IRNSS Satellite Program

ಐಆರ್ ಎನ್ ಎಸ್ ಎಸ್ – 1ಜಿ   

IRNSS: Indian Regional Navigation Satellite System

ಭಾರತದ ಮೊಟ್ಟಮೊದಲ ಪ್ರಾದೇಶಿಕ ದಿಕ್ಸೂಚಿ ಉಪಗ್ರಹದ ಐತಿಹಾಸಿಕ ಹಾಗೂ ಅಂತಿಮ  7 ನೇ ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ದಿನಾಂಕ 28.04.2016 ರಂದು ಗುರುವಾರ ಮದ್ಯಾಹ್ನ 12.50 ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಭಾರತವು ಈ ಮೂಲಕ ಸ್ವಂತ ಜಿ.ಪಿ.ಎಸ್. ವ್ಯವಸ್ಥೆ ಅಳವಡಿಸಿಕೊಂಡಿರುವ 5 ನೇ ದೇಶವಾಗಿದೆ. ಇದರ ಸಂಪೂರ್ಣ ಕಾರ್ಯಾಚರಣೆ ಜೂನ್ ತಿಂಗಳಿನಿಂದ ಪ್ರಾರಂಭವಾಗುತ್ತದೆ. ಈಗಾಗಲೇ ಈ ಸರಣಿಗೆ ಸಂಬಂಧಿಸಿದಂತೆ 6 ಉಪಗ್ರಹಗಳನ್ನು ಕಕ್ಷೆಗೆ ಹಾರಿ ಬಿಡಲಾಗಿದೆ. ಈಗ ಕಕ್ಷೆಗೆ ಸೇರಿರುವ 7 ಉಪಗ್ರಹಗಳಲ್ಲಿ 3 ಉಪಗ್ರಹಗಳು ಭೂ ಸ್ಥಿರ ಕಕ್ಷೆಯಲ್ಲಿ ಇದ್ದರೆ ಇನ್ನೂ 4 ಉಪಗ್ರಹಗಳು ಭೂಮಿಯ ಪರಿಭ್ರಮಣೆ ಮಾಡುತ್ತವೆ. ಈ ಹೊಸ ದಿಕ್ಸೂಚಿ ವ್ಯವಸ್ಥೆಗೆ ನಾವಿಕ ಎಂದು ಹೆಸರು ಇಡಲಾಗಿದೆ.

ಉಡಾವಣೆ ಸ್ಥಳ:

IRNSS-1G ಉಪಗ್ರಹವನ್ನು ಶ್ರೀ ಹರಿಕೋಟಾದಿಂದ ದಿನಾಂಕ: 28.04.2016 ಗುರುವಾರ ಮದ್ಯಾಹ್ನ 12.50 ಕ್ಕೆ ಇಸ್ರೋದ ಪಿ.ಎಸ್.ಎಲ್.ವಿ ರಾಕೇಟ್ ಮೂಲಕ ಕೇವಲ 20 ನಿಮಿಷಗಳಲ್ಲಿ ಕಕ್ಷೆಗೆ ಸೇರಿಸಲಾಗಿದೆ.

ಉಪಗ್ರಹ ವಿನ್ಯಾಸ:

 IRNSS-1G ಉಪಗ್ರಹವು 1425 ಕೆ.ಜಿ. ತೂಕ ಮತ್ತು 44.4 ಮೀಟರ್ ಎತ್ತರವಿದೆ. ಇದರ ಜೀವಿತಾವಧಿ 12 ವರ್ಷ ಇರುತ್ತದೆ.ಈಗಾಗಲೇ ಐಆರ್ ಎನ್ ಎಸ್ ಎಸ್ ನ 6 ಉಪಗ್ರಹಗಳು ಭಾರತ ದೇಶವು ನಭಕ್ಕೆ ತಲುಪಿಸಿರುತ್ತದೆ, ಈಗ ಇದೇ ಸರಣಿಯ 7 ನೇ ಉಪಗ್ರಹವನ್ನು ಉಡಾವಣೆ ಮಾಡಿರುವದರಿಂದ ಇನ್ನಷ್ಟು ಸ್ಪಷ್ಟತೆ ಮತ್ತು ಮಾಹಿತಿ ದೊರಕುತ್ತದೆ. ಅಂದರೆ ಭೂಮಿಯ ಮೇಲಿನ 10 ಮೀಟರ್ ನಷ್ಟು ಚಿಕ್ಕ ಸ್ಥಳವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ ಆದರೆ ಈ ವ್ಯವಸ್ಥೆ ಜನಸಾಮಾನ್ಯರಿಗೆ ಲಭ್ಯವಿರುವದಿಲ್ಲ. ಜನಸಾಮಾನ್ಯರಿಗೆ ಭೂಮಿಯ ಮೇಲಿನ 20 ಮೀಟರ್ ನಷ್ಟು ಚಿಕ್ಕ ಸ್ಥಳವನ್ನು ಸ್ಪಸ್ಟವಾಗಿ ಗುರುತಿಸಲು ಇದು ಸಹಕಾರಿಯಾಗಲಿದೆ.

ಉಪಗ್ರಹದ ನಿಯಂತ್ರಣ :

ಈ ಉಪಗ್ರಹವನ್ನು ಕರ್ನಾಟಕದ ಬ್ಯಾಲ್ಯಾಳು ಇಸ್ರೋ ಕೇಂದ್ರದಿಂದ ನಿಯಂತ್ರಣ ಮಾಡಲಾಗುತ್ತದೆ. ಆದರೆ ದೇಶದ 21 ಕೇಂದ್ರಗಳಿಂದ ದತ್ತಾಂಶ ಸಂಗ್ರಹಿಸಲಾಗುತ್ತದೆ.

ಉಪಗ್ರಹದ ಉಪಯೋಗ:

ಜಿಪಿಎಸ್ ವ್ಯವಸ್ಥೆಯು ಭೂಮಿಯ ನಿರ್ದಿಷ್ಟ ಸ್ಥಳಗಳು ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುತ್ತದೆ. ಇದರೊಂದಿಗೆ ನಿರ್ದಿಷ್ಟ ಸ್ಥಳ, ಮಾರ್ಗಗಳನ್ನು ಗುರುತಿಸಲು ಇದರಿಂದ ಅನುಕೂಲವಾಗಲಿದೆ. ಇದಲ್ಲದೆ ಹವಾಮಾನ ಮೂನ್ಸೂಚನೆ ಹಾಗೂ ಮಿಲಿಟರಿ ಚಟುವಟಿಕೆಗಳಿಗೆ ಇದು ನೆರವಾಗುತ್ತದೆ.

ತಗಲಿದ ವೆಚ್ಚ:

ಭಾರತವು ಈ ಯೋಜನೆಗೆ 1420 ಶತಕೋಟಿ ರೂಪಾಯಿಗಳ ಯೋಜನೆಯನ್ನು ಸಿದ್ದಪಡಿಸಿತ್ತು. 2010 ಎಪ್ರೀಲ್ ನಲ್ಲಿ ಯೋಜನೆ ರೂಪಗೊಂಡಿತ್ತು. ಇದರಿಂದ ಭಾರತವು ಸ್ವದೇಶೀ ನಿರ್ಮಿತ ಮಾರ್ಗದರ್ಶೀ ಹೊಂದಿರುವ ದೇಶ ಬ ಹೆಮ್ಮಗೆ ಪಾತ್ರವಾಗಲಿದೆ.

ಇಲ್ಲಿಯವರೆಗೆ ಐಆರ್ ಎನ್ ಎಸ್ ಎಸ್  (IRNSS) ಸರಣಿ ಉಪಗ್ರಹಗಳನ್ನು ಉಡಾವಣೆ ಮಾಡಿದ ದಿನಾಂಕಗಳು:

 1. ಐಆರ್ ಎನ್ ಎಸ್ ಎಸ್-1ಎ – 2013 ರ ಜುಲೈ 1
 2. ಐಆರ್ ಎನ್ ಎಸ್ ಎಸ್-1ಬಿ – 2014 ರ ಎಪ್ರೀಲ್ 4
 3. ಐಆರ್ ಎನ್ ಎಸ್ ಎಸ್-1ಸಿ – 2014 ಅಕ್ಟೋಬರ 16
 4. ಐಆರ್ ಎನ್ ಎಸ್ ಎಸ್-1ಡಿ – 2015 ಮಾರ್ಚ್ 28
 5. ಐಆರ್ ಎನ್ ಎಸ್ ಎಸ್-1ಇ – 2016 ಜನೇವರಿ 20
 6. ಐಆರ್ ಎನ್ ಎಸ್ ಎಸ್-1ಎಫ್ – 2016 ಮಾರ್ಚ್ 10
 7. ಐಆರ್ ಎನ್ ಎಸ್ ಎಸ್-1ಜಿ -2016 ಎಪ್ರೀಲ್ 28

ಭಾರತವು ಇಲ್ಲಿಯವರೆಗೆ ಜಿಪಿಎಸ್ ಗೆ ಅಮೇರಿಕದ ಮಾರ್ಗದರ್ಶಿ ಉಪಗ್ರಹವನ್ನು ಆಧರಿಸಿತ್ತು.

ಸ್ವದೇಶಿ ದಿಕ್ಸೂಚಿ ಹೊಂದಿರುವ ದೇಶಗಳು :

 1. ಜಿ.ಪಿ.ಎಸ್. : ಅಮೇರಿಕ
 2. ಗ್ಲೋನಾಸ್ : ರಷ್ಯಾ
 3. ಗೆಲಲಿಯೋ : ಯೂರೋಪ
 4. ಬೈಡೆ: ಚೀನಾ
 5. ನಾವಿಕ್ : ಭಾರತ
Advertisements

One response

 1. good job nagraj👍👌

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: