Article_ Quality of Education

ಭಾರತದಲ್ಲಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟ 

ಪ್ರತಿಯೊಂದು ಮಗುವಿನ ಜೀವನದಲ್ಲಿ ಪ್ರಾಥಮಿಕ ಶಿಕ್ಷಣವು ಪ್ರಮುಖ ಘಟ್ಟವಾಗಿದೆ. ಪ್ರತಿ ಮಗು ತನ್ನ ಕುಟುಂಬದ ನಂತರ ಅತಿ ಹೆಚ್ಚು ಸಮಯವನ್ನು ಕೆಳೆಯುವುದು ಶಾಲೆಯಲ್ಲಿ, ಆದ್ದರಿಂದ ಮಗು ತನ್ನ ಸುಂದರ ಜೀವನದ ಕನಸುಗಳನ್ನು ಕಟ್ಟಿಕೊಳ್ಳುವುದು ಇದೆ ಸಮಯದಲ್ಲಿ ಆದ್ದರಿಂದ ಪ್ರಾಥಮಿಕ ಶಿಕ್ಷಣ ಮಗುವಿನ ಕಲಿಕೆಗೆ ಒಂದು ಪ್ರಮುಖ ವೇದಿಕೆಯಾಗಿದೆ. ಶಿಕ್ಷಣ ಮಗುವಿನ ಸರ್ವತೋಮುಖ ಬೆಳವಣಿಗೆ ಅಷ್ಟೇ ಅಲ್ಲದೆ ಸಮಾಜದಲ್ಲಿ ಒಬ್ಬ ಜವಾಬ್ದಾರಿಯುತ ವ್ಯಕ್ತಿಯ ಜೊತೆಗೆ ಒಂದು ಸುಸ್ಥಿರ ಸಮಾಜವನ್ನು ನಿರ್ಮಾಣ ಮಾಡುವುದಾಗಿದೆ. ಆದ್ದರಿಂದ ಭಾರತದಲ್ಲಿ ಪ್ರತಿ ವರ್ಷ ಬಜೆಟ್ ನಲ್ಲಿ ಅಧಿಕ ಮೊತ್ತದ ಹಣವನ್ನು ಶಿಕ್ಷಣಕ್ಕೆ ಮೀಸಲಾಗಿಡಲಾಗುತ್ತದೆ, ಪ್ರಸ್ತುತ ಭಾರತದಲ್ಲಿನ ಪ್ರಾಥಮಿಕ ಶಿಕ್ಷಣದ ಗುಣಮಟ್ಟದ ಸಂಕ್ಷೀಪ್ತ ಮಾಹಿತಿಯನ್ನು ಇಲ್ಲಿ ನೋಡೋಣ.

ಭಾರತದಲ್ಲಿ ಸರ್ಕಾರವು ಪ್ರಾಥಮಿಕ ಶಿಕ್ಷಣದಲ್ಲಿರುವ ಕುಂದು ಕೊರತೆಗಳನ್ನು ನೀಗಿಸಲು ಹಾಗೂ ಉತ್ತೇಜಿಸಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವುದು ನಮಗೆಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ, ಈ ಉದ್ದೇಶಕ್ಕಾಗಿ ಸರ್ಕಾರೇತರ ಸಂಸ್ಥೆಗಳು ಸಹ ಸರ್ಕಾರದೊಂದಿಗೆ ಕೈ ಜೋಡಿಸಿದವು. ಹಾಗೆ ನೋಡಿದರೆ ಹತ್ತು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಶಾಲೆಗೆ ಮಕ್ಕಳನ್ನು ಕರೆತರುವುದೆ ಒಂದು ದೊಡ್ಡ ಸವಾಲಿನ ಕೆಲಸವಾಗಿತ್ತು, ಈ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖವಿರುವ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಬಿಡುಗಡೆ ಮಾಡಿದ ವರದಿಗಳಲ್ಲಿ ನಾವು ನೋಡಬಹುದು. ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಸೇರಿದಂತೆ ಸರ್ಕಾರೇತರ ಸಂಸ್ಥೆಗಳು ಸಹ ಶೈಕ್ಷಣಿಕ ವರದಿಗಳನ್ನು ಪ್ರತಿ ವರ್ಷ ಬಿಡುಗಡೆ ಮಾಡುತ್ತಿವೆ. ಅದರಲ್ಲಿ ಪ್ರಥಮ ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ಅಸರ್ (ASER-Annual Status of Education Report) ವರದಿಯು ಪ್ರಮುಖವಾಗಿದೆ, ಈ ವರದಿಯು 2005 ರಿಂದ ಪ್ರತಿ ವರ್ಷ ಜನೆವರಿ ತಿಂಗಳಲ್ಲಿ ದೇಶಾದ್ಯಂತ ಬಿಡುಗಡೆ ಆಗುತ್ತಿದೆ. ಇದು ಭಾರತದ ಎಲ್ಲಾ ರಾಜ್ಯಗಳ ಶೈಕ್ಷಣಿಕ ಗುಣಮಟ್ಟದ ವರದಿಯನ್ನು ಹೊಂದಿರುತ್ತದೆ. ಈ ವರದಿಯ ಆಧಾರದ ಮೇಲೆ ದೇಶದಲ್ಲಿ ಪ್ರಸ್ತುತ ಶಿಕ್ಷಣದ ಗುಣಮಟ್ಟ ಕುರಿತು ಚರ್ಚೆಗಳು ಸಹ ಆಗುತ್ತಿವೆ.

ಪ್ರತಿ ವರ್ಷದಂತೆ ಈ ವರ್ಷವು ಅಸರ್ 2016-17 ರ ವರದಿಯು ಜನೆವರಿ 2016 ರಲ್ಲಿ ಬಿಡುಗಡೆಯಾಗಿದ್ದು, ಈ ವರದಿಯ ಕೆಲವು ಪ್ರಮುಖ ಅಂಶಗಳು ಈ ರೀತಿಯಾಗಿವೆ. ಅಸರ್ 2016 ರ ವರದಿಯಂತೆ ಭಾರತದಲ್ಲಿ 6 ರಿಂದ 14 ವರ್ಷದ ಶೇ. 96.9% ಮಕ್ಕಳು ಶಾಲೆಯಲ್ಲಿವೆ (ಸರ್ಕಾರಿ ಶಾಲೆ-65.4% ಮತ್ತು ಖಾಸಗಿ ಶಾಲೆಗಳಲ್ಲಿ 30.5% ಮತ್ತು ಇತರ ಶೇ.1 ಒಟ್ಟು 96.9%) ಎಂದು ಹೇಳಿದೆ. ಇದು ಹತ್ತು ವರ್ಷಗಳ ಹಿಂದೆ 93.6% ಇತ್ತು ಎಂಬುದು ಗಮನಾರ್ಹವಾದ ಸಂಗತಿಯಾಗಿದೆ. ಇನ್ನೂ ಓದುವ ಮಟ್ಟದಲ್ಲಿ 5ನೇ ತರಗತಿಯ ಶೇ.47.8 ಮಕ್ಕಳು ಮತ್ತು 7ನೇ ತರಗತಿಯಲ್ಲಿ ಶೇ.66.1 ಮಕ್ಕಳು ಮಾತ್ರ ಎರಡನೇ ತರಗತಿ ಮಟ್ಟದ ಪುಸ್ತಕವನ್ನು ಓದುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೆ ಗಣಿತದಲ್ಲಿ 5ನೇ ತರಗತಿಯ ಶೇ.25.9 ಹಾಗೂ 7ನೇ ತರಗತಿಯ 37.7 ಮಕ್ಕಳು ಮಾತ್ರ ಭಾಗಾಕಾರ ಲೆಕ್ಕಗಳನ್ನು ಮಾಡಬಲ್ಲರು ಎಂದು ವರದಿ ತಿಳಿಸುತ್ತದೆ. ಅದರಂತೆ 5ನೇ ತರಗತಿಯ ಶೇ. 24.5 ಮಕ್ಕಳು 7ನೇ ತರಗತಿಯ ಶೇ.38.2 ಮಕ್ಕಳು ಮಾತ್ರ ಇಂಗ್ಲೀಷನಲ್ಲಿ ಸರಳ ವಾಕ್ಯಗಳನ್ನು ಓದಬಲ್ಲರು ಎಂದು ತಿಳಿಸಿದೆ.

ಕರ್ನಾಟಕದಲ್ಲಿ  6 ರಿಂದ 14 ವರ್ಷದ ಶೇ. 98.9% ಮಕ್ಕಳು ಶಾಲೆಯಲ್ಲಿವೆ (ಸರ್ಕಾರಿ ಶಾಲೆ-71.3% ಮತ್ತು ಖಾಸಗಿ ಶಾಲೆಗಳಲ್ಲಿ 27.4% ಮತ್ತು ಇತರೆ 0.2 ಒಟ್ಟು 98.9%) ಎಂದು ಹೇಳಿದೆ. ಇನ್ನೂ ಓದುವ ಮಟ್ಟದಲ್ಲಿ 5ನೇ ತರಗತಿಯ ಶೇ.42.1 ಮಕ್ಕಳು ಮತ್ತು 7ನೇ ತರಗತಿಯಲ್ಲಿ ಶೇ.62.7 ಮಕ್ಕಳು ಮಾತ್ರ ಎರಡನೇ ತರಗತಿ ಮಟ್ಟದ ಪುಸ್ತಕವನ್ನು ಓದುತ್ತಾರೆ. ಹಾಗೆ ಗಣಿತದಲ್ಲಿ 5ನೇ ತರಗತಿಯ ಶೇ.19.7 ಹಾಗೂ 7ನೇ ತರಗತಿಯ 34.4 ಮಕ್ಕಳು ಮಾತ್ರ ಭಾಗಾಕಾರ ಲೆಕ್ಕಗಳನ್ನು ಮಾಡಬಲ್ಲರು ಎಂದು ವರದಿಯು ತಿಳಿಸುತ್ತದೆ. ಅದರಂತೆ 5ನೇ ತರಗತಿಯ ಶೇ. 24.8 ಮಕ್ಕಳು 7ನೇ ತರಗತಿಯ ಶೇ.41.6 ಮಕ್ಕಳು ಮಾತ್ರ ಇಂಗ್ಲೀಷನಲ್ಲಿ ಸರಳ ವಾಕ್ಯಗಳನ್ನು ಓದಬಲ್ಲರು ಎಂದು ತಿಳಿಸಿದೆ.

ಕರ್ನಾಟಕವನ್ನು ಶೈಕ್ಷಣಿಕವಾಗಿ ನಾಲ್ಕು ವಿಭಾಗಗಳನ್ನಾಗಿ ಮಾಡಿದ್ದು ಅದರ ವರದಿ ಈ ಕೆಳಗಿನಂತೆ ಇರುತ್ತದೆ. ಈ ಕೆಳಗಿನ ವರದಿಯನ್ನು ಗಮನಿಸಿದಾಗ ಗುಲ್ಬರ್ಗಾ ವಿಭಾಗವು ಕಡಿಮೆ ಫಲಿತಾಂಶವನ್ನು ಹೊಂದಿದ್ದು ಕಂಡು ಬರುತ್ತದೆ..

ಶಾಲಾ ದಾಖಲಾತಿ (ಶೇಕಡಾವಾರುಗಳಲ್ಲಿ %) ಓದುವ ಮಟ್ಟ (ಶೇಕಡಾವಾರುಗಳಲ್ಲಿ %)
ವಿಭಾಗಗಳು ಶಾಲೆಗೆ ದಾಖಲಾಗದ ಮಕ್ಕಳು 6-14 ವರ್ಷ ಖಾಸಗಿ ಶಾಲೆಗೆ ದಾಖಲಾಗದ ಮಕ್ಕಳು 6-14 ವರ್ಷ 3-5 ನೇ ವರ್ಗದ ತರಗತಿ 1ರ ಮಟ್ಟದ ಪಠ್ಯವನ್ನು ಓದಬಲ್ಲ ಮಕ್ಕಳು ತರಗತಿ 3-5 ರಲ್ಲಿ ವ್ಯವಕಲನ ಲೆಕ್ಕಗಳನ್ನು ಬಿಡಿಸಬಲ್ಲ ಮಕ್ಕಳು 6-8 ನೇ ವರ್ಗದ ತರಗತಿ 2ರ ಮಟ್ಟದ ಪಠ್ಯವನ್ನು ಓದಬಲ್ಲ ಮಕ್ಕಳು ತರಗತಿ 6-8 ರಲ್ಲಿ ಭಾಗಾಕಾರ ಲೆಕ್ಕಗಳನ್ನು ಬಿಡಿಸಬಲ್ಲ ಮಕ್ಕಳು
ಬೆಂಗಳೂರ 0.9 32.6 50.7 45.6 60.1 36.2
± 0.32 ± 2.80 ± 3.54 ± 3.48 ± 3.80 ± 3.44
ಬೆಳಗಾವಿ 0.6 24.0 57.6 43.7 63.4 37.9
± 0.28 ± 4.78 ± 5.08 ± 4.96 ± 6.18 ± 5.28
ಗುಲ್ಬರ್ಗಾ 2.8 21.6 42.0 31.0 51.9 25.1
± 0.80 ± 2.62 ± 3.40 ± 3.14 ± 4.04 ± 3.08
ಮೈಸೂರ 0.4 31.3 59.5 52.1 66.5 37.2
± 0.24 ± 3.52 ± 4.02 ± 4.08 ± 4.16 ± 4.06
ಕರ್ನಾಟಕ 1.1 27.4 52.8 43.2 60.9 34.6
  ± 0.22 ± 1.84 ± 2.12 ± 2.10 ± 2.42 ± 2.12

* ಗುಲ್ಬರ್ಗಾ ವಿಭಾಗವು ಬಳ್ಳಾರಿ, ಬೀದರ, ಗುಲ್ಬರ್ಗಾ, ಕೊಪ್ಪಳ, ರಾಯಚೂರ ಮತ್ತು ಯಾದಗಿರಿ ಜಿಲ್ಲೆಗಳನ್ನು ಒಳಗೊಂಡಿದೆ.

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: