Ujjwala Yojana

ಪ್ರದಾನ ಮಂತ್ರಿ ಉಜ್ವಲ ಯೋಜನೆ

ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ದೇಶದ ಬಿಪಿಎಲ್ ಕುಟುಂಬಗಳಿಗೆ ಉಚಿತ ಎಲ್.ಪಿ.ಜಿ ಸಂಪರ್ಕ ಯೋಜನೆಯನ್ನು ಜಾರಿಗೊಳಿಸಿದೆ.  ಯೋಜನೆಯಲ್ಲಿ ಮಾರ್ಚ್ 10 ರಂದು ಕೇಂದ್ರ ಸಚಿವ ಸಂಪುಟದಲ್ಲಿ ಅನುಮತಿಯನ್ನು ಪಡೆದಿತ್ತು.

ಏನಿದು ಯೋಜನೆ:

ಕೇಂದ್ರ ಸರ್ಕಾರವು ದೇಶದ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ)  ಕುಟುಂಬಗಳಿಗೆ ಉಚಿತ ಎಲ್.ಪಿ.ಜಿ. ಸಂಪರ್ಕ ಯೋಜನೆಯನ್ನು ಜಾರಿಗೊಳಿಸಿದೆ. ಹೊಗೆ ಆವರಿಸಿದ ಮನೆಗಳಲ್ಲಿ ಬಡ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಹದಗೆಡುತ್ತಿರುವದನ್ನು ತಪ್ಪಿಸಲು ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ 5 ಸಾವಿರ ಬಿ.ಪಿ.ಎಲ್ ಕುಟುಂಬಗಳಿಗೆ ಉಚಿತ ಎಲ್.ಪಿ.ಜಿ ಸಂಪರ್ಕ ನೀಡಲಾಗುತ್ತಿದೆ.

ಉದ್ಘಾಟನೆ:

ಪ್ರದಾನ ಮಂತ್ರಿ ಉಜ್ವಲ ಯೋಜನೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ದಿನಾಂಕ: 01.05.2016 ರ ಭಾನುವಾರ ದಂದು ಉದ್ಘಾಟಿಸಿದರು. ಈ ಯೋಜನೆಯಡಿ ಮೊದಲ ವರ್ಷ 1.5 ಕೋಟಿ ಮಹಿಳೆಯರಿಗೆ ಸಂಪರ್ಕ ಒದಗಿಸಲಾಗುತ್ತಿದ್ದು, ಇನ್ನೂಳಿದ ಕುಟುಂಬಗಳಿಗೆ ಮೂರು ವರ್ಷಗಳಲ್ಲಿ ಸಂಪರ್ಕ ಕಲ್ಪಿಸಲು ಗುರಿ ಹಾಕಿಕೊಳ್ಳಲಾಗಿದೆ.

ಫಲಾನುಭವಿಗಳ ಆಯ್ಕೆ:

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರದ ಜೊತೆ ಸಮಾಲೂಚಿಸಿ ಫಲಾನುಭವಿಗಳನ್ನು ಆಯ್ಕ ಮಾಡಲಾಗುವುದು.

ಕಿಟ್ ವಿತರಣೆ ಮತ್ತುಇಎಂಐ ಸೌಲಭ್ಯ:

ಈ ಯೋಜನೆಯಡಿ ಫಲಾನುಭವಿಗೆ ಪ್ರಶರ್ ರೆಗ್ಯುಲೇಟರ್, ಸುರಕ್ಷಾ ಕಿಟ್ ಮತ್ತು ಖಾತೆಯ ಪುಸ್ತಕ ವನ್ನು ಉಚಿತವಾಗಿ ನೀಡಲಾಗುತ್ತದೆ.

ಆದರೆ, ಗ್ಯಾಸ್ ಸ್ಟೌವ ಮತ್ತು ಸಿಲಿಂಡರ್ ಖರೀದಿಗೆ ರೂ 1600 ಗಳ ಹಣಕಾಸು ನೇರವನ್ನು ಇಎಂಐ ರೂಪದಲ್ಲಿ ನಿಡಲಾಗುತ್ತದೆ.

 

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: