Mid Day Meal (MDM)

ಮಧ್ಯಾಹ್ನಉಪಹಾರ ಯೋಜನೆ:

ಪರಿಚಯ:

ಕರ್ನಾಟಕ ರಾಜ್ಯದ ಮಧ್ಯಾಹ್ನದ ಉಪಹಾರ ಯೋಜನೆ ಕಾರ್ಯಕ್ರಮ 2002-03ನೇ ಸಾಲಿನಲ್ಲಿ ಮೊದಲ ಹಂತದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಈಶಾನ್ಯ ವಲಯದ ಏಳು ಜಿಲ್ಲೆಗಳಲ್ಲಿ  ಸರ್ಕಾರಿ ಶಾಲೆಗಳ 1 ರಿಂದ 5 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ಪ್ರಾರಂಭಿಸಲಾಯಿತು.

  • 2003-04 ನೇ ಸಾಲಿನಿಂದ ಉಳಿದ 20 ಜಿಲ್ಲೆಗಳಿಗೂ ವಿಸ್ತರಿಸಲಾಯಿತು.
  • ದಿನಾಂಕ 01-09-2004 ರಿಂದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ವಿಸ್ತರಿಸಲಾಯಿತು.
  • ದಿನಾಂಕ 01-10-2004 ರಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ 6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ.
  • 2007-08ನೇ ಸಾಲಿನಿಂದ ಯೋಜನೆಯನ್ನು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಿಗೂ ವಿಸ್ತರಿಸಲಾಯಿತು. ಇದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳೆಲ್ಲರಿಗೂ ಮಧ್ಯಾಹ್ನ ಉಪಹಾರವನ್ನು ಒದಗಿಸಲಾಯಿತು. 1 ರಿಂದ 8ನೇ ತರಗತಿಯವರೆಗೆ ಕೇಂದ್ರ ಸರ್ಕಾರದಿಂದ ಹಾಗೂ 9 ಮತ್ತು 10 ನೇ ತರಗತಿಗಳಿಗೆ ರಾಜ್ಯ ಸರ್ಕಾರದ ನೆರವಿನಿಂದ ಮಧ್ಯಾಹ್ನ ಬಿಸಿಯೂಟವನ್ನು ಒದಗಿಸಲಾಯಿತು.
  • ದಿನಾಂಕ:01-08-2013ರಿಂಧ 1-10ನೇ ತರಗತಿಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ಪ್ರತೀ ವಿದ್ಯಾರ್ಥಿಗೂ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಎಂ.ಎಲ್. ಹಾಲನ್ನು ನೀಡಲಾಗುತ್ತಿದೆ.

ಉದ್ದೇಶಗಳು

  • ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸುವುದು.
  • ಶೈಕ್ಷಣಿಕ ವರ್ಷದಲ್ಲಿ ಮಧ್ಯೆ ಮಧ್ಯೆ ಶಾಲೆಯನ್ನು ತೊರೆಯದಂತೆ ತಡೆಯುವುದು.
  • ಪೌಷ್ಠಿಕಾಂಶ ಹೆಚ್ಚಿಸುವುದರ ಮೂಲಕ ಶಾಲಾ ಮಕ್ಕಳ ಆರೋಗ್ಯವನ್ನು ಅಭಿವೃದ್ಧಿಗೊಳಿಸುವುದು.
  • ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು.
  • ಸಾಮಾಜಿಕ ಸಮಾನತೆಯನ್ನು ಅಭಿವೃದ್ಧಿ ಪಡಿಸಿ ತನ್ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಮಕ್ಕಳಲ್ಲಿ ಮೂಡಿಸುವುದು.
  • ಬರಪೀಡಿತ ಪ್ರದೇಶಗಳಿಗೆ ಬೇಸಿಗೆ ರಜೆ ಅವಧಿಯಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯನ್ನು ನೀಡಲಾಗುತ್ತಿದೆ.

ಅನುಷ್ಠಾನದ ಜವಾಬ್ದಾರಿ

ಶಾಲಾ ಹಂತದಲ್ಲಿ ಎಸ್.ಡಿ.ಎಂ.ಸಿ.,ಯವರು ಹಾಗೂ ಮುಖ್ಯ ಅಡುಗೆಯವರು ಕಾರ್ಯಕ್ರಮದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರ  ನಿರ್ದೇಶನ ಹಾಗೂ ಮಾರ್ಗದರ್ಶಿ  ಸೂಚನೆಯಂತೆ ತಾಯಿಯಂದಿರ ಸಮಿತಿಯನ್ನು ಶಾಲೆಗಳಲ್ಲಿ ರಚಿಸಲಾಗಿದ್ದು, ಪ್ರತಿ ದಿನವೂ ಒಬ್ಬ  ವಿದ್ಯಾರ್ಥಿಯ ತಾಯಿ ಅಡುಗೆಯ ಮೇಲ್ವಿಚಾರಣೆ  ಹಾಗೂ ಊಟದ ರುಚಿ ನೋಡಿ ಬಡಿಸುವುದರಲ್ಲಿ  ಪಾಲ್ಗೊಳ್ಳುವುದರ ಮೂಲಕ ಮಕ್ಕಳು ತಮ್ಮ ಮನೆಯ ವಾತಾವರಣದಂತೆ  ಭಾವಿಸಿಕೊಂಡು ವರಾಂಡದಲ್ಲಿ/ಕೋಣೆಯಲ್ಲಿ ಕುಳ್ಳಿರಿಸಿ ಮುಖ್ಯ ಶಿಕ್ಷಕರು/ಶಿಕ್ಷಕರ ಉಸ್ತುವಾರಿ ಊಟ ನೀಡಲಾಗುತ್ತದೆ. ಊಟಕ್ಕೆ ಮುಂಚೆ ಶಿಕ್ಷಕರು ಕಡ್ಡಾಯವಾಗಿ  ರುಚಿ ನೋಡಿ, ರುಚಿ ಪುಸ್ತಕದಲ್ಲಿ ದಾಖಲಿಸಲಾಗುತ್ತಿದೆ. ಊಟಕ್ಕೆ ಮುಂಚೆ ಮತ್ತು ನಂತರ ಸೋಪು ಬಳಸಿ ಕೈ ತೊಳೆಯುವ ಉತ್ತಮ ಅಭ್ಯಾಸವನ್ನು ರೂಢಿಸಲಾಗಿದೆ. ಮುಖ್ಯ ಶಿಕ್ಷಕರು ಹಾಗೂ ತರಗತಿ ಶಿಕ್ಷಕರು/ದೈಹಿಕ ಶಿಕ್ಷಕರು /ಊಟದ ವೇಳೆಯಲ್ಲಿ ಕಡ್ಡಾಯವಾಗಿ ಊಟದ ವಿತರಣೆಯ ಉಸ್ತುವಾರಿ ವಹಿಸಿ, ಯಾವುದೇ ಸಮಸ್ಯೆಯಿಲ್ಲದಂತೆ ಮಕ್ಕಳು ಊಟ ಪಡೆಯುವಂತೆ ಕ್ರಮ ವಹಿಸುವುದು. ಅನುಪಯುಕ್ತ ಹಳೆಯ ವಸ್ತುಗಳನ್ನು ತೆಗೆದು ಹಾಕುವುದು. ಕಾರ್ಯಕ್ರಮದ ಬಗ್ಗೆ ನಿರಂತರ ಗಮನ ಹರಿಸುವುದು. ಅಡುಗೆಯವರು ಅಡುಗೆ ತಯಾರಿಸುವ ಹಾಗೂ ಬಡಿಸುವಾಗ ಏಪ್ರಾನ್ ಬಳಸುವುದು. ನೀರು ಹಾಗೂ ಆಹಾರ ಧಾನ್ಯ , ತರಕಾರಿಗಳ ಸ್ವಚ್ಛತೆ ಬಗ್ಗೆ ನಿಗಾ ವಹಿಸುವುದು. ಶಾಲಾ ಎಸ್.ಡಿ. ಎಂ.ಸಿ.,ಸಭೆಗಳಲ್ಲಿ ಅಕ್ಷರ ದಾಸೋಹ   ಕಾರ್ಯಕ್ರಮದ ಖರ್ಚು ವೆಚ್ಚದ ಬಗ್ಗೆ ಪರಿಶೀಲಿಸಿ, ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ವಿವರಗಳನ್ನು ದಾಖಲಿಸುತ್ತದೆ ಹಾಗೂ ಶಾಲೆಗೆ ಭೇಟಿ ನೀಡಿರುವ ಅಧಿಕಾರಿಗಳು ಕಡ್ಡಾಯವಾಗಿ ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನದ ಬಗ್ಗೆ ಪರಿಶೀಲಿಸಿ ವರದಿಯಲ್ಲಿ  ದಾಖಲಿಸಬೇಕಾಗಿರುತ್ತದೆ..

ತಾಲ್ಲೂಕು ಮಟ್ಟ:

ತಾಲ್ಲೂಕು ಮಟ್ಟದಲ್ಲಿ ಅಸಿಸ್ಟೆಂಟ್ ಕಮಿಷನರ್ ರವರ ನೇತೃತ್ವದಲ್ಲಿ ತಾಲ್ಲೂಕು ಪಂಚಾಯತ್ ನಲ್ಲಿ ಉಸ್ತುವಾರಿ ಹಾಗೂ ಪರಾಮರ್ಶ ಸಮಿತಿ ಇದ್ದು, ಪ್ರತೀ ತ್ರೈ ಮಾಸಿಕಕ್ಕೊಮ್ಮೆ ಸಭೆ ನಡೆಸಲಾಗುತ್ತದೆ. ಜೊತೆಗೆ ಕಾರ್ಯಕ್ರಮದ ಅನುಷ್ಠಾನ ಹಾಗೂ ಮೇಲುಸ್ತುವಾರಿಯನ್ನು ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಗಳು ನಿರ್ವಹಿಸುತ್ತಿದ್ದಾರೆ. ತಾಲ್ಲೂಕು  ಕಾರ್ಯ ನಿರ್ವಹಣಾಧಿಕಾರಿಗಳ ಅಧೀನದಲ್ಲಿ ಸಹಾಯಕ ನಿರ್ದೇಶಕರು (ಅಕ್ಷರ ದಾಸೋಹ) ಕಾರ್ಯಕ್ರಮದ ಅನುಷ್ಠಾನದಲ್ಲಿ  ನೆರವಾಗಲು ಕಾರ್ಯನಿರ್ವಹಿತ್ತಿದ್ದಾರೆ.
ಕ್ಷೇತ್ರಶಿಕ್ಷಣಾಧಿಕಾರಿಗಳು ಎಲ್ಲಾ ಶಾಲೆಗಳಿಂದಲೂ ಫಲಾನುಭವಿ ಮಕ್ಕಳ ಸಂಖ್ಯೆಗನುಗುಣವಾಗಿ ಬೇಡಿಕೆ ಮತ್ತು ಉಪಯೋಗಿತಾ ಪ್ರಮಾಣ ಪತ್ರವನ್ನು ಸಂಗ್ರಹಿಸಿ ಕ್ರೋಢೀಕರಿಸಿ, ಜಿಲ್ಲಾ ಉಪನಿರ್ದೇಶಕರು(ಆಡಳಿತ) ಇವರಿಗೆ ತಲುಪಿಸುವುದು. ಅವರು ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಸಹಾಯ ಪಡೆದುಕೊಂಡು ಶಾಲಾ ಮಕ್ಕಳ ದಾಖಲಾತಿ, ಹಾಜರಾತಿ ಮತ್ತು ಫಲಾನುಭವಿಗಳ ವಿವರವಾದ ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರಿಗೆ ತಲುಪಿಸುವುದು. ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯಿಂದ ಪಡೆದುಕೊಂಡ ಮಾತ್ರೆಗಳನ್ನು ಸಿ.ಆರ್.ಪಿ. ಗಳ ಮೂಲಕ ಶಾಲಾ ಮಕ್ಕಳಿಗೆ ವಿತರಿಸಬೇಕು.

ಕ್ಷೇತ್ರಶಿಕ್ಷಣಾಧಿಕಾರಿಗಳು ತಾಲ್ಲೂಕು ಪಂಚಾಯತ್  ಕಾರ್ಯನಿರ್ವಾಹಣಾಧಿಕಾರಿಗಳು, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್, ಎಸ್. ಡಿ. ಎಂ. ಸಿ. ಹಾಗೂ ಶಾಲಾ ಮುಖ್ಯಶಿಕ್ಷಕರರುಗಳೊಂದಿಗೆ ಉತ್ತಮ ಹೊಂದಾಣಿಕೆಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಬಿ.ಆರ್.ಸಿ.,ಇ.ಸಿ.ಒ./ ಸಿ.ಆರ್.ಪಿ. ಇವರ ಸೇವೆಯನ್ನು ಕಾರ್ಯಕ್ರಮಕ್ಕೆ ಉಪಯೋಗಿಸಿ ಕೊಳ್ಳಬೇಕಾಗುತ್ತದೆ

ಜಿಲ್ಲಾ ಮಟ್ಟ:

ಜಿಲ್ಲಾಧಿಕಾರಿಗಳ/ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಚಾಲನಾ ಮತ್ತು ಪರಾಮರ್ಶನ ಸಮಿತಿ ಇದ್ದು, ಪ್ರತೀ ತ್ರೈ ಮಾಸಿಕಕ್ಕೊಮ್ಮೆ ಸಭೆ ನಡೆಸಲಾಗುತ್ತದೆ ಹಾಗೂ ಇದರಿಂದ ಕಾರ್ಯಕ್ರಮದ ಅನುಷ್ಠಾನ ಮತ್ತು ಮೇಲ್ವಿಚಾರಣೆಯನ್ನು ನಿರ್ವಹಿಸಲಾಗುತ್ತಿದೆ.

ಜಿಲ್ಲಾ  ಮಟ್ಟದಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮಕ್ಕೆ ಉಪನಿರ್ದೇಶಕರು ಸಹಕಾರ ನೀಡಬೇಕು. ಇವರು ಜಿಲ್ಲೆ ಮತ್ತು ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು. ಆಹಾರ ಸಾಮಗ್ರಿಗಳು ಹಾಗೂ ಅನುದಾನದ ಉಪಯೋಗಿತ ಪ್ರಮಾಣ ಪತ್ರಗಳನ್ನು ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ಸಂಗ್ರಹಿಸಿ, ಕ್ರೋಢೀಕರಿಸಿ, ರಾಜ್ಯ ಅನುದಾನದ ಯೋಜನೆ ಕೇಂದ್ರ ಕಛೇರಿಯ ಜಂಟಿ ನಿರ್ದೇಶಕರಿಗೆ ತಲುಪಿಸಬೇಕು. ಅಡುಗೆ ಕೋಣೆ ನಿರ್ಮಾಣ ಹಾಗೂ ಪ್ರಗತಿಯನ್ನು ಪರಿಶೀಲಿಸಬೇಕು. ಅಗ್ನಿನಂದಕ ಅಳವಡಿಕೆ ಬಗ್ಗೆ ಗಮನಹರಿಸಿ ಕಡ್ಡಾಯವಾಗಿ ಎಲ್ಲಾ ಸರ್ಕಾರಿ,ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲೂ ಅಳವಡಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು.

ರಾಜ್ಯ ಮಟ್ಟ

ರಾಜ್ಯ ಮಟ್ಟದಲ್ಲಿ ಚಾಲನಾ ಮತ್ತು ಪರಾಮರ್ಶ ಸಮಿತಿ, ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದು, ಸದರಿ ಸಭೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ.

ಸೂಚಿತ ಆಹಾರ ಪಟ್ಟಿ

ವಿದ್ಯಾರ್ಥಿಗಳಿಗೆ ವಾರದಲ್ಲಿ ಈ ಕೆಳಕಂಡಂತೆ ಆಹಾರವನ್ನು ತಯಾರಿಸಿ ನೀಡಲು ಸೂಚಿಸಲಾಗಿದೆ.

ವಾರ/ದಿನ

ನಿಗದಿ ಪಡಿಸಿರುವ ಆಹಾರದ ವಿವರ

ಸಾಂಬಾರಿಗೆ ಬಳಸಬೇಕಾದ
ತರಕಾರಿ

ಷರಾ

ಸೋಮವಾರ ಅನ್ನ-ಸಾಂಬಾರ್ ಪಾಲಕ್, ನುಗ್ಗೆ ಸೊಪ್ಪು ಅಥವಾ ಇತರೆ ಸೊಪ್ಪು,ಆಲೂಗೆಡ್ಡೆ, ಬದನೆಕಾಯಿ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು ಬೇಳೆ/ಕಾಳನ್ನು ಕಡ್ಡಾಯಗೊಳಿಸಿದೆ.
ಈ ತರಕಾರಿಗಳೊಂದಿಗೆ ಸ್ಥಳೀಯ ಆಹಾರ ಪದ್ಧತಿಯನ್ವಯ ಸ್ಥಳೀಯವಾಗಿ ಬೆಳೆಯುವ ಇತರೆ ತರಕಾರಿ/ ಗೆಡ್ಡೆ/ಗೆಣಸುಗಳನ್ನು ಬಳಸುವುದು.
ಸ್ಥಳೀಯವಾಗಿ ಆಹಾರ ಪದ್ಧತಿಯನ್ವಯವೇ ತರಕಾರಿಗಳನ್ನು ಮತ್ತು ಸಾಂಬಾರು ಪದಾರ್ಥಗಳನ್ನು ಹೊಂದಾಣಿಕೆ ಮಾಡಿಕೊಂಡು ಆಹಾರ ಸಿದ್ಧಪಡಿಸುವುದು.
ಸಿದ್ಧ ಪಡಿಸಿದ ಸಾಂಬಾರು ಪದಾರ್ಥ/ಪುಡಿಗಳನ್ನು ಆಗ್ ಮಾರ್ಕ್ ಮುದ್ರೆ/ಪ್ರಮಾಣ ಪತ್ರ ಹೊಂದಿರುವ ತಯಾರಕರಿಂದ ತಯಾರಿಸಿದ ಪದಾರ್ಥಗಳನ್ನು ಮಾತ್ರ ಬಳಸುವುದು ಅಥವಾ ಉತ್ತಮ ಸಾಮಗ್ರಿಗಳನ್ನು ಬಳಸಿ ಸ್ವಂತವಾಗಿ ತಯಾರಿಸಿ ಬಳಸುವುದು.
ಸ್ಥಳೀಯ ಹವಾಮಾನ /ವಾತಾವರಣಕ್ಕೆ ಅನುಗುಣವಾಗಿ ತರಕಾರಿ ಮತ್ತು ಸಾಂಬಾರು ಪದಾರ್ಥಗಳನ್ನು ಬಳಸುವುದು.
ಮಂಗಳವಾರ ಅನ್ನ-ಸಾಂಬಾರ್ ಬೂದುಕುಂಬಳ,ಕ್ಯಾರೆಟ್,ಬೀನ್ಸ್,ಎಲೆಕೋಸು, ಬೀಟ್ರೂಟ್,ಆಲೂಗೆಡ್ಡೆ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು
ಬುಧವಾರ ಅನ್ನ-ಸಾಂಬಾರ್ ನುಗ್ಗೆಕಾಯಿ,ಬೀನ್ಸ್ಆಲೂಗೆಡ್ಡೆ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು
ಗುರುವಾರ ಅನ್ನ-ಸಾಂಬಾರ್ ಕುಂಬಳಕಾಯಿ,ಸೋರೆಕಾಯಿ, ಸಾಂಬಾರುಸೌತೆ,ಬೆಂಡೆಕಾಯಿ,ಹೀರೆಕಾಯಿ,ಮೂಲಂಗಿ,ಇತರೆ ತರಕಾರಿಗಳು
ಶುಕ್ರವಾರ/
ಭಾನುವಾರ
ಬಿಸಿಬೇಳೆ ಬಾತ್ ಬೀನ್ಸ್,ಗೆಡ್ಡೆಕೋಸು,ಕ್ಯಾರೆಟ್, ಕ್ಯಾಪ್ಸಿಕಮ್,ಈರುಳ್ಳಿ ಟೊಮೆಟೋ ಇತರೆ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳು
ಶನಿವಾರ ಗೋಧಿ ಉತ್ಪನ್ನಗಳಿಂದ ತಯಾರಿಸಿದ ಆಹಾರ ಈರುಳ್ಳಿ, ಬೀನ್ಸ್, ಕ್ಯಾರೆಟ್, ಎಲೆಕೋಸು ಸಬ್ಬಸ್ಸಿಗೆ ಸೊಪ್ಪು ಮತ್ತು ಇತರೆ ದ್ವಿದಳ ಧಾನ್ಯಗಳು

ಪೌಷ್ಠಿಕಾಂಶದ ವಿವರ:

ಮಧ್ಯಾಹ್ನ ಬಿಸಿಯೂಟ ನೀಡುವುದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 491 (ಅಂದಾಜು) ಕ್ಯಾಲೋರಿ ಹಾಗೂ 13.80 ಗ್ರಾಂ ಪ್ರೋಟೀನನ್ನು, ಉನ್ನತ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 728 (ಅಂದಾಜು) ಕ್ಯಾಲೋರಿ ಮತ್ತು 21 ಗ್ರಾಂ. ಪೋಟೀನನ್ನು ಒಳಗೊಂಡಂತೆ ಪೌಷ್ಠಿಕಾಂಶ ದೊರೆಯುತ್ತಿದೆ.

ಅಡುಗೆ ಸಿಬ್ಬಂದಿ ವಿವರ:

ಒಟ್ಟು ಕೇಂದ್ರ ಸರ್ಕಾರದಿಂದ  1,17,842 ಅಡುಗೆ ಸಿಬ್ಬಂದಿ ನೇಮಕಕ್ಕೆ ಅನುಮತಿ ದೊರೆತಿದ್ದು, ಪ್ರಸ್ತುತ 1,18,842 ಅಡುಗೆಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ಅಡುಗೆಯವರನ್ನು ಎನ್.ಜಿ.ಓ ನೀಡುತ್ತಿರುವ ಶಾಲೆಗಳಿಗೆ ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳಲು ಆದೇಶ ನೀಡಲಾಗಿದೆ.
ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರಿಗೆ ಗೌರವಧನನ್ನು ಮುಖ್ಯ ಅಡುಗೆಯವರಿಗೆ ರೂ.1100/- ಮತ್ತು ಸಹಾಯಕರಿಗೆ ರೂ.1000/- ಗಳನ್ನು ನಿಗದಿಪಡಿಸಲಾಗಿತ್ತು.

  • ಕೇಂದ್ರ ಸರ್ಕಾರ ದಿನಾಂಕ:1-12-2009 ರಿಂದ ಅಡುಗೆ ತಯಾರಿಕೆಗೆ ಸಂಭಾವನೆಯನ್ನು ತಿಂಗಳಿಗೆ ರೂ.1000/- ದಂತೆ ನಿಗದಿಗೊಳಿಸಿದೆ. ಸದರಿ ಸಂಭಾವನೆಯನ್ನು ಕೇಂದ್ರ ಸರ್ಕಾರ ಶೇ.75, ರಾಜ್ಯ ಸರ್ಕಾರ ಶೇ.25ರ ಆಧಾರದಲ್ಲಿ ಪಾವತಿಸುತ್ತಿದೆ. ಮುಖ್ಯ ಅಡುಗೆಯವರಿಗೆ ಹೆಚ್ಚುವರಿಯಾಗಿ ರೂ.100/- ಗಳನ್ನು ರಾಜ್ಯ ಸರ್ಕಾರವು ಭರಿಸುತ್ತಿದೆ. ಕ್ಷೀರಭಾಗ್ಯ ಯೋಜನೆಯಡಿ ಮಾಸಿಕ ರೂ.100/- ಪ್ರತೀ ಅಡುಗೆ ಸಿಬ್ಬಂದಿಗೆ ನೀಡಲಾಗುತ್ತಿದೆ.
  • ದಿನಾಂಕ:1-1-2014 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರವು ಅಡುಗೆಯವರ ಗೌರವ ಸಂಭಾವನೆಯನ್ನು ರೂ.500/- ಗಳನ್ನು ಹೆಚ್ಚಿಸಿದ್ದು, ಪ್ರಸ್ತುತ ಮುಖ್ಯ ಅಡುಗೆಯವರಿಗೆ ಮಾಸಿಕ ರೂ.1700/- ಹಾಗೂ ಸಹಾಯಕ ಅಡುಗೆಯವರಿಗೆ ರೂ.1600/- ಗಳನ್ನು ನೀಡಲಾಗುತ್ತಿದೆ.
  • ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರಿಗೆ ಅಡುಗೆ ತಯಾರಿಸುವ ಸಂದರ್ಭದಲ್ಲಿ ಸುಟ್ಟಗಾಯಗಳಾದಲ್ಲಿ ರೂ.30,000/- ಗಳನ್ನು, ಅಂಗವಿಕಲತೆ ಉಂಟಾದಲ್ಲಿ ರೂ.75,000/- ಗಳನ್ನು ಮತ್ತು ಸುಟ್ಟಗಾಯಗಳಾಗಿ ಮರಣ ಹೊಂದಿದರೆ ರೂ.1.00 ಲಕ್ಷ ಪರಿಹಾರ ನೀಡಲಾಗುತ್ತಿದೆ.

ಅಡುಗೆ ಕೇಂದ್ರಗಳ ವಿವರ

ಈ ಕೆಳಕಂಡಂತೆ ಅಡುಗೆ ಕೇಂದ್ರಗಳನ್ನು ವರ್ಗೀಕರಿಸಲಾಗಿದೆ.

ಕ್ರ. ಸಂ. ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ವಿಭಾಗ
ಮಕ್ಕಳಸಂಖ್ಕೆ ಕೇಂದ್ರದ ಮಾದರಿ ಅಡುಗೆಯವರ ಸಂಖ್ಯೆ
1 1 ರಿಂದ 25 ರವರೆಗೆ 1
2 26 ರಿಂದ 100 ರವರೆಗೆ ಬಿ 2
3 101 ರಿಂದ 200 ರವರೆಗೆ ಸಿ 3
4 201 ರಿಂದ 300 ರವರೆಗೆ ಡಿ 4
5 301 ರಿಂದ 500 ರವರೆಗೆ 5
6 501 ರಿಂದ 800 ರವರೆಗೆ ಎಫ್ 6
7 801 ರಿಂದ 1100 ರವರೆಗೆ ಜಿ 7
8 1101 ರಿಂದ 1400 ರವರೆಗೆ ಹೆಚ್ 8
9 1401 ರಿಂದ 1700 ರವರೆಗೆ 9
10 1701 ರಿಂದ 25 ಮೇಲ್ಪಟ್ಟು ಜೆ 10

ಅಡುಗೆಯವರ ಆಯ್ಕೆ:

ಆಯ್ಕೆ ಸಮಿತಿಯು ಈ ಕೆಳಕಂಡ ಅಂಶಗಳನ್ನು ಒಳಗೊಂಡಿದೆ.

  • ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಮುನ್ಸಿಪಾಲಿಟಿ/ಪಟ್ಟಣ ಕಾರ್ಪೋರೇಷನ್ ವಾರ್ಡ್ ನ ಸದಸ್ಯರು ಈ ಸಮಿತಿಯ ಅಧ್ಯಕ್ಷರಾಗಿರಬೇಕು.
  • ಎಸ್. ಡಿ. ಎಂ. ಸಿ. ಅಧ್ಯಕ್ಷರು-ಸದಸ್ಯರು,
  • ಶಾಲಾ ಮುಖ್ಯಸ್ಥರು-ಸದಸ್ಯರು.
  • ಪಟ್ಟಣ ಕಾರ್ಪೋರೇಷನ್ನಿನ ಮುಖ್ಯಾಧಿಕಾರಿ /ಮುನ್ಸಿಪಾಲಿಟಿಯ ಪ್ರಧಾನ ಕಾರ್ಯದರ್ಶಿ/ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಇವರಲ್ಲಿ ಯಾರಾದರೂ ಸಮಿತಿಯ ಕಾರ್ಯದರ್ಶಿಯಾಗಿರಬೇಕು.

ಸರ್ಕಾರಿ ಆದೇಶದಂತೆ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳು ಒಳಗೊಂಡಿರಬೇಕು.

  • ಗ್ರಾಮ ಪಂಚಾಯತಿಯ ಅಧ್ಯಕ್ಷರು/ಪಟ್ಟಣ ಕಾರ್ಪೋರೇಷನ್ನಿನ ವಾರ್ಡ್ ಸದಸ್ಯರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯ ಪ್ರಾಥಮಿಕ ಸಭೆಯು ನಡೆಯುವುದು.
  • ಒಂದು ಶಾಲೆಗಿಂತ ಹೆಚ್ಚಿನ ಶಾಲೆಗಳಲ್ಲಿ ಅಡುಗೆ ಕೇಂದ್ರ ತೆರೆಯಬೇಕಾದ ಸಂದರ್ಭದಲ್ಲಿ ಆಯಾ ಶಾಲಾ ಮುಖ್ಯಸ್ಥರು ಆ ಸಭೆಯ ವಿಶೇಷ ಆಹ್ವಾನಿತರಾಗಿರುವುದು.
  • ಈ ಸಭೆಯಲ್ಲಿ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕುರಿತು ಚರ್ಚಿಸುವುದು ಮತ್ತು ಅರ್ಜಿ ಅಹ್ವಾನಿಸುವ ಹಾಗೂ ನೇಮಕಾತಿಯ ದಿನಾಂಕಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು.
  • ಅರ್ಜಿಗಳನ್ನು ಆಹ್ವಾನಿಸುವ ಸಂದರ್ಭದಲ್ಲಿ ಸಭಾ ನಡಾವಳಿಯನ್ನು ಅನುಸರಿಸುವುದು.
  • ವಿದ್ಯಾರ್ಹತೆ, ಕಾಲಾವಧಿ ಮತ್ತು ಅಡುಗೆ ಸಿಬ್ಬಂದಿಯನ್ನು ನೇಮಕಾತಿ ಮಾಡಲು ನೀಡುವ ಸಂಭಾವನೆ ಕುರಿತಾದ ವಿವರಗಳನ್ನು ಗ್ರಾಮ ಪಂಚಾಯಿತಿಯು ಹತ್ತು ದಿನಗಳಿಗೆ ಮೊದಲೇ ಸೂಚನಾ ಫಲಕದಲ್ಲಿ ಸೂಚಿಸುವುದು.
  • ಮುಖ್ಯ ಅಡುಗೆಯವರೂ ಸೇರಿದಂತೆ ಉಳಿದ ಅಡುಗೆಯವರೆಲ್ಲರೂ ಮಹಿಳೆಯರಾಗಿರಬೇಕು.
  • ಮುಖ್ಯ ಅಡುಗೆಯವರ ವಿದ್ಯಾರ್ಹತೆ ಕನಿಷ್ಠ ಏಳನೇ ತರಗತಿ ತೇರ್ಗಡೆಯಾಗಿರಬೇಕು. ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯು ಅದೇ ಗ್ರಾಮಕ್ಕೆ ಸೇರಿದವರೆಂದು ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿಗಳಿಂದ ದೃಢೀಕರಿಸುವುದು.
  • ಅಡುಗೆ ಸಿಬ್ಬಂದಿ ಸಹಾಯಕರಿಗೆ ವಿದ್ಯಾರ್ಹತೆಯನ್ನು ನಿಗದಿ ಪಡಿಸಿರುವುದಿಲ್ಲ. ಆದರೆ ಅಕ್ಷರಸ್ಥರಿಗೆ ಆದ್ಯತೆ ನೀಡುವುದು.
  • ಮುಖ್ಯ ಅಡುಗೆಯವರು/ಅಡುಗೆಯವರನ್ನು ಆರಿಸುವಾಗ 30 ವರ್ಷ ವಯಸ್ಸಿನ ಹಾಗೂ ಅದೇ ಗ್ರಾಮಕ್ಕೆ ಸೇರಿದ ಮಹಿಳೆಯರಿಗೆ ಆದ್ಯತೆ ನೀಡುವುದು.
  • ಆಯ್ಕೆಯ ಸಂದರ್ಭದಲ್ಲಿ ವಿಧವೆಯರು ಹಾಗೂ ನೊಂದ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದು.
  • ಎ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪ.ಜಾ./ಪ.ಪಂ.ಕ್ಕೆ ಸೇರಿದವರನ್ನೇ ಆಯ್ಕೆ ಮಾಡಬೇಕು.
  • ಎ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು ಹಾಗೂ ಮತ್ತೊಬ್ಬರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.
  • ಬಿ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು, ಇನ್ನೊಬ್ಬರು ಹಿಂದುಳಿದ ವರ್ಗಕ್ಕೆ ಹಾಗೂ ಮತ್ತೊಬ್ಬರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿರಬೇಕು.
  • ಸಿ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು, ಇನ್ನೊಬ್ಬರು ಹಿಂದುಳಿದ ವರ್ಗಕ್ಕೆ ಮತ್ತು ಮತ್ತೊಬ್ಬರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದು, ನಾಲ್ಕನೆಯವರು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರಬೇಕು.
  • ಸರ್ಕಾರಕ್ಕೆ ಹೊರೆಯಾಗದಂತೆ ಆಯಾ ಮುನ್ಸಿಪಾಲಿಟಿ ಹಾಗೂ ಸಿಟಿ ಕಾರ್ಪೋರೇಷನ್ ವ್ಯಾಪ್ತಿಗೆ ಒಳಪಡುವ  ಸ್ಥಳೀಯ ದಿನಪತ್ರಿಕೆಗಳಲ್ಲಿ ಸಂಪೂರ್ಣ ವಿವರಗಳನ್ನು ಒಳಗೊಂಡ  ಉಚಿತ ಸಾರ್ವಜನಿಕ ಪತ್ರಿಕಾ ಪ್ರಕಟಣೆಯನ್ನು ನೀಡುವುದು. ಪ್ರಕಟಣೆಯು ಭಿತ್ತಿ ಪತ್ರ, ಕರ ಪತ್ರ ಹಾಗೂ ಪ್ಲೇ ಕಾರ್ಡ್ ಗಳ ಮೂಲಕವೇ ಇರಬೇಕು.ಸ್ಥಳೀಯವಾಗಿ ಪ್ರಕಟಿಸುವ ಸಂದರ್ಭದಲ್ಲಿ  ಸಂದರ್ಶನ ದಿನಾಂಕವನ್ನು ತಪ್ಪದೇ ತಿಳುಸುವುದು.
  • ಸಂದರ್ಶನಕ್ಕೆ ಬರುವ ಅಭ್ಯರ್ಥಿಗೆ ಯಾವುದೇ ಪ್ರಯಾಣ ಭತ್ಯೆಯನ್ನು ನೀಡಲಾಗುವುದಿಲ್ಲ.
  • ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ಅಂಕ  ಪಟ್ಟಿಯನ್ನು ಜೆರಾಕ್ಸ್ ದ್ವಿಪ್ರತಿಯಲ್ಲಿ, ಇತ್ತೀಚಿನ ಪಾಸ್ ಪೋರ್ಟ್  ಅಳತೆಯ ಎರಡು ಭಾವಚಿತ್ರಗಳನ್ನು ತರುವುದು.
  • ಆಯ್ಕೆ ಸಮಿತಿಯು ಸಂದರ್ಶನದ ವೇಳೆಯಲ್ಲಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿದ ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು.
  • ಸಭೆಯಲ್ಲಿ ತೀರ್ಮಾನಿಸಲಾದ ಸಭಾ ನಡಾವಳಿಗಳನ್ನು ದಾಖಲಿಸುವುದು. ಮೀಸಲಾತಿಯ ಪಟ್ಟಿಯನ್ನು ಸಭಾ ನಡಾವಳಿಯೊಂದಿಗೆ ಲಗತ್ತಿಸುವುದು. ಆದ್ಯತೆಯ ಮೇರೆಗೆ ಅಭ್ಯರ್ಥಿಗಳನ್ನು ನೇಮಕ ಮಾಡುವುದು. ಮುಖ್ಯ ಅಡುಗೆಯವರು ಯಾವುದೇ ವೈಯಕ್ತಿಕ ಕಾರಣಗಳಿಂದ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಆ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಬಹುದು.
  • ಮೇಲ್ಕಾಣಿಸಿದ ಎರಡು ಆಯ್ಕೆ ಪಟ್ಟಿಯನ್ನು ಅಂತಿಮ ಅನುಮೋದನೆಗಾಗಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಕಳುಹಿಸತಕ್ಕದ್ದು.
  • ಮೇಲ್ಕಾಣಿಸಿದ  ಮಾನದಂಡಗಳನ್ನು ಬಳಸಿ, ಪಾರದರ್ಶಕವಾಗಿ  ಆಯ್ಕೆ ಮಾಡುವುದು.
  • ಮಾರ್ಗಸೂಚಿಯಂತೆ ಆಯ್ಕೆ ಮಾಡದಿದ್ದಲ್ಲಿ, ಯಾವುದೇ ದೂರು ಬಂದಾಗ ಆಯ್ಕೆ ಪಟ್ಟಿಯನ್ನು ನಿರಾಕರಿಸುವ ಅಧಿಕಾರವನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ/ತತ್ಸಮಾನ ಅಧಿಕಾರಿಯವರಿಗೆ ನೀಡಲಾಗಿದೆ.

ಅಡುಗೆಯವರ ಸಂಭಾವನೆ:

ವರ್ಗ ಮಕ್ಕಳ ಸಂಖ್ಯೆ ಅಡುಗೆಯವರ ಸಂಖ್ಯೆ ಸಂಭಾವನೆ
ಎ-1 1-25 1 ಮು.ಅ.-ರೂ.1700/-ಅ.ಸಹಾಯಕರಿಗೆ-ರೂ.1600/-
26- 70 2
ಬಿ 71 – 300 3
ಸಿ 301 ಕ್ಕಿಂತ ಮೇಲ್ಪಟ್ಟು 4

 

ವರ್ಗ ಮಕ್ಕಳ ಸಂಖ್ಯೆ ಅಡುಗೆಯವರ ಸಂಖ್ಯೆ ಸಂಭಾವನೆ
ಹಿ.ಪ್ರಾ.ಕ್ಕೆ ಸೇರಿಸಿದಂತೆ 1 – 300 1 ಮು.ಅ.-ರೂ.1700/- ಅ.ಸಹಾಯಕರಿಗೆ-ರೂ.1600/-
301 – 500 4
ಬಿ 501 – 1000 5
ಸಿ 1001 ಕ್ಕೂ ಮೇಲ್ಪಟ್ಟು 6
  • ಅಡುಗೆ ಸಿಬ್ಬಂದಿಯ ಅಂತಿಮ ಆಯ್ಕೆ ಪಟ್ಟಿಯನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ/ತತ್ಸಮಾನ ಅಧಿಕಾರಿಯವರಿಂದ ಅನುಮೋದನೆ ಪಡೆಯುವುದು.
  • ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ/ತತ್ಸಮಾನ ಅಧಿಕಾರಿಯವರಿಂದ ಅನುಮೋದನೆ ಪಡೆದು, ಅಂತಿಮವಾಗಿ ಆಯ್ಕೆಯಾದ ಅಡುಗೆ ಸಿಬ್ಬಂದಿಗೆ  ಅನುಸೂಚಿ-ಇನಲ್ಲಿ ಸೂಚಿಸಿದಂತೆ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ/ತತ್ಸಮಾನ ಅಧಿಕಾರಿಯವರು ನೇಮಕಾತಿ ಆದೇಶವನ್ನು ನೀಡುವುದು.
  • ಆಯ್ಕೆಯಾದ ಅಡುಗೆ ಸಿಬ್ಬಂದಿಯು ಕರ್ತವ್ಯಕ್ಕೆ ಹಾಜರಾಗುವ ಮುನ್ನ ರೂ.10/- ಬಾಂಡ್ ಪೇಪರ್ ನಲ್ಲಿ ಅನುಸೂಚಿ-ಇ ನಲ್ಲಿ ತಿಳಿಸಿರುವಂತೆ ನಿಯಮ ನಿಬಂಧನೆಗಳಿಗೆ ಒಪ್ಪಿರುತ್ತೇನೆಂದು ಕರಾರು ಪತ್ರವನ್ನು ನೀಡುವುದು.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: