Janani Suraksha Yojana

ಜನನಿ ಸುರಕ್ಷಾ ಕಾರ್ಯಕ್ರಮ

ಜನನಿ -ಶಿಶು ಸುರಕ್ಷಾ ಕಾರ್ಯಕ್ರಮ

೨೦೧೧ ರ ಸೆಪ್ಟಂಬರ್ ೮ ರಂದು ಕರ್ನಾಟಕದಲ್ಲಿ ಈ ಯೋಜನೆ ಜಾರಿಯಾಗಿದೆ. ಈ ಯೋಜನೆ ಅನ್ವಯ ಸಾರ್ವಜನಿಕ ಸಂಸ್ಥೆಯಲ್ಲಿ ಹೆರಿಗೆಗೆ ಸಂಬಂದಿಸಿದ ಎಲ್ಲಾ ವೆಚ್ಚಗಳನ್ನು ಸರಕಾರವೇ ಭರಿಸುತ್ತದೆ ಮಾತ್ರವಲ್ಲ ಯಾವುದೇ ವಿಧದ ಸೇವಾ ಶುಲ್ಕಗಳನ್ನು ವಿಧಿಸುವುದಿಲ್ಲ. ಗರ್ಭಿನಿಗೆ ಮನೆಯಿಂದ ಸರಕಾರೀ ಆಸ್ಪತ್ರೆಗೆ ಹಾಗೂ ಗಂಭೀರ ಸಮಸ್ಯೆ ಇದ್ದಲ್ಲಿ ದೊಡ್ಡ ಆಸ್ಪತ್ರೆಗೆ ಸಾಗಿಸಲು ಉಚಿತವಾದ ಸಾರಿಗೆ ವ್ಯವಸ್ಥೆ ದೊರೆಯುತ್ತಿದೆ.

ಜನನಿ ಸುರಕ್ಷಾ ಯೋಜನೆ (ಜೆ ಎಸ್ ವೈ) ಜಾರಿಗೊಳಿಸಿದ ನಂತರ ದೇಶದಲ್ಲಿ ಸಾಂಸ್ಥಿಕ ಹೆರಿಗೆಗಳ ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಳವಾಗಿದೆ. ಆದರೂ, ಹೆಚ್ಚಿನ ಮಹಿಳೆಯರು ಇನ್ನೂ ವೈದ್ಯಕೀಯ ಸೇವೆಗಳನ್ನು ಪಡೆಯುವಲ್ಲಿ ಹಿಂಜರಿಯುತ್ತಿದ್ದಾರೆ. ಸಾಂಸ್ಥಿಕ ಹೆರಿಗೆಗೆ ಮುಂದೆ ಬಂಡ ಮಹಿಳೆಯರೂ ಸಹ ೪೮ ತಾಸುಗಳ ತನಕ ಆಸ್ಪತ್ರೆಗಳಲ್ಲಿ ಇರಲು ಇಷ್ಟಪಡುವುದಿಲ್ಲ. ಇದರ ಪರಿಣಾಮವಾಗಿ, ತಾಯಿ ಮತ್ತು ನವಜಾತ ಶಿಶುಗಳಿಗೆ ಸೂಕ್ತ ಸೇವೆಗಳನ್ನು ಒದಗಿಸುವುದು ಕಷ್ಟಕರ. ಪ್ರಸೂತಿಯಾದ ಮೊದಲ ೪೮ ಗಂಟೆಗಳಲ್ಲಿ ಶುಶ್ರೂಷೆ ಲಭಿಸಿದಲ್ಲಿ ಯಾವುದೇ ಸಮಸ್ಯೆ-ತೊಂದರೆಗಳನ್ನು ಗುರುತಿಸಿ ಯೋಗ್ಯ ಪರಿಹಾರ ನೀಡುವುದು ಸುಲಭ.

“ಜನನಿ – ಶಿಶು ಸುರಕ್ಷಾ ಕಾರ್ಯಕ್ರಮ” (ಜೆಎಸಎಸಕೆ ). ೨೦೧೧ ರ ಸೆಪ್ಟೆಂಬರ್ ೮ ರಂದು ಕರ್ನಾಟಕದಲ್ಲಿ ಈ ಯೋಜನೆ ಜಾರಿಯಾಗಿದೆ. ಈ ಯೋಜನೆ ಅನ್ವಯ ಸಾರ್ವಜನಿಕ ಸಂಸ್ಥೆಯಲ್ಲಿ ಹೆರಿಗೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಸರಕಾರವೇ ಭರಿಸುತ್ತದೆ ಮಾತ್ರವಲ್ಲ ಯಾವುದೇ ವಿಧದ ಸೇವಾಶುಲ್ಕಗಳನ್ನು ವಿಧಿಸುವುದಿಲ್ಲ. ಗರ್ಭಿಣಿಗೆ ಮನೆಯಿಂದ ಸರಕಾರಿ ಆಸ್ಪತ್ರೆಗೆ, ಹಾಗೂ ಗಂಭೀರ ಸಮಸ್ಯೆಯಿದ್ದಲ್ಲಿ ದೊಡ್ಡ ಆಸ್ಪತ್ರೆಗೆ ಸಾಗಿಸಲು ಉಚಿತವಾದ ಸಾರಿಗೆ ವ್ಯವಸ್ಥೆ ದೊರೆಯುತ್ತಿದೆ.

ಉಚಿತವಾದ ಔಷಧ ಮತ್ತು ಅವಶ್ಯಕ ಉಪಯೋಗದ ವಸ್ತುಗಳು, ರೋಗ ಪತ್ತೆ ಹಚ್ಚಲು ಪರೀಕ್ಷಾ ವೆಚ್ಹ. ಅಗತ್ಯವಿದ್ದಾಗ ರಕ್ತ ಪೂರೈಕೆ ಮತ್ತು ಗರ್ಭಿಣಿ ಆಸ್ಪತ್ರೆಯಲ್ಲಿ ಇರಬೇಕಾಗುವಷ್ಟು ಕಾಲ- ಸಾಧಾರಣವಾಗಿ ಸಾಮಾನ್ಯ ಹೆರಿಗೆಗೆ ಎರಡು ದಿನ ಮತ್ತು  ಸಿಜೇರಿಯನ್ ಶಸ್ತ್ರ ಚಿಕಿತ್ಸೆಯ ವೇಳೆ ಏಳು ದಿನ-ಉಚಿತ ಆಹಾರ ನೀಡುವುದೂ ಈ ಯೋಜನೆಯಡಿ ಸೇರಿದೆ.

ಅನಾರೋಗ್ಯದಿಂದ ನರಳುವ ನವಜಾತ ಶಿಶುಗಳಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಜನನವಾದಂದಿನಿಂದ ೩೦ ದಿನಗಳವರೆಗೆ ಇಂತಹ ಉಚಿತ ಸೇವೆಗಳನ್ನು ಈ ಯೋಜನೆಯಲ್ಲಿ ನೀಡಲಾಗುತ್ತದೆ. ಉಚಿತ ಚಿಕಿತ್ಸೆಯೊಂದಿಗೆ, ಮನೆಯಿಂದ ಆಸ್ಪತ್ರೆಗೆ ಮತ್ತು ಅಗತ್ಯವಿದ್ದಲ್ಲಿ ಮೇಲ್ದರ್ಜೆಯ ಆಸ್ಪತ್ರೆಗೆ ಕೊಂಡೊಯ್ಯಬೇಕಾದಲ್ಲಿ ಉಚಿತ ಸಾರಿಗೆ ವ್ಯವಸ್ಥೆಯನ್ನು ಪಡೆಯಬಹುದಾಗಿದೆ.

ಜೆ ಎಸ್ಎಸ್ ಕೆ ಯಲ್ಲಿ ಗರ್ಭಿಣಿಯರು ಹಾಗೂ ಅನಾರೋಗ್ಯದಿಂದ ನರಳುವ ನವಜಾತ ಶಿಶುಗಳಿಗೆ ಸಿಗುವ ಸವಲತ್ತುಗಳು.

ಗರ್ಭಿಣಿಯರಿಗೆ

  • ಉಚಿತ ಹೆರಿಗೆ ಸೇವೆಗಳು
  • ಉಚಿತ ಸಿಜೇರಿಯನ್ ಶಸ್ತ್ರ ಚಿಕಿತ್ಸೆ
  • ಉಚಿತ ಪ್ರಯೋಗ ಶಾಲೆ ಸೇವೆಗಳು
  • ಉಚಿತ ಔಷಧಿಗಳು ಮತ್ತು ಬಳಕೆ ಸಾಮಗ್ರಿಗಳು
  • ಗರ್ಭಿಣಿಯರು ಹೆರಿಗೆಯ ಸಮಯದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಉಚಿತ ಊಟ -ತಿಂಡಿ  (ಸಾಮಾನ್ಯ ಹೆರಿಗೆಗೆ ೨ ದಿನ ಮತ್ತು ಸಿಜೇರಿಯನ್ ಹೇರಿಗೆಯಾದರೆ ೭ ದಿನ )
  • ಅವಶ್ಯಕತೆಯಿರುವ ಗರ್ಭಿಣಿಯರಿಗೆ ಉಚಿತ ರಕ್ತದ ವ್ಯವಸ್ಥೆ.
  • ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಮೇಲ್ದರ್ಜೆ ಆಸ್ಪತ್ರೆಗಳಿಗೆ ಉಚಿತ ಸಾರಿಗೆ ವ್ಯವಸ್ಥೆ.
  • ಎಲ್ಲಾ ರೀತಿಯ ಸೇವಾ ಶುಲ್ಕ ಪಾವತಿಯಿಂದ ವಿನಾಯಿತಿ.

ಅನಾರೋಗ್ಯದಿಂದ ನರಳುವ ನವಜಾತ ಶಿಶುಗಳಿಗೆ ಸಿಗುವ ಸೇವೆಗಳು

  • ಯಾವುದೇ ಹಣಕಾಸು ಖರ್ಚು ಮಾಡಿಸದ ಉಚಿತ ಸೇವೆಗಳು.
  • ಉಚಿತ ಔಷಧಿಗಳು ಮಾತು ಬಳಕೆ ಸಾಮಗ್ರಿಗಳು.
  • ಉಚಿತ ಪ್ರಯೋಗಶಾಲೆ ಪರೀಕ್ಷೆಗಳು.
  • ಅವಶ್ಯಕತೆಯಿರುವ ಶಿಶುಗಳಿಗೆ ಉಚಿತ ರಕ್ತದ ವ್ಯವಸ್ಥೆ.
  • ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಸಾರಿಗೆ ವ್ಯವಸ್ಥೆ.
  • ಎಲ್ಲ ರೀತಿಯ ಸೇವಾ ಶುಲ್ಕದಿಂದ ವಿನಾಯಿತಿ

 ಗರ್ಭಿಣಿಯರಿಗೆ ಔಷಧಿಗಳು ಮತ್ತು ಕಬ್ಬಿಣ ಮತ್ತು ಫೋಲಿಕ್ ಆಮ್ಲ ಮುಂತಾದ ಪೂರಕ ಅಂಶಗಳು ಸೇರಿದಂತೆ ಅಗತ್ಯ ಬಳಕೆಯ ವಸ್ತುಗಳನ್ನು ಪ್ರಸವ – ಪೂರ್ವ, ಪ್ರಸೂತಿ-ವೇಳೆ ಮತ್ತು ಪ್ರಸೂತಿ-ನಂತರ ೬ ವಾರಗಳ ತನಕ ಉಚಿತವಾಗಿ ನೀಡಲಾಗುತ್ತದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: