G-20 Summits

ಜಿ20 ಸಮಾವೇಶ

ಪರಿಚಯ: 

ಜಾಗತಿಕ ಆರ್ಥಿಕ ಸಹಕಾರ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮುಂದುವರೆದ ಪ್ರಬಲ ರಾಷ್ಟ್ರಗಳೊಂದಿಗೆ ಜಿ-20 ರೂಪಗೊಂಡಿದೆ. ಇದು ಮುಂದುವರಿದ ದೇಶಗಳನ್ನು ಮತ್ತು ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳನ್ನು ಒಟ್ಟಿಗೆ ಸೇರಿಸುವ ಮೂಲಕ ಜಾಗತಿಕ ಸುಸ್ಥಿರ ಅಭಿವೃದ್ಧಿಗೆ ನೆರವು ನೀಡುತ್ತಿದೆ.

 ರಚನೆ ಮತ್ತು ಪ್ರಾರಂಭ:

1999ರಲ್ಲಿ ಮುಂದುವರೆದ ಪ್ರಬಲ ರಾಷ್ಟ್ರಗಳೊಂದಿಗೆ ಏಷ್ಯಾದ ಹಣಕಾಸು ಬಿಕ್ಕಟ್ಟಿಗೆ ಒಂದು ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಜರ್ಮನ್‌ ಹಣಕಾಸು ಸಚಿವ ಹನ್ಸ್‌ ಇಚೆಲ್‌ ಮತ್ತು ಕೆನಡಾ ಪ್ರಧಾನಿ ಪೌಲ್‌ ಮಾರ್ಟಿನ್‌ ಅವರ ನೇತೃತ್ವದಲ್ಲಿ ಜಗತ್ತಿನ ಪ್ರಮುಖ 20 ರಾಷ್ಟ್ರಗಳ ಹಣಕಾಸು ಸಚಿವರ ಸಮಾವೇಶವನ್ನು ಆಯೋಜಿಸಲಾಯಿತು ಇದರೊಂದಿಗೆ ಜಿ-20 ರೂಪಗೊಂಡಿತು. ಇದರಲ್ಲಿ 19 ರಾಷ್ಟ್ರಗಳು ಮತ್ತು ಯುರೋಪಿಯನ್‌ ಯೂನಿಯನ್‌ ಸೇರಿ 20 ರಾಷ್ಟ್ರಗಳಿವೆ.

ಉದ್ದೇಶ:

ಜಾಗತಿಕ ಆರ್ಥಿಕ ಸಹಕಾರ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮುಂದುವರೆದ ಪ್ರಬಲ ರಾಷ್ಟ್ರಗಳೊಂದಿಗೆ ಜಿ-20 ರೂಪಗೊಂಡಿದ. ಇದರಲ್ಲಿರುವ 20 ರಾಷ್ಟ್ರಗಳ ಆರ್ಥಿಕ ಶಕ್ತಿ ಎಷ್ಟಿದೆ ಎಂದರೆ, ಇಡೀ ವಿಶ್ವದ ಶೇ.85ರಷ್ಟು ಒಟ್ಟು ಉತ್ಪಾದನೆ ಇಲ್ಲೇ ಇದೆ. ಶೇ.80ರಷ್ಟು ವಿಶ್ವ ವ್ಯಾಪಾರ ಈ ಜಿ20 ಗುಂಪಿನ ರಾಷ್ಟ್ರಗಳಲ್ಲೇ ನಡೆಯುತ್ತವೆ. ಈ ಗುಂಪಿನಲ್ಲಿ ಯೂರೋಪ್ ಒಕ್ಕೂಟ ಹೊರತುಪಡಿಸಿದರೆ ಉಳಿದೆಲ್ಲವೂ ವೈಯಕ್ತಿಕ ರಾಷ್ಟ್ರಗಳೇ ಆಗಿವೆ. ಯೂರೋಪಿಯನ್ ಒಕ್ಕೂಟವು 28 ಐರೋಪ್ಯ ರಾಷ್ಟ್ರಗಳ ಒಂದು ಗುಂಪಾಗಿದೆ.

ಜಿ- 20 ಯ ಧ್ಯೇಯಗಳು:

1.ಸುಸ್ಥಿರ ಆರ್ಥಿಕ ಅಭಿವೃದ್ಧಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಸದಸ್ಯ ರಾಷ್ಟ್ರಗಳ ನಡುವೆ ಯೋಜನೆಗಳ ಸಹಕಾರ

2.ಭವಿಷ್ಯದಲ್ಲಿ ಎದುರಾಗಬಲ್ಲ ಆರ್ಥಿಕ ಬಿಕ್ಕಟ್ಟನ್ನು ತಡೆಯುವುದು. ಆರ್ಥಿಕ ಕಟ್ಟುಪಾಡುಗಳನ್ನು ಪ್ರಚಾರಮಾಡುವ ಮೂಲಕ ಅಪಾಯವನ್ನು ಕಡಿಮೆ ಮಾಡುವುದು.

3 ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯನ್ನು ಆಧುನಿಕರಣಗೊಳಿಸುವುದು.

 

ಜಿ20 ರಾಷ್ಟ್ರಗಳು ಈ ಕೆಳಗಿನಂತಿವೆ.

1) ಅರ್ಜೆಂಟೀನಾ
2) ಆಸ್ಟ್ರೇಲಿಯಾ
3) ಬ್ರೆಜಿಲ್
4) ಕೆನಡಾ
5) ಚೀನಾ
6) ಯೂರೋಪಿಯನ್ ಯೂನಿಯನ್
7) ಫ್ರಾನ್ಸ್
8) ಜರ್ಮನಿ
9) ಭಾರತ
10) ಇಂಡೋನೇಷ್ಯಾ
11) ಇಟಲಿ
12) ಜಪಾನ್
13) ಮೆಕ್ಸಿಕೋ
14) ರಷ್ಯಾ
15) ಸೌದಿ ಅರೇಬಿಯಾ
16) ದಕ್ಷಿಣ ಆಫ್ರಿಕಾ
17) ದಕ್ಷಿಣ ಕೊರಿಯಾ
18) ಟರ್ಕಿ
19) ಬ್ರಿಟನ್ (UK)
20) ಅಮೆರಿಕ

 

ಜಿ-20 ಸಮಾವೇಶಗಳು:

  1. 2008. ನ. 14, 15: ವಾಷಿಂಗ್ಟನ್‌

ಜಿ. 20 ನಾಯಕರ ಸಮಾವೇಶ ಅಮೆರಿಕದ ವಾಷಿಂಗ್ಟನ್‌ ಡಿಸಿಯಲ್ಲಿ ನೆರವೇರಿತು. ಅಂದು ಉಂಟಾಗಿದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದು ಮತ್ತು ಆರ್ಥಿಕ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಲಾಯಿತು.

  1. 2009. ಏಪ್ರಿಲ್‌ 2: ಲಂಡನ್‌

ಬ್ರಿಟನ್‌ನಲ್ಲಿ ಜಿ. 20 ನಾಯಕರು ಎರಡನೇ ಬಾರಿಗೆ ಬ್ರಿಟನ್‌ನ ಲಂಡನ್‌ನಲ್ಲಿ ಸಭೆ ಸೇರಿದರು. ಸದಸ್ಯ ರಾಷ್ಟ್ರಗಳ ನಡುವೆ ಆರ್ಥಿಕ ಸಹಕಾರ ಆರ್ಥಿಕ ಬಿಕ್ಕಟ್ಟನ್ನು ತಡೆಗಟ್ಟಲು ಉತ್ತೇಜಿತ ಕ್ರಮಗಳನ್ನು ತಡೆಯುವುದು ಇದರ ಉದ್ದೇಶವಾಗಿತ್ತು.

  1. 2009. ಸೆಪ್ಟೆಂಬರ್‌ 24, 25: ಪಿಟ್ಸ್‌ಬರ್ಗ್‌:

ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಹೊರಬಂದು ಆರ್ಥಿಕ ಸುಧಾರಣೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಜಾಗತಿಕ ನಾಯಕರು ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಮಾತುಕತೆ ನಡೆಸಿದರು.

  1. 2010 ಜೂ.26, 27: ಟೊರೆಂಟೊ

ಜಿ.20 ಸಮಾವೇಶ ಕೆನಡಾದ ಟೊರೆಂಟೊದಲ್ಲಿ ನಡೆಯಿತು. ಜಾಗತಿಕ ಆರ್ಥಿಕ ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಒಂದು ಭದ್ರ ಚೌಕಟ್ಟನ್ನು ನಿರ್ಮಾಣ ಮಾಡುವುದು. ಆರ್ಥಿಕತೆಯ ಉತ್ತೇಜನಕ್ಕೆ ಹೊಸ ಆರಂಭ ಒದಗಿಸುವುದು ಮಾತುಕತೆಯ ಪ್ರಮುಖ ವಿಷಯವಾಗಿದ್ದವು.

  1. 2010: ನ.10- 11: ಸಿಯೋಲ್‌

ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಮತ್ತೂಮ್ಮೆ ಜಿ- 20 ನಾಯಕರು ಸಮಾವೇಶಗೊಂಡರು. ಜಾಗತಿಕ ಆರ್ಥಿಕತೆಯನ್ನು ಕುಸಿತದಿಂದ ಪಾರು ಮಾಡುವುದು ಚರ್ಚೆ ಕೇಂದ್ರ ವಿಷಯವಾಗಿತ್ತು.

  1. 2011 ನ.3-4: ಕಾನ್ಸ್‌

ಫ್ರಾನ್ಸ್‌ನ ಕಾನ್ಸ್‌ನಲ್ಲಿ ಒಟ್ಟು ಸೇರಿದ ಜಿ- 20 ರಾಷ್ಟಗಳ ನಾಯಕರು ಆರ್ಥಿಕ ಸ್ಥಿರತೆಗೆ ಮಾರಕವಾಗಬಲ್ಲ ವಿಷಯಗಳನ್ನು ಮಟ್ಟಹಾಕುವುದರ ಕುರಿತು ವಿಸ್ತೃತ ಚರ್ಚೆ ನಡೆಸಿದರು.

  1. 2012 ಜೂ.18- 19: ಕಾಬೋಸ್‌

ಮೆಕ್ಸಿಕೊದ ಕಾಬೋಸ್‌ನಲ್ಲಿ ಏಳನೇ ಬಾರಿಗೆ ಜಿ- 20 ರಾಷ್ಟ್ರಗಳ ಸಮಾವೇಶವನ್ನು ಆಯೋಜಿಸಲಾಯಿತು. ಯುರೊಪಿನಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಸಮಾವೇಶದ ಉದ್ದೇಶವಾಗಿತ್ತು. ಉದ್ಯೋಗ ಸೃಷ್ಟಿ, ವ್ಯಾಪಾರ ಅಭಿವೃದ್ಧಿಯ ಕಡೆಗೂ ಗಮನ ನೀಡಲಾಯಿತು.

  1. 2013 ಸೆ.5- 6: ಪೀಟರ್ಸಬರ್ಗ್‌ (ರಷ್ಯಾ)

ರಷ್ಯಾ ಅಧ್ಯಕ್ಷ ವ್ಯಾಡಿಮಿರ್‌ ಪುಟಿನ್‌ ಅವರ ನೇತೃತ್ವದಲ್ಲಿ ಈ ಸಮಾವೇಶವನ್ನು ಆಯೋಜಿಸಲಾಯಿತು. ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಸಮಾವೇಶ ಮಹತ್ವ ನೀಡಿತು.

  1. 2014 ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನ.15 ಮತ್ತು 16ರಂದು 9ನೇ ಜಿ- 20 ಶೃಂಗ ಸಭೆ ನೆರವೇರಿದೆ.
  2. 2015 ನವೆಂಬರ್ 15 -16 ಟರ್ಕಿಯ ಅಂಟಾಲ್ಯ : ಜಾಗತಿಕ ಭಯೋತ್ಪಾದನೆ ವಿರುದ್ದಹೋರಾಟ
  1. 2016 ರ ಸಭೆಯು ಸಪ್ಟಂಬರ್ 4-5 ರಂದು ಚೀನಾದಲ್ಲಿ ನಡೆಯಲಿದೆ.
  2. 2017 ರ ಸಭೆಯು ಜರ್ಮನಿಯಲ್ಲಿ ನಡೆಯಲಿದೆ.

ಜಿ-20 ಯಲ್ಲಿ ಕೇವಲ 20 ರಾಷ್ಟ್ರಗಳು:

ವಿಶ್ವದ ಅಭಿವೃದ್ಧಿ ಹೊಂದಿದ ಮತ್ತು ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಮಾತ್ರ ಜಿ.20ಯಲ್ಲಿವೆ. ರಾಷ್ಟ್ರಗಳ ಗುಂಪು ಕಡಿಮೆ ಇದ್ದಷ್ಟೂ ನಿರ್ಧಾರ ಕೈಗೊಳ್ಳುವುದು ಸುಲಭವಾಗುತ್ತದೆ. ಈ ಕಾರಣಕ್ಕಾಗಿ 20 ರಾಷ್ಟ್ರಗಳಿಗೆ ಮಾತ್ರ ಇದನ್ನು ಸೀಮಿತಗೊಳಿಸಾಗಿದೆ. ಕೆಲವೊಮ್ಮೆ ಸಮಾವೇಶದಲ್ಲಿ ಪಾಲ್ಗೊಳ್ಳಲು ಇತರ ರಾಷ್ಟ್ರಗಳಿಗೆ ಆಹ್ವಾನ ನೀಡಲಾಗುತ್ತದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: