Category Archives: Study Materials

Desert

ಮರುಭೂಮಿ

ಭೂಮಿಯ ಯಾವ ಪ್ರದೇಶಗಳಲ್ಲಿ ನೀರಿನ ಆದಾಯ ಅತಿ ಕಡಿಮೆ ಇದೆಯೋ (ವಾರ್ಷಿಕ ಸರಾಸರಿ ೨೫೦ ಮಿಲ್ಲಿಮೀಟರ್ ಗಿಂತ ಕಡಿಮೆ) ಅಂತಹ ಪ್ರದೇಶಗಳು ಮರುಭೂಮಿ ಎಂದು ಭೂಗೋಳಶಾಸ್ತ್ರದಲ್ಲಿ ಕರೆಯಲ್ಪಡುತ್ತವೆ.

ಸಸ್ಯಗಳು ಹಾಗೂ ಪ್ರಾಣಿಗಳ ಜೀವನಕ್ಕೆ ಜಲಾಧಾರವೊದಗಿಸಲಾರದಷ್ಟು ಒಣ ವಾತಾವರಣವನ್ನು ಹೊಂದಿರುವ ಭೂಪ್ರದೇಶವು ಮರುಭೂಮಿಯೆನಿಸಿಕೊಳ್ಳುತ್ತದೆ. ಈ ಪ್ರದೇಶಗಳಲ್ಲಿ ಜನವಸತಿ ಅತಿ ವಿರಳ ಅಥವಾ ಇಲ್ಲವೇ ಇಲ್ಲ. ಮರುಭೂಮಿಗಳು ಸಾಮಾನ್ಯವಾಗಿ ಮೂರು ಬಗೆಯವು.

 • ಉಷ್ಣವಲಯದ ಮರುಭೂಮಿಗಳು (ಅತಿ ಬಿಸಿ )
  • ಸಹಾರಾ ಮರುಭೂಮಿ(ಆಫ್ರಿಕಾ ಖಂಡದ ಉತ್ತರ ಭಾಗ)
  • ಅರೇಬಿಯಾ ಮರುಭೂಮಿ ( ಸೌದಿ ಅರೇಬಿಯಾ, ಕುವೈಟ್, ಖತಾರ್ , ಯು.ಎ.ಇ. , ಒಮಾನ್ , ಯೆಮೆನ್ )
  • ಕಲಹರಿ ಮರುಭೂಮಿ ( ಬೋಟ್ಸ್ವಾನಾ , ದಕ್ಷಿಣ ಆಫ್ರಿಕಾ , ನಮೀಬಿಯಾ )
  • ಆಸ್ಟ್ರೇಲಿಯಾದ ಮರುಭೂಮಿಗಳು
  • ಮೊಜಾವ್ ಮತ್ತು ಸೊನೊರನ್ ಹಾಗೂ ಚಿಹುವಹುವಾನ್ ಮರುಭೂಮಿಗಳು ( ಯು.ಎಸ್.ಎ ದ ದಕ್ಷಿಣ ಮತ್ತು ಆಗ್ನೇಯ ಭಾಗಗಳು ಹಾಗೂ ಮೆಕ್ಸಿಕೋ )
  • ಥಾರ್ ಮರುಭೂಮಿ ( ಭಾರತ ಮತ್ತು ಪಾಕಿಸ್ತಾನ)

ಉಷ್ಣವಲಯದ ಮರುಭೂಮಿಗಳಲ್ಲಿ ತಾಪಮಾನವು ೫೮ ಡಿಗ್ರಿ (ಸೆಂ)ವರೆಗೆ ತಲುಪುತ್ತದೆ.

 • ಸಮಶೀತೋಷ್ಣವಲಯದ ಮರುಭೂಮಿಗಳು (ಸಾಧಾರಣ ಬಿಸಿ)
  • ಗೋಬಿ ( ಚೀನಾ , ಮಂಗೋಲಿಯಾ )
  • ಕೊಲೊರಡೋ ಪ್ರಸ್ತಭೂಮಿ ಮತ್ತು ಗ್ರೇಟ್ ಬೇಸಿನ್ (ಯು.ಎಸ್.ಎ.)
  • ಪೆಟೆಗೋನಿಯಾ ( ಅರ್ಜೆಂಟೀನಾ)
  • ಅಟಕಾಮಾ ( ಚಿಲಿ)
  • ನಮೀಬ್ ( ನಮೀಬಿಯಾ)
 • ಉನ್ನತ ಪ್ರದೇಶಗಳ ಮರುಭೂಮಿಗಳು ( ಧ್ರುವ / ಶೀತ)
  • ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ಪ್ರದೇಶಗಳು
  • ಲಢಾಕ್ ನ ಕೆಲಭಾಗಗಳು

ಮರುಭೂಮಿಯ ಸಸ್ಯಗಳು

೨೫ ಸೆಮೀಗಿಂತ ಕಡಿಮೆ ವಾರ್ಷಿಕ ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯುವ ಸಸ್ಯಗಳು ಮರುಭೂಮಿಯ ಸಸ್ಯಗಳು. ಇದಕ್ಕೆ ಇನ್ನೊಂದು ಹೆಸರು ಕ್ಸಿರೊಫೈಟ್ಸ್. ಬಾಹ್ಯ ಹಾಗೂ ಒಳರಚನೆಯಲ್ಲಿ ಅನೇಕ ಹೊಂದಾಣಿಕೆ, ಮಾರ್ಪಾಟುಗಳು ಕಂಡುಬರುತ್ತವೆ. ಅಧಿಕ ತಾಪಮಾನವನ್ನು ತಡೆಯಲು ಇವುಗಳು ಅನೇಕ ಬಾಹ್ಯ ಹಾಗೂ ಆಂತರಿಕ ಬದಲಾವಣೆಗಳನ್ನು ಹೊಂದಿರುತ್ತವೆ. ಕಳ್ಳಿ ಗಿಡಗಳಂತಹ ಗಿಡಗಳಲ್ಲಿ ನೀರು ಇಂಗುವಿಕೆಯನ್ನು ಕಡಿಮೆಮಾಡಲು ಬಹಳ ಕಡಿಮೆ ಎಲೆಗಳಿರುತ್ತವೆ. ಫ್ರೀಟೊಫೈಟ್ಸ್ ತಮ್ಮ ಅತಿಯಾದ ಉದ್ದ ಬೇರುಗಳಿಂದ ಬಹಳ ಕೆಳ ಮಟ್ಟಕ್ಕೆ ತಲುಪಿ ನೀರನ್ನು ಎಳೆದುಕೊಳ್ಳುವ ಸಾಮರ್ಥ್ಯವಿರುತ್ತದೆ. ಬಹಳ ವರ್ಷಗಳ ಕಾಲಾವಧಿಯಲ್ಲಿ ಜೀವಿಸುವ ಗಿಡಗಳಿಗೆ ರಸಹೀನ ಬಹುವಾರ್ಷಿಕ ಸಸ್ಯಗಳೆಂದು ಕರೆಯಲಾಗಿದೆ. ಇವು ಶುಷ್ಕವಾಗಿರುವ ಮರುಭೂಮಿಯ ಸಸ್ಯಗಳು. ಇವುಗಳಿಗೆ ಮಾಂಸಲದೇಹವಿಲ್ಲಿ. ಇವು ನೀರನ್ನು ದೇಹದಲ್ಲಿ ಶೇಖರಿಸದೆಯೇ ನೇರವಾಗಿ ನೀರಿನ ಆಭಾವವನ್ನು ಎದುರಿಸಿ, ಇತರ ವಿಧಾನಗಳಿಂದ ಹೊಂದಾಣಿಕೆ ಮಾಡಿಕೊಳ್ಳುತ್ತವೆ.

ವಿವಿಧ ಪಾಪಸ್ ಕಳ್ಳಿಗಿಡಗಳು

ಒಟ್ಟಿನಲ್ಲಿ ಮರುಭೂಮಿ ಸಸ್ಯಗಳ ನೂರಾರು ಹೊಂದಾಣಿಕೆಗಳಲ್ಲಿ ಕೆಲವು ಹೀಗಿವೆ: ರಸಭರಿತ ಕಾಂಡ, ಎಲೆ (ಉದಾ; ಕಳ್ಳಿಗಿಡ, ಅಗೇವ್) ; ಎಲೆಗಳಿಲ್ಲದ ಮುಳ್ಳುಗಳಿಂದಾವೃತ ದೇಹ (ಉದಾ; ಕಳ್ಳಿಗಿಡ) ; ಹಸುರು ಕಾಂಡ (ಕ್ಯಾಸ್ಪರಿನಾ, ಮೊಹಲಂಬಿಕಿಯಾ, ಕಳ್ಳಿ ಇತ್ಯಾದಿ) ಮೇಣ (ವ್ಯಾಕ್ಸ್) ದಿಂದಾಗಿ ಹೊಳೆಯುವ ಹೊರಮೈ (ಅಗೇವ್) , ನೀರನ್ನು ಹುಡುಕಿಕೊಂಡು ಆಳಕ್ಕೆ ಇಳಿಯುವ ಬೇರು (ಅಲ್ಹಗೀ), ಅತಿ ಉಷ್ಣ ಹಾಗೂ ಬಿಸಿಲಿನ ಪರಿಸ್ಥಿತಿಯಲ್ಲಿ ಎಲೆಗಳನ್ನು ಸುರಳಿಯಂತೆ ಸುತ್ತಿಕೊಳ್ಳುವ ಅಥವಾ ಉದ್ದಕ‍್ಕೆ ಮಡಚಿಕೊಳ್ಳುವ ಎಲೆಗಳು (ಮರುಭೂಮಿಯ ಹುಲ್ಲುಗಳು), ಬಾಷ್ಪವಿಸರ್ಜನೆಯನ್ನು ಕಡಿಮೆಗೊಳಿಸಲು ಎಲೆಗಳಲ್ಲಿ ಕಡಿಮೆ ಪತ್ರರಂಧ್ರಗಳು, ಇತ್ಯಾದಿ.

ಎಲಿಫ್ಯಾಂಟ್ ಮರ– ಇದು ಅತಿ ಅಪರೂಪದ ಸಸ್ಯ. ಯು.ಎಸ್.ಎ ದೇಶದಲ್ಲಿ ಬೆಳೆಯುತ್ತದೆ. ಮರದ ಕಾಂಡ ಬಹಳ ದಪ್ಪವಾಗಿದ್ದು ನೀರನ್ನು ಹಿಡಿದುಕೊಳ್ಳುವ ಶಕ್ತಿಯಿದೆ. ಇದರ ಆಕಾರ ಚಿಕ್ಕದಾಗಿದ್ದು ಇದರ ರೆಂಬೆಗಳು ಕಾಂಡಕ್ಕಿಂತ ಚಿಕ್ಕದಾಗಿದೆ. ಇದು ತನ್ನ ಬುಡದಲ್ಲಿ ಹಾಗೂ ಕಾಂಡದಲ್ಲಿ ನೀರನ್ನು ಶೇಖರಿಸಿಟ್ಟುಕೊಳ್ಳುತ್ತದೆ. ಮೊಗ್ಗು ಸಣ್ಣ ಹಾಗೂ ಹಳದಿ ವೃತ್ತಾಕಾರದಲ್ಲಿದ್ದು ಅದು ಅರಳಿದ ನಂತರ ಬಿಳಿ ಹಾಗೂ ನಕ್ಷತ್ರಾಕಾರವನ್ನು ಹೊಂದಿರುತ್ತದೆ. ಈ ಗಿಡಗಳ ಎಲ್ಲಾ ತಳಿಗಳು ಬರಗಾಲ ಹಾಗೂ ಅತ್ಯಂತ ಚಳಿಗಾಲದಲ್ಲಿ ಮಾತ್ರ ಎಲೆಗಳನ್ನು ಹೊಂದಿರುವುದಿಲ್ಲ.

ಆರ್ಗನ್ ಪೈಪ್ ಕಳ್ಳಿಗಿಡ ಈ ಗಿಡದ ಎಲ್ಲಾ ತಳಿಗಳನ್ನು ಮೆಕ್ಸಿಕೊ ಹಾಗೂ ಯು.ಎಸ್.ಎ ನ ಮರುಭೂಮಿಯಲ್ಲಿ ನೋಡಬಹುದು. ಈ ಕಾಂಡವು ನೇರ ಹಾಗೂ ತೆಳುವಾದ ಕೊಂಬೆಗಳನ್ನು ಹೊಂದಿದೆ. ಇದು ಪೂರ್ಣವಾಗಿ ಬೆಳೆಯಲು ಸುಮಾರು ೧೫೦ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಮರದಿಂದ ಬೆಳೆಯುವ ಹಣ್ಣುಗಳು ಕಲ್ಲಂಗಡಿಗಿಂತಲೂ ಸಿಹಿಯಾಗಿರುವುದು. ಈ ಹಣ್ಣುಗಳನ್ನು ಅಮೇರಿಕಾದವರು ತಿನ್ನಲು ಹಾಗೂ ಇದನ್ನು ‍‍‌‌‍‍‍‍‍‍‌ಔಷಧಿಯನ್ನಾಗಿ ಬಳಸುವರು.

ಡೆಸರ್ಟ್ ಸೇಜ್– ಇದರ ಎತ್ತರ ೨-೩ ಮೀಟರ್. ಇದರ ಹೂಗಳು ನೀಲಿ ಬಣ್ಣವನ್ನು ಹೊಂದಿದೆ. ಇದರ ಮುಖ್ಯ ಲಕ್ಷಣವೇನೆಂದರೆ ಇದು ಪೂರ್ತಿಯಾಗಿ ಬೆಳೆದ ನಂತರ ಇದಕ್ಕೆ ನೀರಿನ ಅವಶ್ಯಕತೆ ಇರುವುದಿಲ್ಲ. ಇದಕ್ಕೆ ಔಷಧಿಯ ಗುಣಗಳೂ ಕೂಡ ಇವೆ. ಇದರ ಕಾಂಡ ಹಾಗೂ ಎಲೆಗಳನ್ನು ಕಾಡಿನ ಜನರು ನೆಗಡಿಗಾಗಿ ಔಷಧಿಯನ್ನಾಗಿ ಬಳಸಿಕೊಂಡರು. ಇದನ್ನು ತಲೆನೋವು, ಹೊಟ್ಟೆನೋವು, ಜ್ವರ, ಹಾಗೂ ಇನ್ನಿತರ ಕಣ್ಣು ನೋವಿನ ಸಮಸ್ಯೆಗಳಿಗೆ ಬಳಸಲಾಗುತ್ತದೆ.

ಡೆಸರ್ಟ್ ಮ್ಯಾರಿಗೋಲ್ಡ್– ಇವು ಆಸ್ಟರ್ ಕುಟುಂಬಕ್ಕೆ ಸೇರಿಸಲಾಗಿದೆ. ಇದು ಸಾಮಾನ್ಯವಾಗಿ ದಕ್ಷಿಣ ಭಾಗದ ಯು.ಎಸ್.ಎ ಹಾಗೂ ಮೆಕ್ಸಿಕೊ ದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇವು ವಾರ್ಷಿಕ ಹಾಗೂ ಕಡಿಮೆ ಅವಧಿಯ ಬಹುವಾರ್ಷಿಕ ಸಸ್ಯಗಳಾಗಿದ್ದು ಇವು ಸುಮಾರು ೧೦ ರಿಂದ ೩೦ ಅಂಗುಲ ಎತ್ತರ ಬೆಳೆಯುತ್ತದೆ. ಇದರ ಹೂಗಳು ಹಳದಿ ಬಣ್ಣ ಇರುವುದರಿಂದ ಇವುಗಳನ್ನು ಮ್ಯಾರಿಗೋಲ್ಡ್ ಎನ್ನಲಾಗುತ್ತದೆ. ಈ ಹೂಗಳು ಬಹಳ ವಿಷಕಾರಿಕ. ಈ ಸಸ್ಯಗಳ ಸೇವನೆಯಿಂದಾಗಿ ಬಹಳ ಕುರಿಗಳು ಸಾವನಪ್ಪಿವೆ.

ಡೆಸರ್ಟ್ ಲಿಲ್ಲಿ– ಇದರ ಇನ್ನೊಂದು ಹೆಸರು ಹೆಸ್ಪರೋಕ್ಯಾಲಿಸ್. ಇದನ್ನು ಉತ್ತರ ಅಮೇರಿಕಾ, ಮೆಕ್ಸಿಕೊ, ಕ್ಯಾಲಿಫೋರ್ನಿಯಾ ಹಾಗೂ ಆರಿಜೋನದ ಮರುಭೂಮೆಯಲ್ಲಿ ಕಾಣಬಹುದು. ಇದರ ಎಲೆಗಳು ಸುಮಾರು ಒಂದು ಅಂಗುಲದಷ್ಟು ಅಗಲವಿದ್ದು ಇನ್ನೂ ೮-೨೦ ಅಂಗುಲದಷ್ಟು ಅಗಲ ಬೆಳೆಯಬಹುದು. ಇದಕ್ಕೆ ಒಂದು ಆಳದ ಗಡ್ಡೆ ಇದ್ದು ಆ ಗಡ್ಡೆಯನ್ನು ಆಹಾರವನ್ನಾಗಿ ಅಮೇರಿಕಾದವರು ಬಳಸುತ್ತಾರೆ.

ಡೆಸರ್ಟ್ ವಿಲ್ಲೋ ಮರ– ಖಿಲೋಪ್ಸಿಸ್ ಎಂದೂ ಕರೆಯುತ್ತಾರೆ. ಇದು ಮೆಕ್ಸಿಕೊ ಹಾಗೂ ಯು.ಎಸ್.ಎನಲ್ಲಿ ಕಾಣುವ ಸೂಕ್ಷ್ಮ, ಸಣ್ಣದಾದ ಪತನಶೀಲ ಹೊದರು. ಇದು ಮೇ ತಿಂಗಳಲ್ಲಿ ಬೆಳೆದು ಸೆಪ್ಟೆಂಬರ್ ತಿಂಗಳವರೆಗೂ ಇರುತ್ತದೆ. ಈ ಹೂವಿನ ಪರಾಗಸ್ಪರ್ಷವನ್ನು ಜೇನುನೊಣ ಮಾಡುತ್ತದೆ. ಇದು ಶುಷ್ಕ ಸ್ಥಿತಿಯನ್ನು ತಡೆಕೊಳ್ಳುವುದು.

ತಾಳೆ ಜಾತಿಯ ಮರ ಇದು ಉಷ್ಣವಲಯದ, ಉಪೋಷ್ಣವಲಯದ ಬಿಸಿ ಮತ್ತು ಆರ್ದ್ರತೆಯ ಸ್ಥಿತಿಯಲ್ಲಿ ಬೆಳೆಯುವುದು. ಇದು ಅತಿ ಶೀತಲ ಸ್ಥಿತಿಯನ್ನು ತಡೆಯುವುದಿಲ್ಲ. ಇದು ಸುಮಾರು ೨೬೦೦ ತಳಿಗಳನ್ನು ಹೊಂದಿದೆ. ಇದರ ಕಾಂಡವು ಬಹಳ ಉದ್ದವಾಗಿದ್ದು, ಇದರ ಉದ್ದದ ಎಲೆಗಳ ಗೊಂಚಲು ಕಾಂಡದ ತುದಿಯಲ್ಲಿ ಇರುವುದು. ಈ ಮರದಿಂದ ತೆಗೆದ ತೈಲವು ಖಾದ್ಯವಾಗಿದೆ. ಈ ಸಸ್ಯದ ರಸವನ್ನು ಹುದುಗಿಸಿ ಪಾಮ್ ವೈನ್ ತಯಾರಿಸುತ್ತಾರೆ. ಈ ಮರದಿಂದ ಬರುವ ತೆಂಗಿನಗರಿಯಿಂದ ಹಗ್ಗ, ಹಾಸಿಗೆ, ಕುಂಚವನ್ನು ಮಾಡಲಾಗುತ್ತದೆ.

ಸ್ಯಾಗ್ವರೊ ಈ ಸಸ್ಯವು ಕಳ್ಳಿ ಗಿಡದ ತಳಿ. ಇದರ ಆಯಸ್ಸು ಸುಮಾರು ೧೫೦ ವರ್ಷ. ಇದರ ಬೆಳವಣಿಗೆ ಮರುಭೂಮಿಯ ವಾತಾವರಣದ ಮೇಲೆ ಅವಲಂಭಿಸಿರುತ್ತದೆ. ಇದರ ಬೆನ್ನುಹುರಿ ಒಂದು ದಿನಕ್ಕೆ ಸುಮಾರು ಒಂದು ಮಿಲಿ ಮೀಟರ್ನಷ್ಟು ಬೆಳೆಯುವುದು. ಇದರ ಹೂಗಳು ರಾತ್ರಿಯ ಸಮಯದಲ್ಲಿ ಬೆಳೆಯುವುದು. ಇದರಲ್ಲಿ ಬೆಳೆಯುವ ಕೆಂಪು ಹಣ್ಣುಗಳನ್ನು ಸಾಮಾನ್ಯವಾಗಿ ಸೇವಿಸುತ್ತಾರೆ. ಇದರ ಒಂದೊಂದು ಹಣ್ಣುಗಳಲ್ಲಿ ಸುಮಾರು ೨೦೦೦ ಬೀಜಗಳಿದ್ದು ಅವುಗಳ ಪರಾಗಸ್ಪರ್ಷ ಸುಲಭವಾಗಿದೆ.

ಕಳ್ಳಿಗಿಡ– ಇದು ಸಾಮಾನ್ಯವಾಗಿ ಬೆಳೆಯುವ ಸಸ್ಯವಾಗಿದ್ದು ಇದರ ಎತ್ತರ ಸುಮಾರು ೧-೧೦ ಮೀಟರ್. ಇದರ ಬೆನ್ನುಹುರಿಯು ಚುಚ್ಚಿದರೆ ರೋಗನಿರೋಧಕಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

 

Advertisements

Constitution of India_ Preamble

Preamble to the Constitution of India.(Kannada)

conti_preamble

 

List of Measuring devices

List of Measuring devices with links. 

Device Quantity measured
chronometer time
rain gauge measuring of rain
accelerometer physical, accelerations
actinometer heating power of sunlight
alcoholmeter alcoholic strength of liquids
altimeter altitudes
ammeter electric current
anemometer windspeed
audiometer hearing
dosimeter radiation of item
barkometer tanning liquors used in tanning leather
barometer air pressure
bettsometer integrity of fabric coverings on aircraft
bevameter mechanical properties of soil
bolometer electromagnetic radiation
breathalyzer breath alcohol content
caliper distance
calorimeter heat of chemical reactions
cathetometer vertical distances
ceilometer height of a cloud base
chronometer or clock time
clap-o-meter volume of applause
colorimeter color
creepmeter slow surface displacement of an active geologic fault in the earth
declinometer magnetic declination
densimeter specific gravity of liquids
densitometer degree of darkness in photographic or semitransparent material
diffractometer structure of crystals
dilatometer volume changes caused by a physical or chemical process
disdrometer size, speed, and velocity of raindrops
dosimeter exposure to hazards, especially radiation
dumpy level horizontal levels
dynamometer force, torque or power
elaeometer specific gravity of oils
electronic stand mass
electricity meter electrical energy used
electrometer electric charge
electronic tuner pitch of musical notes
ellipsometer refractive index, dielectric function, thickness of thin films
eudiometer change in volume of a gas mixture following combustion
evaporimeter rate of evaporation
fathometer ocean depth
feeler gauge gap widths
framing square right angles in construction
frequency counter frequency of alternating current
fuel gauge fuel level
galvanometer electricity
gas pycnometer volume and density of solids
glucometer blood glucose (diabetes)
graphometer angles
heliometer variation of the sun’s diameter
hydrometer specific gravity of liquids (density of liquids)
hygrometer humidity
inclinometer angle of a slope
inkometer ink
interferometer wave interference
katharometer composition of gases
lactometer specific gravity of milk
light meter light (in photography)
load cell measurement of force
lux meter intensity of light
magnetometer strength of magnetic fields
manometer pressure of gas
mass flow meter mass flow rate of a fluid travelling through a tube
mass spectrometer masses of ions, used to identify chemical substances through their mass spectra
measuring cup liquid and dry goods
measuring spoon a spoon used to measure an amount of an ingredient, either liquid or dry
mercury barometer Atmospheric pressure
micrometer small distances
multimeter electrical potential, resistance, and current
Nephoscope to measure the speed and direction of clouds
nephelometer particle in a liquid
odometer distance travelled
ohmmeter electrical resistance
orchidometer testicle size in male humans
oscilloscope oscillations
osmometer osmotic strength of a solution, colloid, or compound matter of an object
parking meter collects moneys for vehicle parking rights in a zone for a limited time
pedometer steps
pH meter pH (chemical acidity/basicity of a solution)
photometer illuminance or irradiance
polarimeter rotation of polarized light
potentiometer voltage (term is also used to refer to a variable resistor)
profilometer surface roughness
protractor angles
psychrometer humidity
pycnometer fluid density
pyranometer solar radiation
pyrheliometer direct solar insolation
pyrometer high temperatures
quadrat percentage cover of a certain species
quartz crystal microbalance thickness of deposited thin films
radiometer radiant flux of electromagnetic radiation
refractometer sugar concentration of sap and syrup
rheometer response to applied forces
rotameter pressure of a liquid or gas in a closed tube
ruler for measuring length
saccharometer amount of sugar in a solution
seismometer seismic waves (for example, earthquakes)
sextant location on earth’s surface (used in naval navigation)
spectrometer properties of light
spectrophotometer intensity of light as a function of wavelength
speedometer speed, velocity of a vehicle
spirometer the lung capacity
spherometer radius of a sphere
sphygmomanometer blood pressure
stadimeter object range
strainmeter seismic strain
SWR meter standing wave ratio
tacheometer distance
tachometer revolutions per minute, rate of blood flow, speed of aeroplanes
taximeter distance travelled, displacement
tensiometer surface tension of a liquid
theodolite measuring angles in the horizontal and vertical planes
thermometer temperature
tintometer colour
universal measuring machine geometric locations
UV meter ultraviolet light
vacuum gauge very low pressure
viscometer viscosity of a fluid
voltmeter electric potential, voltage
VU meter volume unit
wattmeter electrical power
weighing scale weight
wind vane wind direction
zymometer fermentation

Constitutional Articles

ಭಾರತದ ಸಂವಿಧಾನದ ಕಲಂಗಳು

Article 341 to 342 –ಪರಿಶಿಷ್ಟ ಜಾತಿ ಮತ್ತು ಪಂಗಡ

Article 45 -ಸಾರ್ವತ್ರಿಕ ಶಿಕ್ಷಣ

Article 51 –ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವುದು

Article 368- ಸಂವಿದಾನದ ತಿದ್ದುಪಡಿ

Article 366- ಆಂಗ್ಲೋ ಇಂಡಿಯನ್ ಬಗ್ಗೆವ್ಯಾಖ್ಯಾಯನ

Article 222- ಸರ್ವೋಚ್ಚ ನ್ಯಾಯಾಲಯದನ್ಯಾಯಾಧೀಶರ ವರ್ಗಾವಣೆ
Article280- ಹಣಕಾಸು ಆಯೋಗದ ರಚನೆ

Article 155 –ರಾಜ್ಯಪಾಲರ ನೇಮಕ

Article -352- ರಾಷ್ಟ್ರೀಯ ತುರ್ತು ಪರಿಸ್ಥಿತಿ

Article 356-ರಾಜ್ಯ ತುರ್ತು ಪರಿಸ್ಥಿತಿ

Article 360- ಹಣಕಾಸಿನ ತುರ್ತು ಪರಿಸ್ಥಿತಿ
Article 36 to 51- ರಾಜ್ಯ ನಿರ್ದೇಶಕ ತತ್ವಗಳು

Article 169- ರಾಜ್ಯ ವಿದಾನ ಪರಿಷತ್ತುರದ್ದುಗೊಳಿಸುವ ಅಧಿಕಾರ ಸಂಸತ್ತಿಗಿದೆ

Article -53- ರಾಷ್ಟ್ರಪತಿಯವರಿಗೆ ಕೇಂದ್ರಕಾರ್ಯಾಂಗ ಅದಿಕಾರ

Article-143- ಸುಪ್ರಿಮ್ ಕೋರ್ಟ್ ಗೆ ಸಲಹಾಧಿಕಾರ

Article348- ಆಂಗ್ಲ ಭಾಷೆಗೆ ರಾಜಕೀಯ ಹಾಗೂಕಾನೂನು ಪಟ್ಟ ದೊರೆತದ್ದು
Article 49- ರಾಷ್ಟ್ರೀಯ ಸ್ಮಾರಕಗಳ ರಕ್ಷಣೆ

Article-79- ಸಂಸತ್ತೆಂದರೆ ರಾಜ್ಯ ಸಭೆ ,ಲೊಕಸಭೆ,ರಾಷ್ಟ್ರಪತಿ

Article 103-ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳಬಗ್ಗೆ

Article 36- ರಾಜ್ಯ ಎಂಬ ಅರ್ಥ ಕೊಡುವ ಕಲಮ್

Article-51-ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವ ಕಲಮ್
Article- 78-ರಾಷ್ಟ್ರಪತಿ ಮತ್ತು ಪ್ರದಾನಮಂತ್ರಿಯವರ ಸಂಬಂದದ ಕುರಿತು

Article245 to 300- ಕೇಂದ್ರ ರಾಜ್ಯಗಳ ಸಂಬಂದ

Article 243-ಪಂಚಾಯತ್ ರಾಜ್ಯಗಳ ಬಗ್ಗೆ

Article 315 to 323-ಲೋಕಸೇವಾ ಆಯೋಗ

Article 324-329- ಚುನಾವಣ ಆಯೋಗ
Article 268 to 281- ಕೇಂದ್ರ ಮತ್ತು ರಾಜ್ಯಗಳಹಣಕಾಸು

Article 309-323 – ಸಾರ್ವಜನಿಕ ಸೇವೆ

Article -370- ಜಮ್ಮು ಕಾಶ್ಮೀರದ ಬಗ್ಗೆ

Article 51 (a)- ಮೂಲಭೂತ ಕರ್ತವ್ಯ

Article 54/55- ರಾಷ್ಟ್ರಪತಿ ಚುನಾವಣೆ
Article 61- ರಾಷ್ಟ್ರಪತಿ ಪದಚ್ಯುತಿ

Article 274- ರಾಷ್ಟ್ರಪತಿ ಅನುಮತಿ ಇಲ್ಲದೆ ತೆರಿಗೆ ಇನ್ನಿತರಮಸೂದೆಯನ್ನು ಪಾರ್ಲಿಮೆಂಟಿನಲ್ಲಿಮಂಡಿಸುವಂತಿಲ್ಲ

Article 72-ಕ್ಷಮಾದಾನ ನೀಡುವ ಅಧಿಕಾರರಾಷ್ಟ್ರಪತಿಗಿದೆ

Article 75- ಮಂತ್ರಿಗಳು ರಾಷ್ಟ್ರಪತಿಯವರ ವಿಶ್ವಾಸದಮೇರೆಗೆ ಅಧಿಕಾರದಲ್ಲಿರತಕ್ಕದು

Article 333- ರಾಜ್ಯಪಾಲರಿಗೆ ಆಂಗ್ಲೋಇಂಡಿಯನ್ನ್ ಸಮುದಾಯಕ್ಕೆ ಸೇರಿದ ಒಬ್ಬವ್ಯಕ್ತಿಯನ್ನು ವಿದಾನ ಸಬೆಗೆ ನಾಮಕರಣ ಮಾಡುವಅಧಿಕಾರ
Article -164- ಮುಖ್ಯಮಂತ್ರಿಗಳ ನೇಮಕ

Article 171- ವಿದಾನ ಪರಿಷತ್ ರಚನೆ

Article 226-ರಿಟ್ ಜಾರಿ

Article 170- ವಿದಾನ ಸಭೆಯ ರಚನೆ

Article 123- ಸುಗ್ರೀವಾಜ್ನೆ

 

Geography_Notes

💡ಭೂಕಂಪಗಳ ನಾಡು ಎಂದು ಕರೆಯುವ ದೇಶ- ಜಪಾನ

💡ಜ್ವಾಲಾಮುಖಿಗಳ ನಾಡು ಎಂದು ಕರೆಯುವ ದೇಶ – ಇಂಡೊನೇಷ್ಯಾ

💡ಜಪಾನಿನ ಭಾಷೆಯಲ್ಲಿ Tsunami ಶಬ್ದದಲ್ಲಿ Tsu ಪದದ ಅರ್ಥ- ಬಂದರು

💡 ಜಪಾನಿನ ಭಾಷೆಯ Tsunami ಶಬ್ದದಲ್ಲಿ nami ಪದದ ಅರ್ಥ- ಅಲೆ

💡ಪ್ರಪಂಚದ ಅತಿ ದೊಡ್ಡ ನದಿ ಮುಖಜ ಭೂಮಿ-ಗಂಗಾ ನದಿ ಮುಖಜ ಭೂಮಿ ಈ ಮುಖಜ ಭೂಮಿಯು ಕಮಾನಿನಾಕಾರದಲ್ಲಿದೆ (ArcutDelta)

💡ಪಕ್ಷಿಪಾದದ ಆಕಾರದಲ್ಲಿ ತನ್ನ  ಮುಖಜ ಭೂಮಿಯನ್ನು ನಿರ್ಮಿಸಿದ ನದಿ- ಮಿಸಿಸಿಪ್ಪಿ ನದಿ

💡 ಭೂಕಂಪದ ವಿನಾಶಕಾರಿ ಅಲೆಗಳೆಂದು ಕರೆಯುವ ಅಲೆ- ಮೇಲ್ಮೈ ಅಲೆಗಳು

💡ಭೂಕಂಪದ  ಅಲೆಗಳಲ್ಲಿ ಲವ್ ವೇವ್ಸ ಎಂದು ಕರೆಯುವ ಅಲೆಗಳು- ಮೇಲ್ಮೈ ಅಲೆಗಳು ಅಥವಾ ರೇಲೈ ಅಲೆಗಳು (Rayleigh wave)

💡ಜಗತ್ತಿನ ಅತಿ ದೊಡ್ಡ ಶೀತ ಮರಭೂಮಿ- ಅಂಟಾರ್ಕ್‌ಟಿಕ್ ಮರಭೂಮಿ

💡 ಜಗತ್ತಿನ ಅತಿ ದೊಡ್ಡ ಉಷ್ಣ ಮರಭೂಮಿ- ಸಹಾರಾ ಮರಭೂಮಿ

💡 ಪ್ರಪಂಚದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಸೂಪಿರಿಯರ್ ಸರೋವರ (ಅಮೇರಿಕಾ)

💡 ಪ್ರಪಂಚದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಕ್ಯಾಸ್ಪಿಯನ್ ಸರೋವರ (ಇರಾನ್)

💡 ಪ್ರಪಂಚದ ಅತ್ಯಂತ ಎತ್ತರ ಮಟ್ಟದಲ್ಲಿ ಇರುವ ನೀರಿನ ಸರೋವರ –  ಸೋಸೆಕೋರು ಸರೋವರ (ಟಿಬೆಟ)

💡 ಭಾರತದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಊಲರ್ ಸರೋವರ (ಜಮ್ಮು ಕಾಶ್ಮೀರ)

💡 ಭಾರತದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಚಿಲ್ಕಾ ಸರೋವರ (ಒರಿಸ್ಸಾ)

💡 ಭಾರತದ ಸರೋವರಗಳ ನಾಡು ಎನ್ನುವ ರಾಜ್ಯ- ಜಮ್ಮು ಕಾಶ್ಮೀರ್

💡 ಸಹಸ್ರ ಸರೋವರಗಳ ನಾಡು ಎಂದು ಕರೆಯುವ ದೇಶ – ಪಿನಲ್ಯಾಂಡ (ಸ್ಕಾಂಡಿನೇವಿಯಾ ದೇಶ)

💡ಅಮೇರಿಕ & ಕೆನಡಾ ದೇಶಗಳಿಗೆ ಪಂಚ ಸರೋವರಗಳ ನಾಡು ಎಂದು ಕರೆಯುವರು.

💡 ಪ್ರಪಂಚದ ಅತ್ಯಂತ ದೊಡ್ಡ ಕೃತಕ ಸರೋವರ –  ಓವೇನ್ ಫಾಲ್ ಸರೋವರ(ಉಗಾಂಡಾ)

💡 ಭಾರತದ ಅತ್ಯಂತ ದೊಡ್ಡ ಕೃತಕ ಸರೋವರ – ನಾಗಾರ್ಜುನ ಸರೋವರ (ಆಂದ್ರಪ್ರದೇಶ)

💡 ಪ್ರಪಂಚದ ಅತ್ಯಂತ ಆಳವಾದ  ಸರೋವರ-  ಬೈಕಲ್ ಸರೋವರ(ರಷ್ಯಾ)

💡 ಮೊಟ್ಟಮೊದಲ ಬಾರಿಗೆ ಭೂಪಟದ ಮೇಲೆ ಅಕ್ಷಾಂಶ & ರೇಖಾಂಶಗಳನ್ನು  ಪರಿಚಯಿಸಿದರು- ಟಾಲಮಿ
ಟಾಲಮಿ ಗ್ರೀಕ್ ದೇಶದ ಖಗೋಳಶಾಸ್ತ್ರಜ್ನ ಕ್ರಿ.ಶ 5 ನೇ ಶತಮಾನದಲ್ಲಿ ಅಕ್ಷಾಂಶ ಮತ್ತು ರೇಖಾಂಶಗಳನ್ನು ಪರಿಚಯಿಸಿದನು.

💡 ಆಮ್ಲಜನಕದ ತೀವ್ರತೆಯನ್ನು ಕಡಿಮೆ ಮಾಡಿ ಜೀವಿಗಳಿಗೆ ಉಸಿರಾಡಿಸಲು ಅನುಕೂಲ ಮಾಡಿಕೊಡುವ ಅನಿಲ- ಸಾರಜನಕ

💡 ಸಾರಜನಕ ಇದು ಜಡವಾದ ಅನಿಲ.
🔸ಸಸ್ಯಗಳ ಬೆಳವಣಿಗೆಗೆ ಅನುಕೂಲವಾಗಿದೆ.
🔸ಸಾರಜನಕ ಮಣ್ಣಿನ ಫಲವತ್ತತೆಗೊಳಿಸುವ ಅನಿಲ.
🔸ವಾಯುಮಂಡಲದಲ್ಲಿ ಶೇ 78 ರಷ್ಟಿದೆ

💡 ಆಮ್ಲಜನಕವನ್ನು ಶೋಧಿಸಿದವರು – ಜೋಸೆಫ್ ಪ್ರಿಸ್ಲೆ
🔸ಆಮ್ಲಜನಕವು ವಾಯುಮಂಡಲದಲ್ಲಿ ಶೇ 20.94 ರಷ್ಟಿದೆ ..

💡ಟಂಗ್‌ಸ್ಟನ್ ವಿದ್ಯುತ್ ದೀಪಗಳಲ್ಲಿ ಉಪಯೋಗಿಸುವ ಅನಿಲ – ಆರ್ಗಾನ
🔸ನಿಯಾನ್ ಅನಿಲವನ್ನು ಬಣ್ಣ ಬಣ್ದದ ಬಲ್ಬ್ ತಯಾರಿಸಲು ಉಪಯೋಗಿಸುತ್ತಾರೆ.

💡 ಅತಿ ಹಗುರವಾದ ಅನಿಲ-ಜಲಜನಕ
🔸ಜಲಜನಕ & ಹೀಲಿಯಂ ಅನಿಲಗಳನ್ನು ಮಿಶ್ರಣ ಮಾಡಿ ಬಲೂನಗಳಲ್ಲಿ ತುಂಬಲು ಉಪಯೋಗಿಸುತ್ತಾರೆ.

💡 ಅತಿ ಭಾರವಾದ ಅನಿಲ- ಸಾರಜನಕ

💡 ನಗಿಸುವ ಅನಿಲ – ನೈಟ್ರೇಟ್ ಆಕ್ಸೈಡ್

💡  ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲ- ಕ್ಲೋರೋ ಪ್ಲೋರೊ ಕಾರ್ಬನ್ .

🔸ಕ್ಲೋರಿನ್ ಪ್ಲೋರೊ ಕಾರ್ಬನ್ & ನೈಟ್ರೇಸ ಆಕ್ಸೈಡ್ ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲಗಳಾಗಿವೆ

💡 ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲ –  ಕಾರ್ಬನ್ ಡೈ ಆಕ್ಸೈಡ

🔸ಕಾರ್ಬನ್ ಡೈ ಆಕ್ಸೈಡ, ನೈಟ್ರೇಸ್ ಆಕ್ಸೈಡ್, ಮೀಥೇನ್ ಇವು  ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲಗಳಾಗಿವೆ.

💡ಓಝೋನ ಪದರನ್ನು  ಶೋಧಿಸಿದವರು –  ಚಾರ್ಲ್ಸ್‌ ಪ್ಯಾಬ್ರೆ
🔸ಚಾರ್ಲ್ಸ್‌ ಪ್ಯಾಬ್ರೆ ಮತ್ತು ಹೆನ್ರಿ ಬುಯಸನ್ ರವರು 1913 ರಲ್ಲಿ ಓಝೋನ ಪದರನ್ನು ಕಂಡುಹಿಡಿದರು.

💡 ಹವಾಮಾನದ ವಿದ್ಯಮಾನಗಳು ಕಂಡು ಬರುವ ವಾಯುಮಂಡಲದ ಭಾಗ- ಪರಿವರ್ತನ ಮಂಡಲ

💡 ಪರಿವರ್ತನ ಮಂಡಲದಲ್ಲಿ ಪ್ರತಿ 1 ಕಿ.ಮೀ ಎತ್ತರಕ್ಕೆ ಹೋದಂತೆ 6.5° ಸೆಂಟಿಗ್ರೇಡ್ ಡಿಗ್ರಿ ಉಷ್ಣಾಂಶ ಕಡಿಮೆಯಾಗುತ್ತದೆ.

💡 ಉಲ್ಕೆಗಳು ವಾಯುಮಂಡಲದ
ಮಧ್ಯ ಮಂಡಲದ ಸ್ತರವನ್ನು ಪ್ರವೇಶಿಸಿದ ತಕ್ಷಣ ಕರಗಿ ಹೋಗುತ್ತವೆ.

💡 ಇಂಜಿನಿಯರಗಳ ಸ್ತರ ಎಂದು ಕರೆಯುವ ವಾಯುಮಂಡಲದ  ಸ್ತರ- ಆಯಾನ ಮಂಡಲ
🔸ಆಯಾನ ಸ್ತರವನ್ನು 1902 ರಲ್ಲಿ ಕೆನೆಲಿ, & ಹೆವಿಸೈಡ ಇಂಜಿನಿಯರಗಳು ಶೋಧಿಸಿದ್ದಾರೆ, ಆದ್ದರಿಂದ ಇದನ್ನು ಇಂಜಿನಿಯರಗಳ ಸ್ತರ ಎನ್ನುವರು

💡 ಓಜೋನ ವಲಯವು ಕಂಡುಬರುವ  ವಾಯುಮಂಡಲದ  ಸ್ತರ- ಸಮೊಷ್ಣ ಮಂಡಲ

💡  ಜೆಟ್ ವಿಮಾನಗಳ ಹಾರಾಟಕ್ಕೆ ಅನುಕೂಲವಾಗಿರುವ
ವಾಯುಮಂಡಲದ  ಸ್ತರ – ಸಮೊಷ್ಣ ಮಂಡಲ

💡ವಾನ್ ಅಲೇನ್ ಸ್ತರ ಎಂದು ಕರೆಯುವ ವಾಯುಮಂಡಲದ  ಸ್ತರ- ಬಾಹ್ಯ ಮಂಡಲ
🔸ಬಾಹ್ಯಮಂಡಲವನ್ನು ವಾನ್ ಅಲೆನ್ 1959 ರಲ್ಲಿ ಕಂಡುಹಿಡಿದಿದ್ದಾನೆ ಆದ್ದರಿಂದ ಈ ಸ್ತರವನ್ನು ವಾನ್ ಅಲೆನ್ ಸ್ತರ ಎನ್ನುವರು.

💡 ಕಾಂತತ್ವಮಂಡಲ ಎಂದು ಕರೆಯುವ ವಾಯುಮಂಡಲದ  ಸ್ತರ- ಬಾಹ್ಯ ಮಂಡಲ

💡 ವಾಯುಭಾರ ಮಾಪಕವನ್ನು (ಬಾರೋಮೀಟರ) ಕಂಡು ಹಿಡಿದವರು-ಟಾರಿಸೆಲ್ಲಿ

💡 ದೂರದರ್ಶನ ಮತ್ತು ಆಕಾಶವಾಣಿಗೆ ಸಹಾಯಕವಾಗಿರುವ ವಾಯುಮಂಡಲದ  ಸ್ತರ- ಆಯಾನ ಮಂಡಲ
🔸ಆಯಾನ ಮಂಡಲವು ಆಕಾಶವಾಣಿ ಮತ್ತು ದೂರದರ್ಶನದ ಬೇರೆ ಬೇರೆ ತರಂಗಗಳನ್ನು ಭೂಮಿಗೆ ಪ್ರತಿಫಲಿಸುತ್ತದೆ.

💡ಅತ್ಯಂತ ದೊಡ್ಡ ಸಾಗರ – ಫೆಸಿಪಿಕ ಸಾಗರ

💡 S ಆಕಾರದಲ್ಲಿರುವ  ಸಾಗರ – ಅಟ್ಲಾಂಟಿಕ್  ಸಾಗರ

💡 ಬರ್ಮುಡಾ ಟ್ರಯಾಂಗಲ್  ಕಂಡು ಬರುವುದು – ಅಟ್ಲಾಂಟಿಕ್  ಸಾಗರ

🔸ಬರ್ಮುಡಾ ಟ್ರಯಾಂಗಲ್ (ಸೈತಾನನ ತ್ರಿಕೋನ ಎಂದು ಸಹ ಕರೆಯುತ್ತಾರೆ

💡ಅತ್ಯಂತ ಚಿಕ್ಕ ಹಾಗೂ ಆಳವಾದ ಸಾಗರ – ಆರ್ಟಿಕ್ ಮಹಾ ಸಾಗರ

💡 “ರತ್ನಾಕರ” ಎಂದು ಕರೆಯುವ ಸಾಗರ- ಹಿಂದೂ ಮಹಾ ಸಾಗರ

💡  ಕಗ್ಗತ್ತಲೆಯ ಖಂಡ ಎಂದು ಕರೆಯುವ ಖಂಡ- ಆಫ್ರಿಕಾ

💡ದ್ವೀಪ ಖಂಡ ಎಂದು ಕರೆಯುವ ಖಂಡ- ಆಸ್ಟ್ರೇಲಿಯಾ

💡 ಡೆತ್ ವ್ಯಾಲಿ ಅಥವಾ ಸಾವಿನ ಕಣಿವೆ ಇದು  ಕಂಡು ಬರುವ ಖಂಡ- ಉ.ಅಮೆರಿಕ

💡  ವಿಜ್ನಾನಿಗಳ ಖಂಡ ಎಂದು ಕರೆಯುವ ಖಂಡ – ಅಂಟಾರ್ಕಟಿಕ್ ಈ ಖಂಡವನ್ನು ಬಿಳಿಯ ಖಂಡ, ಸಂಶೋಧನಾ ಖಂಡ ಕೂಡ ಎನ್ನುವರು

💡ಜಗತ್ತಿನ ಅತಿ ಚಿಕ್ಕ ನದಿ – ರೊಯಿ

Vijayanagar Dynasty

ವಿಜಯ ನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯಕ್ಕೆ ತಳಹದಿಯನ್ನು ಹಾಕಿದವರು – ಸಂಗಮನ ಮಕ್ಕಳಾದ – ಹರಿಹರ ಮತ್ತು ಬುಕ್ಕರು

ಸಂಗಮ ವಂಶ

 

 1. 1 ನೇ ಹರಿಹರ – 1336 – 1356
 2. 1 ನೇ ಬುಕ್ಕ – 1356 – 1377
 3. 2ನೇ ಹರಿಹರ – 1377 – 1404
 4. 1 ನೇ ವಿರುಪಾಕ್ಷಾ – 1404 – 1405
 5. 2ನೇ ಬುಕ್ಕ – 1405 – 1406
 6. 1 ನೇ ದೇವರಾಯ – 1406 – 1422
 7. ರಾಮಚಂದ್ರ – 1422 – 1422
 8. ವೀರ ವಿಜಯ – 1422 – 1424
 9. 2 ನೇ ದೇವರಾಯ ( ಫ್ರೌಢ ದೇವರಾಯ ) – 1424 – 1446
 10. ಮಲ್ಲಿಕಾರ್ಜುನ – 1466 – 1465
 11. 2 ನೇ ವಿರೂಪಾಕ್ಷ – 1465 1485
 12. ಫ್ರೌಢದೇವರಾಯ – 1485

ಸಾಳ್ವ ವಂಶ

 1. ಸಾಳುವ ನರಸಿಂಹ – 1485 – 1491
 2. ತಿಮ್ಮ ಭೂಪ – 1491
 3. 2 ನೇ ನರಸಿಂಹ – 1491 – 1503

 ತುಳುವ ವಂಶ

 1. ವೀರ ನರಸಿಂಹ – 1503 – 1505
 2. 2 ನೇ ನರಸಿಂಹ – 1050 – 1509
 3. ಕೃಷ್ಮದೇವರಾಯ – 1509 – 1529
 4. ಅಚ್ಚುತ ರಾಯ – 1529 – 1542
 5. 1 ನೇ ವೆಂಕಟರಾಯ – 1542
 6. ಸದಾಶಿವರಾಯ – 1542 – 1570

ಅರವಿಡು ವಂಶ

 1. ತಿರುಮಲ ರಾಯ –
 2. 1 ನೇ ವೆಂಕಟರಾಯ
 3. ಶ್ರೀರಂಗರಾಯ
 4. 2 ನೇ ವೆಂಕಟಾದ್ರಿ
 5. 2 ನೇ ಶ್ರೀರಂಗ
 6. ರಾಮದೇವ ( ಮಂತ್ರಿ ವಿಚ್ಚಮ ನಾಯಕ )
 7. 3 ನೇ ವೆಂಕಟ ರಾಯ
 8. 3 ನೇ ರಂಗರಾಯ ( ಸಾಮ್ರಾಜ್ಯ ರಹಿತ )

ವಿಜಯನಗರಕ್ಕೆ ಬೇಟಿ ನೀಡಿದ ಪ್ರವಾಸಿಗರ ಪಟ್ಟಿ

 1. ನಿಕಲೋ ಕೊಂತಿ ಿಟಲಿ ದೇಶ 1420 ರಲ್ಲಿ 1ನೇ ದೇವರಾಯ ಅರಸನ ಕಾಲದಲ್ಲಿ ಬೇಟಿ ನೀಡಿದ
 2. ಅಬ್ದುಲ್ ರಜಾಕ್ ಪರ್ಶಿಯಾ ದೇಶ 1443 ರಲ್ಲಿ 2 ನೇ ದೇವರಾಯ ್ರಸನ ಕಾಲದಲ್ಲಿ ಬೇಟಿಯಾದ
 3. ನಿಕೆಟಿನ್ ರಷ್ಯದ ಪ್ರವಾಸಿ 1470 ರಲ್ಲಿ ವಿರೂಪಾಕ್ಷ ಅರಸನ ಕಾಲದಲ್ಲಿ ಬೇಟಿ ನೀಡಿದ
 4. ಬಾರ್ಬೋಸ ಪೋರ್ಚುಗಲ್ ದೇಶದವ 1514 – 1516 ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಬೇಟಿ ನೀಡಿದ
 5. ಡೋಮಿಂಗೋ ಪಯಾಸ್ ಪೋರ್ಚುಗಲ್ ದೇಶದವ 1520 ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಬೇಟಿ ನೀಡಿದ
 6. ನ್ಯೂನಿಜ್ ಪೋರ್ಚುಗಲ್ ದೇಶದವ 1535 ರಲ್ಲಿ ಅಚ್ಚುತ ರಾಯನ ಕಾಲದಲ್ಲಿ ಬೇಟಿಯಾದ

 ವಿಜಯನಗರ ಸಾಮ್ರಾಜ್ಯದ ಹುಟ್ಟಿಗೆ ಕಾರಣವಾದ ಅಂಶ

 1. ಹೆದಲಿಯ ಸ್ಲಾನ ಅಲ್ಲಾವುದ್ದೀನ್ ಖಿಲ್ಜಿ ದಕ್ಷಿಣ ಭಾರತದ ರಾಜಕೀಯ ಸಮತೋಲನಕ್ಕೆ ಭಂಗವುಂಟುಮಾಡಿದ್ದು
 2. ಕ್ರಿ.ಶ. 1296 ದೆಹಲಿಯ ಸುಲ್ತಾನನಾಗಿ ಅಧಿಕಾರ ಮಹಿಸಿಕೊಂಡ ಮಹಮ್ಮದ್ ಬಿನ್ ತುಘಲಕ್ ದಕ್ಷಿಣ ಭಾರತವನ್ನು ನೇರ ಆಳ್ವಿಕೆಗೆ ಒಳಪಡಿಸಿದ್ದು
 3. ಸ್ಥಿರವಾದ ಆಡಳಿತ ಕೊಡುವಲ್ಲಿ ತುಘಲಕ್ ವಿಫಲವಾಗಿದ್ದು
 4. ದಕ್ಷಿಣ ಭಾರತದ ಜನತೆಯಲ್ಲಿ ಅಭದ್ರತೆ ವಾತಾವರಣ ಉಂಟಾಗಿದ್ದು .

ವಿಜಯ ನಗರವನ್ನಾಳಿದ ವಂಶಗಳು

 1. ಸಂಗಮ ವಂಶ 1336 – 1485 – ರಾಜಧಾನಿ ಹಂಪಿ
 2. ಸಾಳುವ ವಂಶ 1485 – 1505 ರಾಜಧಾನಿ ಹಂಪಿ
 3. ತುಳುವ ವಂಶ 1505 – 1570 ರಾಜಧಾನಿ ಹಂಪಿ , ಪೆನುಗೊಂಡ
 4. ಅರವೀಡು ವಂಶ 1570 – 1646 – ರಾಜಧಾನಿ ಪೆನುಗೊಂಡ ,ವೆಲ್ಲೂರು ಹಾಗೂ ಚಂದ್ರಗಿರ

PS_Notes

ಪ್ರಮುಖ ಹುದ್ದೆಗಳ ಅವದಿ

 ರಾಷ್ಟ್ರಪತಿ 5 ವರ್ಷಗಳು
 ಉಪರಾಷ್ಟ್ರಪತಿ 5 ವರ್ಷಗಳು
 ರಾಜ್ಯ ಸಭಾ ಸದಸ್ಯ 6 ವರ್ಷಗಳು
 ಲೋಕ ಸಭಾ ಸದಸ್ಯ 5 ವರ್ಷಗಳು
 ರಾಜ್ಯಪಾಲರು  5 ವರ್ಷಗಳು
 ವಿಧಾನ ಸಭಾ ಸದಸ್ಯ 5 ವರ್ಷಗಳು
 ವಿಧಾನ ಪರಿಷತ್ ಸದಸ್ಯ 6 ವರ್ಷಗಳು

 

ಚುನಾವಣೆ ಸ್ಪರ್ಧಿಸುವ ವಯಸ್ಸು

 

ರಾಷ್ಟ್ರಪತಿ 35 ವರ್ಷಗಳು
 ಉಪರಾಷ್ಟ್ರಪತಿ 35 ವರ್ಷಗಳು
 ರಾಜ್ಯ ಸಭಾ ಸದಸ್ಯ 30 ವರ್ಷಗಳು
 ಲೋಕ ಸಭಾ ಸದಸ್ಯ 25 ವರ್ಷಗಳು
 ರಾಜ್ಯಪಾಲರು  35 ವರ್ಷಗಳು
 ವಿಧಾನ ಸಭಾ ಸದಸ್ಯ 25 ವರ್ಷಗಳು
 ವಿಧಾನ ಪರಿಷತ್ ಸದಸ್ಯ 30 ವರ್ಷಗಳು
 ಗ್ರಾಮ ಪಂಜಾಯತ್ ಸದಸ್ಯ 21 ವರ್ಷಗಳು
 ಮತದಾನ ವಯಸ್ಸು 18 ವರ್ಷಗಳು

 

Measurement Devices

ಅಳತೆಯ ಸಾಧನಗಳು

೧. ದಿಕ್ಸೂಚಿ  ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.
೨. ರೇಡಾಕ  ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.
೩. ಮೈಕ್ರೊಫೋನ್  ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.
೪. ಮೆಘಾಪೋನ್  ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.
೫. ಟೆಲಿಫೋನ್  ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.
೬. ಲ್ಯಾಕ್ಟೋಮೀಟರ್  ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.
೭. ಓಡೋಮೀಟರ್  ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.
೮. ಮೈಕ್ರೋಮೀಟರ್  ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ.
೯. ಮೈಕ್ರೋಸ್ಕೋಪ್  ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು.
೧೦. ಹೈಗ್ರೋಮೀಟರ್  ವಾತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.
೧೧. ಹೈಡ್ರೋಮೀಟರ್  ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ.
೧೨. ಹೈಡ್ರೋಫೋನ್  ನೀರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.
೧೩. ಹೈಡ್ರೋಸ್ಕೋಪ್  ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ
೧೪. ಥಮೋ೯ಮೀಟರ್  ಉಷ್ಣತೆಯನ್ನು  ಅಳೆಯಲು ಬಳಸುತ್ತಾರೆ.
೧೫. ಅಲ್ಟಿಮೀಟರ್  ಎತ್ತರ ಅಳೆಯಲು ಬಳಸುತ್ತಾರೆ.
೧೬. ಎಲೆಕ್ಟ್ರೋಮೀಟರ್  ವಿದ್ಯುತ್ ಅಳೆಯಲು ಬಳಸುತ್ತಾರೆ.
೧೭. ಪ್ಯಾದೋಮೀಟರ್  ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ.
೧೮. ಗ್ಯಾಲ್ವನೋಮೀಟರ್  ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
೧೯. ಮೈಕ್ರೋ ಆ್ಯಮೀಟರ್  ಸೂಕ್ಷ್ಮ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.
೨೦. ವೋಲ್ಟ್ ಮೀಟರ್  ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು ( ವೋಲ್ಟೇಜ್) ಬಳಸುತ್ತಾರೆ.
೨೧. ಥಮೋ೯ ಸ್ಟ್ಯಾಟ್  ನಿಧಿ೯ಷ್ಠ ಮಟ್ಟದ ಉಷ್ಣತೆಯನ್ನು ಅಳೆಯಲು
22.ಮ್ಯಾನೋಮೀಟರ್  ಅನಿಲ ಒತ್ತಡ ಅಳೆಯಲು
೨೩. ರಿಫ್ರ್ಯಾಕ್ಟೋಮೀಟರ್  ವಕ್ರೀಭವನ ಸುಚಾಂಕ ಅಳೆಯ
24. ಲೇಸರ್  ಏಕವಣಿ೯ಯ ಅತೀ ತೀವ್ರಬೆಳಕನ್ನು ಉತ್ಪಾದಿಸುವ ವಿಧಾನ
25. ದ್ಯುತಿಕೋಶ  ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ವಿಧಾನ
26. ಸೌರಕೋಶ  ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ಸಾಧನ
27. ಶುಷ್ಕಕೋಶ  ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನು ಪರಿವತಿ೯ಸುವ ವಿಧಾನ
28. ಸೆಂಟ್ರಿಪ್ಯೂಜ್  ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸುವ ಸಾಧನ
 29. ಅಸಿಲೇಟರ್  ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಉತ್ಪತ್ತಿ ಮಾಡುವ ಸಾಧನ
30. ಎ.ಸಿ.ಡೈನಮೋ  ಪಯಾ೯ಯ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ
31. ಡಿ.ಸಿ. ಡೈನಮೋ  ನೇರ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ
32. ಪೆರಿಸ್ಕೋಪ್  ನೀರಿನ ಆಳದಲ್ಲಿರುವ ಸಬ್ ಮೆರೀನ್ ನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡು ಹಿಡಿಯಲು
33. ಸೈಟೋಮೀಟರ್  ದೇಹದಲ್ಲಿರುವ ಜೀವಕೋಶಗಳ ಸಂಖ್ಯೆಯನ್ನು ಎಣಿಕೆ ಮಾಡಲು ಬಳಸುತ್ತಾರೆ.
34. ಸ್ಪೈರೋಮೀಟರ್  ಉಸಿರಾಡುವಾಗ ಗಾಳಿಯ ಪ್ರಮಾಣವನ್ನು  ಅಳೆಯಲು ಬಳಸುತ್ತಾರೆ.
35. ಎಂಡೋಸ್ಕೋಪ್  ದೇಹದ ಒಳ ಅಂಗಗಳನ್ನು ಪರಿಪರಿಯ ಬಡಿತವನ್ನು ಗ್ರಾಫಿಕ್ ಚಿತ್ರದ ರೂಪದಲ್ಲಿ ಉಪಯೋಗ:

 

Five Principles of Peaceful Coexistence

ಪಂಚಶೀಲ ತತ್ವಗಳು : ಕ್ರಿ ಶ 1954 ರಲ್ಲಿ ಚೀನಾದ ಪ್ರದಾನಿ ಚೌ ಎನ್‍ಲಾಯ್ ಮತು ಪಂಡಿತ ನೆಹರುರವರು ಮಾಡಿಕೊಂಡ ಒಪ್ಪಂದವು ಪಂಚಶೀಲ ತತ್ವಗಳನ್ನು ಒಳಗೊಂಡಿದೆ.

ಅವುಗಳೆಂದರೆ –

 • ಪರಸ್ಪರರ ಪರಮಾಧಿಕಾರ ಮತ್ತು ಪ್ರಾದೇಶಿಕ ಐಕ್ಯತೆಗಳನ್ನು ಗೌರವಿಸುವದು.
 • ಪರಸ್ಪರರ ಮೇಲೆ ಆಕ್ರಮಣ ಮಾಡದೇ ಇರುವದು.
 • ದೇಶಗಳ ಒಳಾಡಳಿತದಲ್ಲಿ ಹಸ್ತಕ್ಷೇಪ ಮಾಡದೆ ಇರುವದು.
 • ಸಮಾನತೆ ಮತ್ತು ಪರಸ್ಪರ ಹಿತಸಾಧನೆಗೆ ಶ್ರಮಿಸುವದು.
 • ಶಾಂತಿಯುತ ಸಹಜೀವನ.

 

 • ದಿವಂಗತ ಜವಾಹರಲಾಲ ನೆಹರುವರು ಭಾರತದ ವಿದೇಶಾಂಗ ನೀತಿಯ ಶಿಲ್ಪಿಯಾಗಿದ್ದಾರೆ.
 • ಭಾರತದ ವಿದೇಶಾಂಗ ನೀತಿಯಲ್ಲಿ ಅಹಿಂಸಾತತ್ವ, ಆದರ್ಶವಾದ, ಮಾನವೀಯ ಅನುಕಂಪ, ವ್ಯಾವಹಾರಿಕ ಕಾಠಿಣತೆಯನ್ನು ಕಾಣಬಹುದು.
 • ಭಾರತದ ವಿದೇಶಾಂಗ ನೀತಿಯು ಶಾಂತಿ ಹಾಗೂ ಸಹಬಾಳ್ವೆ ತತ್ವದ ಮೇಲೆ ಆಧಾರಿತವಾಗಿದೆ.
 • ವಿಶ್ವಶಾಂತಿ ಕಾಪಾಡಲೆಂದೇ ಎಲ್ಲಾ ರಾಷ್ಟ್ರಗಳೊಂದಿಗೆ ಸ್ನೇಹ ಹಾಗೂ ಸಹಬಾಳ್ವೆಯೊಂದಿಗೆ ಸಂಬಂಧಗಳನ್ನು ಮುಂದುವಿರಿಸಿಕೊಂಡು ಹೊಗಲು ನಿರ್ಧರಿಸಿತು.
 • ಅಲಿಪ್ತ ನೀತಿಯು ಪಂಚಶೀಲ ತತ್ವಗಳನ್ನು ಒಳಗೊಂಡಿದೆ.

International_Borderlines of India

ಭಾರತದ ಅಂತರ್ರಾಷ್ಟ್ರೀಯ ಗಡಿರೇಖೆಗಳು

   ಭಾರತದ ಒಟ್ಟು ಗಡಿ 21,300 ಕಿ.ಮೀ.
ಭೂ ಗಡಿ: 15,200 ಕಿ.ಮೀ.
ಜಲ ಗಡಿ: 6,100 ಕಿ.ಮೀ.
ದ್ವೀಪಗಳನ್ನೊಳಗೊಂಡಂತೆ ಒಟ್ಟು ಜಲ ಗಡಿ: 7,516.6 ಕಿ.ಮೀ.
ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿರುವ ದೇಶಗಳು ಒಟ್ಟು 7,  ಅವುಗಳು

*.ವಾಯುವ್ಯದಲ್ಲಿ : ಪಾಕಿಸ್ತಾನ ಮತ್ತು ಅಫಘಾನಿಸ್ತಾನ.
*.ಉತ್ತರದಲ್ಲಿ : ಚೀನಾ, ನೇಪಾಳ ಮತ್ತು ಭೂತಾನ್.
*.ಪೂರ್ವದಲ್ಲಿ : ಮಯನ್ಮಾರ್ ಹಾಗು ಬಾಂಗ್ಲಾದೇಶ.
ಭಾರತ ಮತ್ತು ಪಾಕಿಸ್ತಾನ:
*. ಅಂತರ್ರಾಷ್ಟ್ರೀಯ ಗಡಿರೇಖೆ:— ರಾೄಡ್ ಕ್ಲಿಪ್ ರೇಖೆ.
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 3310 ಕಿ.ಮೀ.
*. ಪಾಕಿಸ್ಥಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಕಾಶ್ಮೀರ.
*. ಪಾಕಿಸ್ಥಾನದೊಂದಿಗಿನ ವಿವಾದಿತ ಪ್ರದೇಶಗಳು:— ಗುಜರಾತಿನ ಕಛ್ ಜೌಗು ವಲಯ, ಸರ್ ಕ್ರಿಕ್ ಪ್ರದೇಶ, ಕಾಶ್ಮೀರ ಕಣಿವೆ, ಹುಂಜ-ಗಿಲ್ಗಿಟ್.

ಭಾರತ ಮತ್ತು ಚೀನಾ:
*. ಅಂತರ್ರಾಷ್ಟ್ರೀಯ ಗಡಿರೇಖೆ:— ಮ್ಯಾಕ್ ಮಹೋನ್ ರೇಖೆ.
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 3917 ಕಿ.ಮೀ.
*. ಚೀನಾದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ,
ಅರುಣಾಚಲ ಪ್ರದೇಶ.
*. ಚೀನಾದೊಂದಿಗಿನ ವಿವಾದಿತ ಪ್ರದೇಶಗಳು:— ಆಕ್ ಸಾಯ್ ಚಿನ್ (ಕಾಶ್ಮೀರದ ಪೂರ್ವ ಭಾಗ), ಅರುಣಾಚಲ ಪ್ರದೇಶ, ನತುಲಾ.

ಭಾರತ ಮತ್ತು ಅಫಘಾನಿಸ್ತಾನ:
*. ಅಂತರ್ರಾಷ್ಟ್ರೀಯ ಗಡಿರೇಖೆ:— ಡ್ಯೂರಾಂಡ್ ರೇಖೆ.
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 80 ಕಿ.ಮೀ.
*. ಅಫಘಾನಿಸ್ತಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು: — ಜಮ್ಮು ಕಾಶ್ಮೀರ.

ಭಾರತ ಮತ್ತು ನೇಪಾಳ:
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 1752 ಕಿ.ಮೀ.
*. ನೇಪಾಳದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ.
*. ನೇಪಾಳದೊಂದಿಗಿನ ವಿವಾದಿತ ಪ್ರದೇಶಗಳು:— ಕಪಾಲಿನಿ, ಸುಸ್ತಾ.

ಭಾರತ ಮತ್ತು ಭೂತಾನ್:
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 587 ಕಿ.ಮೀ.
*. ಭೂತಾನ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ಸಿಕ್ಕಿಂ, ಆಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ

. ಭಾರತ ಮತ್ತು ಮಯನ್ಮಾರ್:
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 1536 ಕಿ.ಮೀ.
*. ಮಯನ್ಮಾರ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:— ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ.
*. ಕೆಲವೆಡೆ ‘ಇರವಾಡಿ ನದಿ’ಯು ಅಂತರಾಷ್ಟ್ರೀಯ ಗಡಿಯಾಗಿದೆ.

ಭಾರತ ಮತ್ತು ಬಾಂಗ್ಲಾದೇಶ:
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 4096 ಕಿ.ಮೀ.
*. ಇದು ಭಾರತ ದೇಶ ಹೊಂದಿರುವ ಅತಿ ಉದ್ದವಾದ ಅಂತರ್ರಾಷ್ಟ್ರೀಯ ಗಡಿರೇಖೆಯಾಗಿದೆ.
*. ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:  ಆಸ್ಸಾಂ, ತ್ರಿಪುರಾ, ಮೇಘಾಲಯ, ಮಿಜೋರಾಂ, ಪಶ್ಚಿಮ ಬಂಗಾಳ.
*. ಬಾಂಗ್ಲಾದೇಶದೊಂದಿಗಿನ ವಿವಾದಿತ ಪ್ರದೇಶಗಳು:—ಪರಕ್ಕಾ ಆಣೆಕಟ್ಟು, ಚಕ್ಮಾ ನಿರಾಶ್ರಿತರು, ನ್ಯೂಮರ್ ದ್ವೀಪ, ತಿನ್ಬಿಕ್ ಪ್ರದೇಶ.
*. ಭಾರತ – ಬಾಂಗ್ಲಾ ದೇಶಗಳ ನಡುವೆ ಒಟ್ಟು 162 ಎನ್ ಕ್ಲೇವ್ (Enclave) ಗಳಿವೆ. ಇವುಗಳಲ್ಲಿ 111 ಭಾರತದ ಭೂ ಭಾಗಗಳು
ಬಾಂಗ್ಲಾದೇಶದೊಳಗೆ ಎಕ್ಸ್ ಕ್ಲೇವ್ (Exclave) ಗಳಾಗಿವೆ.*.ಬಾಂಗ್ಲಾದ 51 ಭೂ ಭಾಗಗಳು ಎನ್ ಕ್ಲೇವ್ (Enclave) ಆಗಿ
ಭಾರತದಲ್ಲಿವೆ.

%d bloggers like this: