BRICS BANK

ಬ್ರಿಕ್ಸ್ ಬ್ಯಾಂಕ್: (BRICS)

ಪರಿಚಯ:

ಬ್ರಿಕ್ಸ್ ಇದು ಒಂದು ಸ್ವತಂತ್ರ ಅಭಿವೃದ್ಧಿಶೀಲ ರಾಷ್ಟ್ರಗಳ ಒಕ್ಕೂಟ ಆಗಿದೆ. ಇದು ಆರಂಭದಲ್ಲಿ 5 ರಾಷ್ಟ್ರಗಳ ಬ್ರಿಕ್ ಒಕ್ಕೂಟವಾಗಿತ್ತು, 2010 ರಲ್ಲಿ ದಕ್ಷಿಣ ಆಪ್ರಿಕಾ ಈ ಗುಂಪಿಗೆ ಸೇರಿದ ನಂತರ ಇದು ಬ್ರಿಕ್ಸ್ ಆಗಿ ಬದಲಾವಣೆ ಆಯಿತು. 2006 ರ ಸಪ್ಟಂಬರ್ ನ ನ್ಯೂಯಾರ್ಕ ನಲ್ಲಿ ಇದರ ಮೊದಲ ಸಭೆ ನಡೆಯಿತು. ಬಳಿಕ 2009 ರ ಜೂನ್ 16 ರಂದು ರಷ್ಯಾದಲ್ಲಿ ಮೊದಲ ಅನೌಪಚಾರಿಕ ಸಭೆ ನಡೆಯಿತು. ಈ ಸಭೆಯಲ್ಲಿ ಜಾಗತಿಕ ಆರ್ಥಿಕ ಸ್ಥಿತಿಗತಿ ಮತ್ತು ಆರ್ಥಿಕ ಸಂಸ್ಥೆಗಳ ಕುರಿತಾದ ಚರ್ಚೆ ನಡೆಯಿತು.

ಬ್ರಿಕ್ಸ್ ಒಕ್ಕೂಟದ ರಾಷ್ಟ್ರಗಳು:

1.ಬ್ರೆಜಿಲ್, 2.ರಷ್ಯಾ, 3.ಇಂಡಿಯಾ, 4. ಚೀನಾ ಮತ್ತು5. ದಕ್ಷಿಣ ಆಪ್ರಿಕಾ ದೇಶಗಳು. ಈ ದೇಶಗಳ ಮೊದಲ ಅಕ್ಷರಗಳನ್ನು ಸೇರಿಸಿ ಈ ಒಕ್ಕೂಟಕ್ಕೆ ಬ್ರಿಕ್ಸ್ ಎಂದು ಹೆಸರು ಇಡಲಾಯಿತು. ವಿಶ್ವದ ಜನಸಂಖ್ಯೆಯ 42% ಜನಸಂಖ್ಯೆಯು ಬ್ರಿಕ್ಸ್ ರಾಷ್ಟ್ರಗಳಲ್ಲಿ ವಾಸಿಸುತ್ತದೆ. ಜಗತ್ತಿನ ವ್ಯಾಪಾರ ವಾಹಿವಾಟಿನಲ್ಲಿ ಈ ರಾಷಟ್ರಗಳ ಪಾಲು 17% ಇದೆ. ವಿಶ್ವದ ಜಿಡಿಪಿ ಯಲ್ಲಿ ಈ ದೇಶಗಳ ಪಾಲು 20% ಇದೆ. ಪ್ರಪಂಚದ ಬಂಡವಾಳ ಹೋಡಿಕೆಯಲ್ಲಿ ಈ ರಾಷ್ಟ್ರಗಳ ಪಾಲು 11% ಇದೆ.

ಬ್ರಿಕ್ಸ್ ಬ್ಯಾಂಕ್:

ಇದು ಬ್ರಿಕ್ಸ್  ರಾಷ್ಟ್ರಗಳ ಉದ್ದೇಶಿತ ಜಂಜಿ ಅಭಿವೃದ್ಧಿ ಬ್ಯಾಂಕ ಆಗಿದೆ. ಈ ಬ್ಯಾಂಕನ್ನು ಸ್ಥಾಪಿಸಲು 2013ರ ಮಾರ್ಚ್ 27 ರಂದು ನಡೆದ ಬ್ರಿಕ್ಸ್ ಸಮಾವೇಶದಲ್ಲಿ ತೀರ್ಮಾನಿಸಲಾಯಿತು. ಇದನ್ನು “ಬ್ರಿಕ್ಸ್ ನ್ಯೂ ಡೆವಲಪ್ ಮೆಂಟ್” BRICS NEW DEVELOPMENT BANK” (NDB) ಬ್ಯಾಂಕ್ ಎಂದು ಹೆಸರಿಸಲು ತಿರ್ಮಾನಿಸಲಾಯಿತು. ಈ ಬ್ಯಾಂಕ್ ನ್ನು ರಚಿಸಲು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷೀಣ ಕೋರಿಯಾ ಗಳು 2014 ಜುಲೈ 15 ರಂದು ಸಹಿ ಹಾಕಿದವು. ಇದರ ರಾಷ್ಟ್ರಗಳ ಬಂಡವಾಳವು ಶೇ 55% ಕ್ಕಂತ ಕಡಿಮೆ ಆಗುವಂತಿಲ್ಲ. ಈ ಬ್ಯಾಂಕ್ ಅಧಿಕೃತವಾಗಿ 2016 ರಿಂದ ಕಾರ್ಯಾರಂಭ ಮಾಡಲಿದೆ.

ಬ್ಯಾಂಕ್ ನಿಧಿ:

ಇದು 100 ಶತಕೋಟಿ ರೂಪಾಯಿಗಳನ್ನು ಹೊಂದಿದೆ. ಇದರಲ್ಲಿ ಭಾರತ, ಬ್ರೇಜಿಲ್ ಮತ್ತು ರಷ್ಯಾ ತಲಾ 18 ತಲಾ 18 ಬಿಲಿಯನ್ ಡಾಲರ್, ಚೀನಾ 41 ಮಿಲಿಯನ್ ಡಾಲರ್ ಮತ್ತು ದಕ್ಷಿಣ ಆಪ್ರಿಕಾ 5 ಬಿಲಿಯನ್ ಡಾಲರ್ ಪಾವತಿ ಮಾಡಬೇಕಾಗುತ್ತದೆ. ಇದು ಮೊದಲ ಬಾರಿಗೆ ಭಾರತಕ್ಕೆ 4 ವಿಧದ ಯೋಜನೆಗಳಿಗೆ ಯೋಜನೆಗಳಿಗಾಗಿ ಸಾಲ ನೀಡಿದೆ.

ಬ್ಯಾಂಕಿನ ಸ್ವರೂಪ: ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ

ಪ್ರಧಾನ ಕಛೇರಿ: ಶಾಂಘೈ, ಚೀನಾ

ಅಧ್ಯಕ್ಷರು:

ಭಾರತದ ಕೆ.ವಿ.ಕಾಮತ್ ಇವರು ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಅಧ್ಯಕ್ಷರ ಅಧಿಕಾರ ಅವಧಿಯು 6 ವರ್ಷಗಳ ವರೆಗೆ ಇರುತ್ತದೆ. ಇವರ ನಂತರ ಕ್ರಮವಾಗಿ ಬ್ರೇಜಿಲ್, ರಷ್ಯಾ ಮತ್ತು ಚೀನಾಗೆ ಅಧಿಕಾರ ಪ್ರಾಪ್ತವಾಗಲಿದೆ.

ಇದರ ಗುರಿಗಳು:

ಮೂಲ ಸೌಕರ್ಯ ಯೋಜನೆಗಳಿಗೆ ಹಣಕಾಸಿನ ನೆರವು ನೀಡುವುದು ಮತ್ತು 100 ಶತಕೋಟಿ ಡಾಲರ್ ಮೊತ್ತದ “ಸಮೂಹ ಕಾಪು ವ್ಯವಸ್ಥೆ” (ಸಿಆರ್ ಎ) ರಚನೆ ಇದರ ಉದ್ದೇಶವಾಗಿದೆ. ಭವಿಷ್ಐದಲ್ಲಿ ಹಣಕಾಸಿನ ಬಿಕ್ಕಟ್ಟನ್ನು ಎದುರಿಸಲು ಸದಸ್ಯ ರಾಷ್ಟ್ರಗಳಿಗೆ ಸಿಆರ್ ಎ ನೆರವಾಗಲಿದೆ. ಇದರೊಂದಿಗೆ ಮೂಲಸೌಕರ್ಯ ಮತ್ತು ಊರ್ಜಿತ ಅಭಿವೃದ್ಧಿ ಯೋಜನೆಗಳಿಗೆ ಸಂಪನ್ಮೂಲ ಸಂಗ್ರಹಿಸುವುದು ಇದರ ಕೆಲಸವಾಗಿದೆ. ಇಲ್ಲಿಯವರೆಗೆ 6 ಶೃಂಗ ಸಭೆಗಳು ನಡೆದಿವೆ.

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: