾ ಅಪಾಯಕಾರಿ ಕೆಲಸ  ಮಾಡಲು ನೇಮಿಸಬಾರದು

ಸಂವಿಧಾನದ 39ಇ ನೇ ವಿಧಿ:

ರಾಷ್ಟ್ರವು ತನ್ನ ಕೆಲಸಗಾರರ, ಮಹಿಳೆ,  ಪುರುಷ, ಮತ್ತು ಎಳೆ ವಯಸ್ಸಿನ ಮಕ್ಕಳ ಆರೋಗ್ಯ ಮತ್ತು ಶಕ್ತಿಯ ಶೋಷಣೆಯಾಗದಂತೆ. ಅವರು ತಮ್ಮ ಆರ್ಥಿಕ ತೊಂದರೆಯಿಂದಾಗಿ, ತಮ್ಮ ವಯಸ್ಸಿಗೆ  ಮೀರಿದ,  ಸಾಮರ್ಥ್ಯ ಕ್ಕೆ ಅನುಗುಣವಾಗಿಲ್ಲದ  ಕೆಲಸ ಮಾಡದಂತೆ  ನೀತಿಯನ್ನು ರೂಪಿಸಬೇಕು

ಸಂವಿಧಾನದ 36ಎಫ್ ನೇ ವಿಧಿ:

ಮಕ್ಕಳಿಗೆ  ಆರೋಗ್ಯಕರ ವಾತಾವರಣದಲ್ಲಿ, ಗೌರವ, ಸ್ವಾತಂತ್ರ್ಯ, ಅಭಿವೃದ್ದಿ  ಪಡಿಸಿಕೊಳ್ಳುವ  ಅವಕಾಶ  ಮತ್ತು  ಅನುಕೂಲತೆಗಳನ್ನು ಒದಗಿಸಬೇಕು. ಬಾಲ್ಯ ಮತ್ತು ಯೌವನದಲ್ಲಿ  ನೈತಿಕ  ಮತ್ತು ಐಹಿಕ  ಅಂಶಗಳನ್ನು ಕಳೆದುಕೊಳ್ಳದಂತೆ ರಕ್ಷಣೆ ಕೊಡಬೇಕು.

ಸಂವಿಧಾನದ 45 ನೇ ವಿಧಿ:

ರಾಷ್ಟ್ರದ ಸಂವಿಧಾನವು ಜಾರಿಗೆ ಬಂದ ೧೦ ವರ್ಷದೊಳಗೆ  ಎಲ್ಲ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣವನ್ನು ಅವರಿಗೆ ೧೪ ವರ್ಷ ತುಂಬುವ ತನಕ ನೀಡಲು ಪ್ರಯತ್ನಿಸಬೇಕು.

ರಾಷ್ಟ್ರೀಯ ಮಟ್ಟದಲ್ಲಿನ  ಬಾಲಕಾರ್ಮಿಕ ಪದ್ದತಿಗೆ ಸಂಬಂಧಿಸಿದಂತೆ ಈ ಕೆಳಕಂಡತೆ ಇರುತ್ತವೆ.

  • ಬಾಲ ಕಾರ್ಮಿಕ ನಿಷೇಧ ಕಾನೂನು 1986 ರಂತೆ ಮಕ್ಕಳ  ಜೀವ ಮತ್ತು ಆರೋಗ್ಯಕ್ಕೆ ಹಾನಿಕರವಾದ 15 ವಿಧದ ವೃತ್ತಿಗಳಲ್ಲಿ ಮತ್ತು 57 ಉದ್ಯಮಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿದೆ.
  • ಕೈಗಾರಿಕೆ ಕಾನೂನಿನ 1948 ರ ಪ್ರಕಾರ 18 ವರ್ಷದ ಳಗಿನ ಮಕ್ಕಳನ್ನು ಕಾರ್ಖಾನೆ ಕೆಲಸಕ್ಕೆ ತೆಗೆದುಕೊಳ್ಳುವದನ್ನು ನಿಷೇಧಿಸಲಾಗಿದೆ.

ಬಾಲಕಾರ್ಮಿಕರ  ಕೆಲಸವನ್ನು ನಿಷೇಧಿಸುವ ಮಾರ್ಗಸೂಚಿಗಳು ಈ ಕೆಳಗಿನಂತೆ ಇರುತ್ತವೆ.

  • ಬಾಲ ನ್ಯಾಯಾಲಯ ಅಧಿನಿಯಮ 2006 ಒಂದು ಕಲ್ಯಾಣಕಾರಿ ಅಧಿನಿಯಮವಾಗಿದ್ದು ಇವನ್ನು ಅಲಕ್ಷಿತ ಬಾಲಾಪರಾಧಿಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಪುನರ್ವಸತಿಗಳನ್ನು ನೀಡಲು ಜಾರಿಗೊಳಿಸಿದ್ದು ಇದರ ವ್ಯಾಪ್ತಿಯಲ್ಲಿ ಬಾಲಕಾರ್ಮಿಕರೂ ಸೇರುತ್ತಾರೆ.
  • ಜೀತಪದ್ಧತಿಯ ನಿಷೇಧ ಅಧಿನಿಯಮ 1976 ನ್ನು ಮಕ್ಕಳನ್ನು ದುಡಿಮೆಯೊಳಗೆ ತೊಡಗಿಸಿಕೊಳ್ಳುವ ಉದ್ದಿಮೆದಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತ್ದೆ.
  • ಜತೆಗೆ ಒಬ್ಬ ಗುತ್ತಿದೆದಾರನ ಮೂಲಕ ಬಾಲಕರನ್ನು ದುಡಿಮೆಗೆ ಹಚ್ಚಿರುವ ಪ್ರಕರಣಗಳಲ್ಲಿ ಪ್ರಧಾನ ಉದ್ದಿಮೆದಾರನನ್ನು ಬಾಲದುಡಿಮೆ ಗುತ್ತಿಗೆ ನಿಷೇದ ಮತ್ತು ನಿಯಂತ್ರಣ ಅಧಿನಿಯಮ 1970 ರ ಅಡಿಯಲ್ಲಿ ವಿಚಾರಣೆಗೆ ಓಳಪಡುತ್ತಾರೆ.
Advertisements

2 responses

  1. Good

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: