Category Archives: History

Vijayanagar Dynasty

ವಿಜಯ ನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯಕ್ಕೆ ತಳಹದಿಯನ್ನು ಹಾಕಿದವರು – ಸಂಗಮನ ಮಕ್ಕಳಾದ – ಹರಿಹರ ಮತ್ತು ಬುಕ್ಕರು

ಸಂಗಮ ವಂಶ

 

 1. 1 ನೇ ಹರಿಹರ – 1336 – 1356
 2. 1 ನೇ ಬುಕ್ಕ – 1356 – 1377
 3. 2ನೇ ಹರಿಹರ – 1377 – 1404
 4. 1 ನೇ ವಿರುಪಾಕ್ಷಾ – 1404 – 1405
 5. 2ನೇ ಬುಕ್ಕ – 1405 – 1406
 6. 1 ನೇ ದೇವರಾಯ – 1406 – 1422
 7. ರಾಮಚಂದ್ರ – 1422 – 1422
 8. ವೀರ ವಿಜಯ – 1422 – 1424
 9. 2 ನೇ ದೇವರಾಯ ( ಫ್ರೌಢ ದೇವರಾಯ ) – 1424 – 1446
 10. ಮಲ್ಲಿಕಾರ್ಜುನ – 1466 – 1465
 11. 2 ನೇ ವಿರೂಪಾಕ್ಷ – 1465 1485
 12. ಫ್ರೌಢದೇವರಾಯ – 1485

ಸಾಳ್ವ ವಂಶ

 1. ಸಾಳುವ ನರಸಿಂಹ – 1485 – 1491
 2. ತಿಮ್ಮ ಭೂಪ – 1491
 3. 2 ನೇ ನರಸಿಂಹ – 1491 – 1503

 ತುಳುವ ವಂಶ

 1. ವೀರ ನರಸಿಂಹ – 1503 – 1505
 2. 2 ನೇ ನರಸಿಂಹ – 1050 – 1509
 3. ಕೃಷ್ಮದೇವರಾಯ – 1509 – 1529
 4. ಅಚ್ಚುತ ರಾಯ – 1529 – 1542
 5. 1 ನೇ ವೆಂಕಟರಾಯ – 1542
 6. ಸದಾಶಿವರಾಯ – 1542 – 1570

ಅರವಿಡು ವಂಶ

 1. ತಿರುಮಲ ರಾಯ –
 2. 1 ನೇ ವೆಂಕಟರಾಯ
 3. ಶ್ರೀರಂಗರಾಯ
 4. 2 ನೇ ವೆಂಕಟಾದ್ರಿ
 5. 2 ನೇ ಶ್ರೀರಂಗ
 6. ರಾಮದೇವ ( ಮಂತ್ರಿ ವಿಚ್ಚಮ ನಾಯಕ )
 7. 3 ನೇ ವೆಂಕಟ ರಾಯ
 8. 3 ನೇ ರಂಗರಾಯ ( ಸಾಮ್ರಾಜ್ಯ ರಹಿತ )

ವಿಜಯನಗರಕ್ಕೆ ಬೇಟಿ ನೀಡಿದ ಪ್ರವಾಸಿಗರ ಪಟ್ಟಿ

 1. ನಿಕಲೋ ಕೊಂತಿ ಿಟಲಿ ದೇಶ 1420 ರಲ್ಲಿ 1ನೇ ದೇವರಾಯ ಅರಸನ ಕಾಲದಲ್ಲಿ ಬೇಟಿ ನೀಡಿದ
 2. ಅಬ್ದುಲ್ ರಜಾಕ್ ಪರ್ಶಿಯಾ ದೇಶ 1443 ರಲ್ಲಿ 2 ನೇ ದೇವರಾಯ ್ರಸನ ಕಾಲದಲ್ಲಿ ಬೇಟಿಯಾದ
 3. ನಿಕೆಟಿನ್ ರಷ್ಯದ ಪ್ರವಾಸಿ 1470 ರಲ್ಲಿ ವಿರೂಪಾಕ್ಷ ಅರಸನ ಕಾಲದಲ್ಲಿ ಬೇಟಿ ನೀಡಿದ
 4. ಬಾರ್ಬೋಸ ಪೋರ್ಚುಗಲ್ ದೇಶದವ 1514 – 1516 ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಬೇಟಿ ನೀಡಿದ
 5. ಡೋಮಿಂಗೋ ಪಯಾಸ್ ಪೋರ್ಚುಗಲ್ ದೇಶದವ 1520 ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಬೇಟಿ ನೀಡಿದ
 6. ನ್ಯೂನಿಜ್ ಪೋರ್ಚುಗಲ್ ದೇಶದವ 1535 ರಲ್ಲಿ ಅಚ್ಚುತ ರಾಯನ ಕಾಲದಲ್ಲಿ ಬೇಟಿಯಾದ

 ವಿಜಯನಗರ ಸಾಮ್ರಾಜ್ಯದ ಹುಟ್ಟಿಗೆ ಕಾರಣವಾದ ಅಂಶ

 1. ಹೆದಲಿಯ ಸ್ಲಾನ ಅಲ್ಲಾವುದ್ದೀನ್ ಖಿಲ್ಜಿ ದಕ್ಷಿಣ ಭಾರತದ ರಾಜಕೀಯ ಸಮತೋಲನಕ್ಕೆ ಭಂಗವುಂಟುಮಾಡಿದ್ದು
 2. ಕ್ರಿ.ಶ. 1296 ದೆಹಲಿಯ ಸುಲ್ತಾನನಾಗಿ ಅಧಿಕಾರ ಮಹಿಸಿಕೊಂಡ ಮಹಮ್ಮದ್ ಬಿನ್ ತುಘಲಕ್ ದಕ್ಷಿಣ ಭಾರತವನ್ನು ನೇರ ಆಳ್ವಿಕೆಗೆ ಒಳಪಡಿಸಿದ್ದು
 3. ಸ್ಥಿರವಾದ ಆಡಳಿತ ಕೊಡುವಲ್ಲಿ ತುಘಲಕ್ ವಿಫಲವಾಗಿದ್ದು
 4. ದಕ್ಷಿಣ ಭಾರತದ ಜನತೆಯಲ್ಲಿ ಅಭದ್ರತೆ ವಾತಾವರಣ ಉಂಟಾಗಿದ್ದು .

ವಿಜಯ ನಗರವನ್ನಾಳಿದ ವಂಶಗಳು

 1. ಸಂಗಮ ವಂಶ 1336 – 1485 – ರಾಜಧಾನಿ ಹಂಪಿ
 2. ಸಾಳುವ ವಂಶ 1485 – 1505 ರಾಜಧಾನಿ ಹಂಪಿ
 3. ತುಳುವ ವಂಶ 1505 – 1570 ರಾಜಧಾನಿ ಹಂಪಿ , ಪೆನುಗೊಂಡ
 4. ಅರವೀಡು ವಂಶ 1570 – 1646 – ರಾಜಧಾನಿ ಪೆನುಗೊಂಡ ,ವೆಲ್ಲೂರು ಹಾಗೂ ಚಂದ್ರಗಿರ
Advertisements

List of Governor General and Viceroy of British India

ಗವರ್ನರ್ ಜನರಲ್ ಮತ್ತು ಬ್ರಿಟಿಷ್ ಭಾರತದ ವೈಸ್ರಾಯ್ ಗಳ ಪಟ್ಟಿ

1.ವಾರನ್ ಹೇಸ್ಟಿಂಗ್ಸ್  (1774 – 1785)

(1) ಮೊದಲ ಬಂಗಾಳದ ಗವರ್ನರ್ ಜನರಲ್ ,
(2) ಇತನ ಅಧಿಕಾರಾವಧಿಯಲ್ಲಿ ರೆಗ್ಯುಲೇಟಿಂಗ್ 1773 ಕಾಯಿದೆಯನ್ನು ಪರಿಚಯಿಸಲಾಯಿತು. ಇದು ಬಂಗಾಳದಲ್ಲಿದ್ದ ದ್ವಿಮುಖ ಸರ್ಕಾರದ ಅಂತ್ಯಗೊಳಿಸಿತು.
(3) ಇತನನ್ನು ಆಡಳಿತದ ಕೆಟ್ಟ ನಿರ್ವಹಣೆ ಮತ್ತು ವೈಯಕ್ತಿಕ ಭ್ರಷ್ಟಾಚಾರದ ಕಾರಣಗಳಿಂದ ವಜಾಗೊಳಿಸಲಾಯಿತು. ಆದರೆ ಅಂತಿಮವಾಗಿ ನಿರ್ದೋಷಿಯೆಂದು ತೀರ್ಮಾನಿಸಲಾಯಿತು.
(4) ಕಂದಾಯ ಮಂಡಳಿ ಮತ್ತು ವ್ಯಾಪಾರ ಮಂಡಳಿಯ ರಚನೆ.
(5) ಜಿಲ್ಲಾಧಿಕಾರಿ ಹುದ್ದೆ ಸೃಷ್ಟಿ.

2.ಲಾರ್ಡ್ ಕಾರ್ನ್ ವಾಲಿಸ್ (1786 – 1793)

(1) ಬಂಗಾಳದಲ್ಲಿ ಖಾಯಂ ಜಮೀನ್ದಾರೀ ಪದ್ಧತಿ ಜಾರಿಗೆ (1793)
(2) ಪೊಲೀಸ್ ಠಾಣೆಗಳ ಸ್ಥಾಪನೆ. ಪೊಲೀಸ್ ಸುಧಾರಣೆಗಳು ಜಾರಿಯಾದವು.
(3) ಮೈಸೂರು ರಾಜ ಟಿಪ್ಪು ಸುಲ್ತಾನನನ್ನು ಸೋಲಿಸಲು ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಪಡೆಗಳ ಭಾಗಿ.

3.ಲಾರ್ಡ್ ವೆಲ್ಲೆಸ್ಲಿ (1798 – 1805) 

(1) ಭಾರತೀಯ ರಾಜರನ್ನು ನಿಯಂತ್ರಿಸಲು ಸಹಾಯಕ ಸೈನ್ಯ ಪದ್ಧತಿ (policy of Subsidiary Alliance) ಯನ್ನು ಪರಿಚಯಿಸಿದ.
(2) ಹೈದರಾಬಾದ್ ಪ್ರಾಂತ್ಯವು ಈ ಸಹಾಯಕ ಸೈನ್ಯ ಪದ್ಧತಿಗೆ ಒಳಗಾದ ಮೊದಲ ದೇಶೀಯ ಸಂಸ್ಥಾನ.

4.ಲಾರ್ಡ್ ಮಿಂಟೋ I (1807 – 1813)

(1) ಮಹಾರಾಜ ರಂಜಿತ್ ಸಿಂಗ್ ನೊಂದಿಗೆ ಅಮೃತಸರ ಒಡಂಬಡಿಕೆ.

5.ಮಾರ್ಕ್ವೆಸ್ಟ್ ಆಫ್ ಹೇಸ್ಟಿಂಗ್ (1813-1823)

(1) ಉನ್ನತ ಹುದ್ದೆಗಳಿಗೆ ಭಾರತೀಯರನ್ನು ನೇಮಿಸಿದ ಮೊದಲಿಗ.
(2) ಟೆನೆನ್ಸಿ ಕಾಯಿದೆ (1828)

6.ಲಾರ್ಡ್ ವಿಲಿಯಂ ಬೆಂಟಿಂಕ್ (1828 – 1835)

(1) ಭಾರತದ ಮೊದಲ ಗವರ್ನರ್ ಜನರಲ್ ನಾಗಿ ನೇಮಕ. (ಈ ಮೊದಲು ಬಂಗಾಳದ ಗವರ್ನರ್ ಜನರಲ್ ಎಂಬ ಹುದ್ದೆ ಇತ್ತು).
(2) ಸತಿ ಪದ್ಧತಿಯ ನಿಷೇಧ.
(3) ಭಾರತೀಯರನ್ನು ಮತ್ತೆ ಅಧೀನ ನ್ಯಾಯಾಧೀಶರಾಗಿ ನೇಮಕ ಜಾರಿ,
(4) ಇಂಗ್ಲೀಷ್ ಉನ್ನತ ಶಿಕ್ಷಣದ ಭಾಷೆಯಾಯಿತು.
(5) ಮಧ್ಯ ಭಾರತದಲ್ಲಿ ಥಗ್ಗರನ್ನು ನಿಗ್ರಹಿಸಲಾಯಿತು.
(6) 1835ರಲ್ಲಿ ಕಲ್ಕತ್ತಾದಲ್ಲಿ ವೈದ್ಯಕೀಯ ಕಾಲೇಜು ಆರಂಭ.

7.ಸರ್ ಚಾರ್ಲ್ಸ್ ಮೆಟಾಕೆಫ್ (1835 – 1836)

(1) ಮೊದಲ ಬಾರಿಗೆ ದೇಶೀಯ ಪತ್ರಿಕೆಗಳಿಗೆ ಸ್ವಾತಂತ್ರ್ಯ. ಎಲ್ಲಾ ನಿರ್ಬಂಧಗಳನ್ನು ರದ್ದು. (ಭಾರತದ ವೃತ್ತ ಪತ್ರಗಳ ನಿರ್ಬಂಧ ವಿಮೋಚಕ)

8.ಲಾರ್ಡ್ ಆಕ್ಲೆಂಡ್ (1836 – 1842)

(1) ಮೊದಲ ಅಫಘಾನ್ ಯುದ್ಧ.

9.ಲಾರ್ಡ್ ಡಾಲ್ ಹೌಸಿ (1848 – 1856)

(1) ಬಾಂಬೆಯಿಂದ ಥಾಣೆಯವರೆಗೆ ಮೊದಲ ಭಾರತೀಯ ರೈಲ್ವೆ ಮಾರ್ಗ ನಿರ್ಮಾಣ. (1853)

(2) ಕೋಲ್ಕತ್ತಾದಿಂದ ಆಗ್ರಾದವರೆಗೆ ಟೆಲಿಗ್ರಾಫ್ ತಂತಿಯ ನಿರ್ಮಾಣ. (1853)
(3) ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಪದ್ಧತಿ ಜಾರಿಗೆ. ಆ ಮೂಲಕ ಸತಾರ (1848), ಜೈಪುರ ಮತ್ತು ಸಂಬಲ್ ಪುರ್ (1849), ಉದಯ್ ಪುರ (1852), ಝಾನ್ಸಿ (1853) ಮತ್ತು ನಾಗ್ಪುರ (1854) ರಾಜ್ಯಗಳನ್ನು ವಶಪಡಿಸಿಕೊಳ್ಳಲಾಯಿತು.
(4) ಶಿಮ್ಲಾವನ್ನು ಬೇಸಿಗೆ ರಾಜಧಾನಿಯಾಗಿ ಮಾಡಿದ.
(5) ಲೋಕೋಪಯೋಗಿ ಇಲಾಖೆ ರಚನೆ
(6) ವಿಧವಾ ಮರುವಿವಾಹ ಕಾಯಿದೆ, (1856)ಯ ಅನುಷ್ಠಾನದೊಂದಿಗೆ ವಿಧವೆಯರ  ಮರುಮದುವೆ ಕಾನೂನುಬದ್ಧಗೊಳಿಸಲಾಯಿತು.
(7) ಭಾರತೀಯ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆ ಪ್ರಾರಂಭ (1853)

10.ಲಾರ್ಡ್ ಕ್ಯಾನಿಂಗ್ (1856 – 1862)

(1)1857ರ (ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ) ಸಿಪಾಯಿ ದಂಗೆಯ ಸಮಯದಲ್ಲಿದ್ದ ಗವರ್ನರ್ ಜನರಲ್. ದಂಗೆಯ ನಂತರ ಭಾರತದ ಮೊದಲ ವೈಸ್ರಾಯ್ ನಾಗಿ ನೇಮಕ.
(2) ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಪದ್ಧತಿ ರದ್ದು.
(3) 1861ರಲ್ಲಿ ಭಾರತೀಯ ಕೌನ್ಸಿಲ್ ಕಾಯಿದೆ ಜಾರಿಗೆ.
(4) 1854 ರ ‘ವುಡ್ಸ್ ಡಿಸ್ ಪ್ಯಾಚ್’ ನ ಪ್ರಕಾರ ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್ ವಿಶ್ವವಿದ್ಯಾಲಗಳ ಆರಂಭ.
(5) 1858ರ ವಿಕ್ಟೋರಿಯಾ ಮಹಾರಾಣಿಯ ಮಹಾಸನ್ನದು “ಭಾರತದ ಮ್ಯಾಗ್ನಾಕಾರ್ಟಾ” ಪ್ರಕಟ.
(6) 1837ರಲ್ಲಿ ಮೆಕಾಲೆಯು ತಯಾರಿಸಿದ್ದ ‘ಭಾರತೀಯ ದಂಡ ಸಂಹಿತೆಯ ಜಾರಿ.(1860)
(7) ಸಿವಿಲ್ ಪ್ರೊಸೀಜರ್ ಕೋಡ್ಸ್ ಜಾರಿ.(1861)

11.ಲಾರ್ಡ್ ಲಾರೆನ್ಸ್ (1864 – 1869)

(1) ಎರಡನೇ ಸಿಖ್ ಯುದ್ಧದ ನಂತರ ಇತನು ಪಂಜಾಬ್ ಆಡಳಿತ ಇಲಾಖೆಯ ಸದಸ್ಯನಾದನು. ಮತ್ತು ಪಂಜಾಬಿನಲ್ಲಿ ಹಲವಾರು ಜವಾಬ್ದಾರಿಯುತ ಸುಧಾರಣೆಗಳನ್ನು ಜಾರಿಯಲ್ಲಿ ತಂದು “ಪಂಜಾಬ್ ದ ಸಂರಕ್ಷಕ” ನೆಂದು ಖ್ಯಾತನಾದನು.
(2) 1865 ರಲ್ಲಿ ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್ ಗಳಲ್ಲಿ ಹೈಕೋರ್ಟ್ ಗಳನ್ನು ಸ್ಥಾಪಿಸಲಾಯಿತು.

12.ಲಾರ್ಡ್ ಮಾಯೋ (1869  – 1872)

(1) ಭಾರತದಲ್ಲಿ ಪ್ರಥಮ ಜನಗಣತಿ (1871)
(2) 1872 ರಲ್ಲಿ ಅಂಡಮಾನ್ ದ್ವೀಪಗಳ ಭೇಟಿ ಸಂದರ್ಭದಲ್ಲಿ (ಕೈದಿ ಶೇರ್ ಅಲಿಯಿಂದ) ಭಾರತದಲ್ಲಿ ಕೊಲ್ಲಲ್ಪಟ್ಟ ಏಕ ಮಾತ್ರ ವೈಸರಾಯ್ .
(3) ಕೃಷಿ ಇಲಾಖೆಯ ಸ್ಥಾಪನೆ.

13.ಲಾರ್ಡ್ ಲಿಟ್ಟನ್ (1876- 1880)

(1) 1877 ರಲ್ಲಿ ದೆಹಲಿ ದರ್ಬಾರ್ ಆಯೋಜಿಸಿ, ರಾಣಿ ವಿಕ್ಟೋರಿಯಾಗೆ ‘ಕೈಸರ್-ಇ-ಹಿಂದ್’ ಬಿರುದು ಪ್ರಧಾನ.
(2) ಭಾರತದ ವೃತ್ತ ಪತ್ರಗಳ ಮೇಲೆ ನಿರ್ಬಂಧ ವಿಧಿಸುವ ‘ದೇಶೀಯ ಪತ್ರಿಕಾ ಕಾಯಿದೆ’ ಜಾರಿಗೆ (1878)
(3) ಶಸ್ತ್ರಾಸ್ತ್ರ ಕಾಯಿದೆ – (1878).
(4) ಸರ್.ಸಯ್ಯದ್ ಅಹ್ಮದ್ ಖಾನರಿಂದ ಅಲಿಘಡದಲ್ಲಿ ಮಹಮ್ಮದನ್ ಆಂಗ್ಲೋ ಓರಿಯಂಟಲ್ ಕಾಲೇಜು ಸ್ಥಾಪನೆ. (1877)
(5) ನಾಗರಿಕ ಸೇವಾ ಪರೀಕ್ಷೆ ಪ್ರವೇಶ ವಯಸ್ಸನ್ನು 21 ರಿಂದ 19ಕ್ಕೆ ಇಳಿಸಲಾಯಿತು.

14.ಲಾರ್ಡ್ ರಿಪ್ಪನ್ (1880 – 1884)

(1) ಭಾರತದ ವೃತ್ತ ಪತ್ರಗಳ ಮೇಲೆ ನಿರ್ಬಂಧ ವಿಧಿಸುವ ‘ದೇಶೀಯ ಪತ್ರಿಕಾ ಕಾಯಿದೆ’ ರದ್ದು. (1882)
(2) ನಾಗರಿಕ ಸೇವಾ ಪರೀಕ್ಷೆ ಪ್ರವೇಶ ವಯಸ್ಸನ್ನು ಪುನಃ 19 ರಿಂದ 21ಕ್ಕೆ ಏರಿಸಲಾಯಿತು. (3) ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಲು ಮೊದಲ ಫ್ಯಾಕ್ಟರಿ ಕಾಯಿದೆ ಅಂಗೀಕಾರ (1881)
(4) ‘ಭಾರತೀಯ ಸ್ಥಳೀಯ ಸರ್ಕಾರಗಳ ಪಿತಾಮಹ’ – ದೇಶದಲ್ಲಿ ನಗರ ಸಭೆಗಳು, ಜಿಲ್ಲಾ ಮತ್ತು ಸ್ಥಳೀಯ ಮಂಡಳಿಗಳ ಸ್ಥಾಪನೆ. (1882)
(5) ಇಲ್ಬರ್ಟ್ ಬಿಲ್ ಕಾಯಿದೆ ಜಾರಿಗೆ (1883)

15.ಲಾರ್ಡ್ ಡಫೆರಿನ್ನ (1884 – 1894)

(1) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಚಿಸಲಾಯಿತು. (1885)

16.ಲಾರ್ಡ್ ಲಾನ್ಸ್ ಡೌನ್  (1888 – 1894)

(1) ಭಾರತೀಯ ಕೌನ್ಸಿಲ್ ಕಾಯಿದೆ (1892)
(2) ಬ್ರಿಟಿಷ್ ಭಾರತ ಮತ್ತು ಅಫ್ಘಾನಿಸ್ಥಾನ ನಡುವೆ ಗಡಿರೇಖೆ ಗುರುತಿಸಲು ಡುರಾಂಡ್ ಆಯೋಗದ ನೇಮಕ.

17.ಲಾರ್ಡ್ ಕರ್ಜನ್ (1899 – 1905)

(1) ಬಂಗಾಳದ ವಿಭಜನೆ (1905)
(2) ಸ್ವದೇಶಿ ಚಳವಳಿಯ ಆರಂಭ.
(3) ಕೃಷಿ ಬ್ಯಾಂಕುಗಳ ಸ್ಥಾಪನೆ. ಬಂಗಾಳದ ಪೂಸಾದಲ್ಲಿ ಕೃಷಿ ಸಂಶೋಧನಾ ಸಂಸ್ಥೆ ಸ್ಥಾಪನೆ (1904)
(4) ಪುರಾತನ ಸ್ಮಾರಕಗಳ ಸಂರಕ್ಷಣಾ ಕಾಯಿದೆ ಜಾರಿ, ಪುರಾತತ್ವ ಇಲಾಖೆ ರಚನೆ (1901)
(5) ಸರ್. ಥಾಮಸ್ ರಾಲೆ. ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯ ಆಯೋಗ ನೇಮಕ, ‘ಭಾರತೀಯ ವಿಶ್ವವಿದ್ಯಾಲಯಗಳ ಕಾಯಿದೆ ಜಾರಿ. (1904)
(6) ಪೊಲೀಸ್ ಆಯೋಗ ರಚನೆ.
(7) ಕ್ರಿಮಿನಲ್ ತನಿಖಾ ಇಲಾಖೆ ರಚನೆ.

18.ಲಾರ್ಡ್ ಮಿಂಟೋ (1905 – 1910)

(1) ಭಾರತೀಯ ಮಂಡಳಿ ಕಾಯಿದೆ -1909 ಅಥವಾ ಮಾರ್ಲೆ-ಮಿಂಟೊ ಸುಧಾರಣೆಗಳನ್ನು ಅಂಗೀಕರಿಸಿತು.
(2) ಮುಸ್ಲಿಂರಿಗೆ ಪ್ರತ್ಯೇಕ ಮತಕ್ಷೇತ್ರ ಪ್ರಾತಿನಿಧ್ಯ.

19.ಲಾರ್ಡ್ ಹಾರ್ಡಿಂಗ್ (1910 – 1916)

(1) ಇಂಗ್ಲೆಂಡ್ ನ ದೊರೆ Vನೇ ಜಾರ್ಜ್ ನ ಪಟ್ಟಾಭಿಷೇಕ – ದೆಹಲಿ ದರ್ಬಾರ್ (1911)
(2) ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು (1911)
(3) ಅನ್ನಿ ಬೆಸೆಂಟ್ ರಿಂದ ಹೋಮ್ ರೂಲ್ ಚಳುವಳಿ ಆರಂಭಿಸಲಾಯಿತು. (1921)
(4) ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಆಗಮನ (1915)

20.ಲಾರ್ಡ್ ಚೆಲ್ಮ್ಸ್ ಫೋರ್ಡ್  (1916 – 1921)

(1) ಭಾರತ ಸರ್ಕಾರದ ಕಾಯಿದೆ -1919 (ಮೊಂಟಾಗು ಚೆಲ್ಮ್ಸ್ ಫೋರ್ಡ್ ಸುಧಾರಣೆಗಳು)
(2) ರೌಲಟ್ ಕಾಯಿದೆ -1919 ಜಾರಿಗೆ.
(3) ಜಲಿಯನ್ ವಾಲಾ ಬಾಗ್ ದುರಂತ. (ಏಪ್ರೀಲ್ 13, 1919)
(4) ಖಿಲಾಪತ್ ಚಳುವಳಿ.
(5) ಅಸಹಕಾರ ಚಳುವಳಿ.

21.ಲಾರ್ಡ್ ರೆಡಿಂಗ್ (1921 – 1926)

(1) ರೌಲಟ್ ಆಕ್ಟ್ಅನ್ನು ರದ್ದುಗೊಳಿಸಲಾಯಿತು.
(2) ಸ್ವರಾಜ್ ಪಕ್ಷ ರಚಿಸಲಾಯಿತು.
(3) ಚೌರಿ ಚೌರ ಘಟನೆ.

22.ಲಾರ್ಡ್ ಇರ್ವಿನ್ (1926 – 1931)

(1) ಸೈಮನ್ ಆಯೋಗ ಭಾರತಕ್ಕೆ ಭೇಟಿ – (1928)
(2) ದಂಡಿ ಸತ್ಯಾಗ್ರಹ ಪ್ರಾರಂಭಿಸಲಾಯಿತು ಭಾರತಕ್ಕೆ ಭೇಟಿ ನೀಡಿದರು.
(3) ನಾಗರಿಕ ಅಸಹಕಾರ ಚಳುವಳಿಯನ್ನು 1930 ರಲ್ಲಿ ಆರಂಭಿಸಲಾಯಿತು.
(4) ಗಾಂಧಿ – ಇರ್ವಿನ್ ಒಪ್ಪಂದಕ್ಕೆ ಸಹಿ
(5) ಮೊದಲ ದುಂಡು ಮೇಜಿನ ಸಭೆ.

23.ಲಾರ್ಡ್ ವಿಲ್ಲಿಂಗ್ಡನ್ (1931 – 1936)

(1) 1931ರಲ್ಲಿ ಎರಡನೇ ಮತ್ತು ಮೂರನೆಯ ದುಂಡು ಮೇಜಿನ ಸಭೆ
(2) ಬ್ರಿಟಿಷ್ ಪ್ರಧಾನಮಂತ್ರಿ ರಾಮ್ಸೆ ಮ್ಯಾಕ್ ಡೊನಾಲ್ಡ್ ರಿಂದ ಕಮ್ಯುನಲ್ ಅವಾರ್ಡ್   ಪ್ರಾರಂಭ.
(3) ಪೂನಾ ಒಪ್ಪಂದದ ಸಹಿ.
(4) 1935ರ ಭಾರತ ಸರಕಾರದ ಆಕ್ಟ್ ನ್ನು ಪ್ರಾಂತ್ಯಗಳಲ್ಲಿ ಜಾರಿಗೆ.

24.ಲಾರ್ಡ್ ಲಿನ್ಲಿತ್ಗೋ (1936 – 1944)

(1) 2ನೇ ಮಹಾಯುದ್ಧದ ಆರಂಭ.
(2) ಕ್ರಿಪ್ಸ್ ಸಮಿತಿ 1942ರಲ್ಲಿ ಭಾರತಕ್ಕೆ ಭೇಟಿ.
(3) ಭಾರತ ಬಿಟ್ಟು ತೊಲಗಿ ಚಳುವಳಿ.

25.ಲಾರ್ಡ್ ವಾವೆಲ್ (1944 – 1947)

(1) ಕ್ಯಾಬಿನೆಟ್ ನಿಯೋಗದ ಯೋಜನೆ.
(2) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಶಿಮ್ಲಾ ಸಮ್ಮೇಳನ.
(3) ಮುಸ್ಲಿಂ ಲೀಗ್ ನಿಂದ ಡೈರೆಕ್ಟ್ ಆ್ಯಕ್ಷನ್ ಡೇ.
(4) ನೆಹರೂ ನೇತೃತ್ವದ ಮಧ್ಯಂತರ ಸರ್ಕಾರದ ರಚನೆ.

26.ಲಾರ್ಡ್ ಮೌಂಟ್ ಬ್ಯಾಟನ್ (ಮಾರ್ಚ್ 1947 – ಆಗಸ್ಟ್ 1947)

(1) ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಹಾಗೂ ಬ್ರಿಟಿಷ್ ಭಾರತದ ಕೊನೆಯ ವೈಸರಾಯ್.
(2) ಭಾರತದ ವಿಭಜನೆ.
(3) ಸಿ ರಾಜಗೋಪಾಲಾಚಾರಿ, ಸ್ವಾತಂತ್ರ್ಯ ಭಾರತದ ಭಾರತದ ಮೊದಲ ಮತ್ತು ಕಡೆಯ ಗವರ್ನರ್ ಜನರಲ್ ಉತ್ತರಾಧಿಕಾರಿ

1857 Roits

1857 ರ ದಂಗೆ- ಮಂಗಲ ಪಾಂಡೆ :

ಕಲ್ಕತ್ತ ದ ಸಮೀಪ ಬಾರಕ್ಪುರದಲ್ಲಿ ೨೯ ಮಾರ್ಚ್ ೧೮೫೭ ರಂದು ೩೪ನೇ ಬಂಗಾಳ ಸ್ಥಳೀಯ ಕಾಲಾಳು ಸೈನ್ಯದ ಮಂಗಲ ಪಾಂಡೆ ಎಂಬ ಸಿಪಾಯಿಯು ದಳದ ನಾಯಕ ಲೆ. ಬಾಗ್ ನನ್ನು ಗುಂಡಿಕ್ಕಿದ ನಂತರ ಖಡ್ಗದಿಂದ ಇರಿದನು. ಇದನ್ನರಿತ ಜನರಲ್, ಜಮಾದಾರ ಈಶ್ವರೀ ಪ್ರಸಾದರಿಗೆ ಮಂಗಲ ಪಾಂಡೆಯನ್ನು ಬಂಧಿಸಲು ಸೂಚಿಸಿದನು. ಆದರೆ ಜಮಾದಾರನು ನಿರಾಕರಿಸಿದನು. ಇದರ ಬಳಿಕ ಸೈನ್ಯದ ಎಲ್ಲ ಸಿಪಾಯಿಗಳೂ ಜನರಲ್ ಆಜ್ಞೆಯನ್ನು ಪಾಲಿಸಲು ನಿರಾಕರಿಸಿದರು (ಶೇಖ್ ಪಲ್ಟು ಎಂಬ ಸಿಪಾಯಿಯನ್ನು ಹೊರತುಪಡಿಸಿ.) ತನ್ನ ಪದಾತಿಗಳನ್ನು ದಂಗೆಯೇಳಲು ಹುರಿದುಂಬಿಸಲು ವಿಫಲನಾದ ಕಾರಣ ಮಂಗಲ ಪಾಂಡೆ ಬಂದೂಕನ್ನು ತನ್ನ ಕುತ್ತಿಗೆಗೆ ತೋರಿಸಿ ಕಾಲಿನಿಂದ ಅದರ ಕುದುರೆಯನ್ನು ಎಳೆದನು. ಆದರೆ ಇದರ ನಂತರ ಬದುಕಿದ ಅವನನ್ನು ಕೋರ್ಟ್ ಮಾರ್ಷಲ್ ಮಾಡಿ ಏಪ್ರಿಲ್ ೭ ರಂದು ಗಲ್ಲಿಗೇರಿಸಲಾಯಿತು. ನಂತರ ಜಮಾದಾರ ಈಶ್ವರೀ ಪ್ರಸಾದನನ್ನೂ ಗಲ್ಲಿಗೇರಿಸಲಾಯಿತು. ಇಡೀ ಕಾಲಾಳು ಸೈನ್ಯವನ್ನು ಬರಖಾಸ್ತುಗೊಳಿಸಿ, ಅವರ ಸಮವಸ್ತ್ರವನ್ನು ಕಿತ್ತು ಹಾಕಲಾಯಿ ತು. ಶೇಖ್ ಪಲ್ಟುನನ್ನು ಜಮಾದಾರನನ್ನಾಗಿ ಬಡ್ತಿ ನೀಡಲಾಯಿತು. ಇದರಿಂದ ಅವಮಾನಿತರಾದ ಮಾಜಿ ಸಿಪಾಯಿಗಳು ಸೂಕ್ತ ರೀತಿಯಾಗಿ ಈ ಸೇಡನ್ನು ತೀರಿಸಲು ಕಾಯುತ್ತಿದ್ದರು.

ಮೀರಟ್ನಲ್ಲಿ ೩ನೇ ಲಘು ಅಶ್ವದಳ:

ಮೇ ೯ ರಂದು ೩ನೇ ಬಂಗಾಳ ಲಘು ಅಶ್ವ ದಳದ ೮೫ ಸೈನಿಕರು ಹೊಸ ಕಾಡತೂಸುಗಳನ್ನು ಬಳಸಕು ನಿರಾಕರಿಸಿದ ಕಾರಣ ಅವರನ್ನು ಬಂಧಿಸಿ, ಸಾರ್ವಜನಿಕವಾಗಿ ಸಮವಸ್ತ್ರವನ್ನು ಕಿತ್ತು ಹಾಕಿ, ೧೦ ವರ್ಷ ಕಾರಾಗೃಹ ವಾಸ ಮತ್ತು ಕಠಿಣ ಸಜೆಯನ್ನು ವಿಧಿಸಲಾಯಿತು. ಬಂಧಿತ ಸೈನಿಕರನ್ನು ಕಾರಾಗೃಹಕ್ಕೆ ಕೊಂಡೊಯ್ಯುತ್ತಿರುವಾಗ ಅವರನ್ನು ವಿವಿಧ ರೀತಿಯಾಗಿ ಅವಮಾನಿಸಿ ಹೀಯಾಳಿಸಲಾಯಿತು. ಸೈನಿಕರನ್ನು ಹೀಗೆ ನಡೆಸಿಕೊಂಡ ರೀತಿಯೇ ಇತರ ಸಿಪಾಯಿಗಳು ದಂಗೆಯೇಳಲು ಕಾರಣವಾಯಿತು.
ಮೀರಟ್ನಲ್ಲಿ ತಾಲೀಮು ನಡೆಸಿದ ೧೧ನೇ ಮತ್ತು ೨೦ನೇ ಕಾಲಾಳುಗಳು ಆಜ್ಞೆಯನ್ನು ಉಲ್ಲಂಘಿಸಿ ಐರೋಪ್ಯ ದಂಡು ಪ್ರದೇಶದ ಮೇಲೆ ದಾಳಿ ಮಾಡಿ ಕೈಗೆ ಸಿಕ್ಕ ಎಲ್ಲ ಐರೋಪ್ಯರನ್ನು ಕೊಂದು ಹಾಕಿ ಅವರ ಮನೆಗಳನ್ನು ಸುಟ್ಟರು. ಆದರೆ ಕೆಲವು ಮೂಲಗಳ ಪ್ರಕಾರ ಸಿಪಾಯಿಗಳು ತಮ್ಮ ಹಿರಿಯ ಸೈನ್ಯಾಧಿಕಾರಿಗಳನ್ನು ಸುರಕ್ಷಿತ ತಾಣಗಳಿಗೆ ಸೇರಿಸಿ ದಂಗೆಯನ್ನು ಮುಂದುವರೆಸಿದರು.

ಪರ ಮತ್ತು ವಿರೋಧ :

ಸಂಗ್ರಾಮದ ಕಾಲದಲ್ಲಿ ಭಾರತದ ರಾಜ್ಯಗಳು ಬಂಡಾಯವು ಸೇನೆಯಿಂದ ಹೊರಗೆ ಚೆಲ್ಲಿತಾದರೂ, ಭಾರತದ ನಾಯಕರು ಅಪೇಕ್ಷಿಸಿದಷ್ಟು ಯಶಸ್ವಿಯಾಗಲಿಲ್ಲ. ಭಾರತದ ಪರ ಒಗ್ಗಟ್ಟಿನ ಕೊರತೆಯಿತ್ತು. ಮುಖ್ಯವಾಗಿ ಸಂಗ್ರಾಮವು ಉತ್ತರ ಮತ್ತು ಕೇಂದ್ರ ಪ್ರದೇಶಗಳಾದ ದೆಹಲಿ , ಲಖನೌ ,
ಕಾನ್ಪುರ, ಝಾನ್ಸಿ , ಬರೇಲಿಗಳಲ್ಲಿ ಕೇಂದ್ರೀಕೃತವಾಗಿತ್ತು. ಬಹಳಷ್ಟು ಭಾರತೀಯರು ಬ್ರಿಟಿಷರ ಪರವಾಗಿ ನಿಂತರು. ಇದರ ಕಾರಣ ಮುಘಲರ ಮೇಲಿನ ಅಪನಂಬಿಕೆ ಮತ್ತು ಭಾರತೀಯತೆಯ ಭಾವನೆಯ ಕೊರತೆ. ಪಂಜಾಬಿನ ಮತ್ತು ವಾಯವ್ಯ ಗಡಿನಾಡಿನ ಸಿಖ್ಖರು ಮತ್ತು ಪಠಾಣರು ಬ್ರಿಟಿಷರು ದೆಹಲಿಯನ್ನು ಮರು ಕಬಳಿಸಲು ಸಹಾಯ ಮಾಡಿದರು. ನೇಪಾಳವು ಸ್ವತಂತ್ರ ರಾಜ್ಯವಾಗಿದ್ದರೂ ಕೂಡ ನೇಪಾಳಿ ಗೂರ್ಖಾಗಳು ಬ್ರಿಟಿಷರಿಗೆ ಸಹಾಯ ಮಾಡಿದರು. ಸಣ್ಣ-ಪುಟ್ಟ ಗಲಭೆಗಳನ್ನು ಹೊರತುಪಡಿಸಿದರೆ ದಕ್ಷಿಣ ಭಾರತ ದ ಬಹಳಷ್ಟು ಪ್ರಾಂತ್ಯಗಳು ಸಂಗ್ರಾಮದಲ್ಲಿ ಪಾತ್ರ ವಹಿಸಲಿಲ್ಲ. ಇದಕ್ಕೆ ಕಾರಣ ಈ ಪ್ರಾಂತ್ಯಗಳು ನಿಜಾಮರ ಅಥವಾ ಮೈಸೂರು ರಾಜ್ಯದ ಆಳ್ವಿಕೆಗೆ ಒಳಪಟ್ಟಿದ್ದರು. ಇದರಿಂದ ಈ ಭಾಗದ ಜನರು ನೇರವಾಗಿ ಬ್ರಿಟಿಷ್ ಆಳ್ವಿಕೆಯಲ್ಲಿರಲಿಲ್ಲ.

ಆರಂಭಿಕ ಹಂತಗಳು:

ಆರಂಭದಲ್ಲಿ ಭಾರತದ ಸಿಪಾಯಿಗಳು ಕಂಪನಿಯ ಸೈನ್ಯವನ್ನು ಸೋಲಿಸಿ ಹರಿಯಾಣ, ಬಿಹಾರ , ಮತ್ತು ಕೇಂದ್ರೀಯ ಪ್ರಾಂತ್ಯಗಳ ಹಲವು ಪ್ರಮುಖ ಸ್ಥಳಗಳನ್ನು ವಶಪಡಿಸಿಕೊಂಡರು. ಆದರೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ಬ್ರಿಟಿಷರು ದೀರ್ಘ ಹೋರಾಟ ನಡೆಸಿದರು. ದಂಗೆಯೆದ್ದ ಸಿಪಾಯಿಗಳಿಗೆ ಕೇಂದ್ರೀಕೃತ ನಾಯಕತ್ವದ ಕೊರತೆಯಿತ್ತು. ದೆಹಲಿ ಬ್ರಿಟಿಷರು ಹಂತ-ಹಂತವಾಗಿ ಪ್ರದೇಶಗಳನ್ನು ಮರು ವಶಪಡಿಸಿಕೊಂಡರು. ಯುರೋಪಿನಿಂದ ಚೀನ ಕ್ಕೆ ಹೋಗುತ್ತಿದ್ದ ಹಲವು ತುಕಡಿಗಳನ್ನು ಭಾರತಕ್ಕೆ ಕಳುಹಿಸಲಾಯಿತು. ದಂಗೆಯೆದ್ದ ಸಿಪಾಯಿಗಳನ್ನು ಎರಡು ತಿಂಗಳು ಸತತವಾಗಿ ದೆಹಲಿಯನ್ನು ದಾಳಿ ಮಾಡಲಾಯಿತು. ಆಗ ಸಿಖ್ಖರ ಮತ್ತು ಪಠಾಣರ ಬೆಂಬಲದಿಂದ ಅಂತಿಮವಾಗಿ ದೆಹಲಿಯನ್ನು ಮರು ವಶಪಡಿಸಿಕೊಳ್ಳಲಾಯಿತು. ನಂತರ ಮುಂದುವರೆದು ದಂಗೆಯು ಕಾನ್ಪುರ, ಬಿಹಾರ,ಝಾನ್ಸಿ,ಅವದ್, ಹೀಗೆ ವಿಶಾಲವಾಗಿ ವ್ಯಾಪಿಸಿತು. ಇದರ ನಂತರ ನಿಧಾನವಾಗಿ ಸತತ ದಾಳಿಗಳ ಪರಿಣಾಮವಾಗಿ ಕಾನ್ಪುರ ಮತ್ತು ಲಖನೌ ಪ್ರಾಂತ್ಯಗಳನ್ನು ಮರುವಶಪಡಿಸಿಕೊಳ್ಳಲಾಯಿತು.

1857ರ ದಂಗೆಯಲ್ಲಿ ಹೋರಾಡಿದ ಮಹನೀಯರು:

ಕಾನ್ಪುರ್  ನಾನಾ ಸಾಹೇಬ್
ಬಿಹಾರ್  ಕನ್ವರ್ ಸಿಂಗ್
ಬರೇಲಿ  ಖಾನ್ ಬಹದ್ದೂರ್
ದೆಹಲಿ  ಭಕ್ತಖಾನ್
ಲಕ್ನೋ  ಹಜರತ್ ಬೇಗಂ
ಮಥುರ :ದೇವಿಸಿಂಗ್
ಅಸ್ಸಾಂ  ಮಣಿರಾಂ ದತ್ತ
ಒರಿಸ್ಸಾ  ಸುರೇಂದ್ರ ಸ್ವಾಮಿ
 ಝಾನ್ಸಿ  ರಾಣಿ ಲಕ್ಷ್ಮೀಬಾಯಿ
 ಗ್ವಾಲಿಯರ್  ತಾತ್ಯಾಟೋಪಿ
 ಮಿರತ್  ಕದಂ ಸಿಂಗ್
 ಸಾಂಬಲ್ ಪುರ  ಸುರೆಂದ್ರ ಸೇನ್
 ಅಲಹಾಬಾದ್  ಲಿಯಾತ್ ಖಾನ್

ದಂಗೆ ನಡೆದ ಸ್ಥಳ

ದಂಗೆ ನಿಯಂತ್ರಿಸಿದ ಬ್ರಿಟಿಷ ಅಧಿಕಾರಿ

ಮೀರತ್ ಬಾರ್ನಾಡ್
ಪಂಜಾಬ್ ಲಾರೇನ್ಸ್
ದೆಹಲಿ ನಿಕೋಲ್ಸನ್
ಕಾನ್ಪೂರ ಹ್ಯಾಲಾಕ್
ಲಕಸಾ ಕೂಲಿನ್ ಕ್ಯಾಂಪಬೆಲ್
ಝಾನ್ಸಿ ಹೂರೋಸ್
ಅರಾ ಮತ್ತು ಜಗದೀಶಪುರ ಮೇಜರ್ ಐರ್
ನರಗುಂದ ಮೇಡೊಸ್ ಟೇಲರ್
ಸುರಪುರ ಮ್ಯಾನಸನ್

Historical events by year

ವರ್ಷ

ಘಟನೆ

•1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ವಶ
•1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ
•1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ)
•1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ)
•1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ.
•1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1799 – 4ನೇ ಆಂಗ್ಲೋ ಮೈಸೂರು ಯುದ್ಧ,( ಟಿಪ್ಪು ಮರಣ )
•1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ )
•1784 – ಪಿಟ್ಸ್ ಇಂಡಿಯಾ ಶಾಸನ
•1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ )
•1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ )
•1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )
•1935 – ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಕಾಶ
•1916 – ಹೋಂರೂಲ್ ಚಳುವಳಿ ಆರಂಭ ( ಆನಿ ಬೆಸೆಂಟರಿಂದ )
•1857 – ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
•1858 – ಬ್ರಿಟನ್ ರಾಣಿಯ ಘೋಷಣೆ
•1853 – ಭಾರತದಲ್ಲಿ ಪ್ರಥಮ ರೈಲು ಸಂಚಾರ ಆರಂಭ ( ಮುಂಬೈ-ಠಾಣಾ ನಡುವೆ )
•1780 – ಭಾರತದ ಮೊದಲ ಪತ್ರಿಕೆ “ದಿ ಬೆಂಗಾಲ್ ಗೆಜೆಟ್” ಆರಂಭ
•1878 – ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ ಜಾರಿಗೆ
•1855 – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ( ಎ ಓ ಹ್ಯೂಮ್ ರಿಂದ )
•1905 – ಬಂಗಾಳ ವಿಭಜನೆ
•1906 – ಮುಸ್ಲಿಂ ಲೀಗ್ ಸ್ಥಾಪನೆ
•1920-1947 –  ಗಾಂಧೀಯುಗ
•1920 – ಅಸಹಕಾರ ಚಳುವಳಿ
•1924 – ಬೆಳಗಾವಿ ಕಾಂಗ್ರೆಸ್ ಅಧಿವೇಶನ ( ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ )
•1929 – ಲಾಹೋರ್ ಕಾಂಗ್ರೆಸ್ ಅಧಿವೇಶನ ( “ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ” ಎಂದು ಘೋಷಣೆ )
•1930 – ಕಾನೂನು ಭಂಗ ಚಳುವಳಿ ( ದಂಡಿ ಸತ್ಯಾಗ್ರಹ )
•1930 – ಮೊದಲ ದುಂಡು ಮೇಜಿನ ಅಧಿವೇಶನ
•1931 – ಎರಡನೆಯ ದುಂಡು ಮೇಜಿನ ಅಧಿವೇಶನ
•1932 – ಮೂರನೆಯ ದುಂಡು ಮೇಜಿನ ಅಧಿವೇಶನ
•1942 ಕ್ವಿಟ್ ಇಂಡಿಯಾ ಚಳುವಳಿ
•1947 –  ಭಾರತ ಸ್ವಾತಂತ್ರ ಕಾಯ್ದೆ ( ಭಾರತಕ್ಕೆ ಸ್ವಾತಂತ್ರ )
•1948 – ಗಾಂಧೀಜಿ ಹತ್ಯೆ ( ಜನವರಿ 30 – ನಾಥೋರಾಮ್ ಗೂಡ್ಸೆಯಿಂದ )
•1950 – ಜನವರಿ 26- ಭಾರತ ಸಂವಿಧಾನ ಜಾರಿಗೆ
•1953 – ರಾಜ್ಯ ಪುನರ್ವಿಂಗಡನಾ ಆಯೋಗ ಸ್ಥಾಪನೆ ( ಅಧ್ಯಕ್ಷ ಫಜಲ್ ಅಲಿ )
•1956 ನವೆಂಬರ್ 1 –  ಮೈಸೂರು ರಾಜ್ಯ ಅಸ್ತಿತ್ವ
•1973 ನವೆಂಬರ್ 1 – ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ
•1914-18 –  ಮೊದಲ ಮಹಾಯುದ್ಧ
•1917 – ರಷ್ಯಾ ಕ್ರಾಂತಿ
•1939-45 – ಎರಡನೆಯ ಮಹಾಯುದ್ಧ ರಾಜ್ಯಶಾಸ್ತ್ರ
•1956 – ಭಾಷಾವಾರು ಪ್ರಾಂತ್ಯಗಳ (ರಾಜ್ಯ) ರಚನೆ
•2001 – ಸರ್ವ ಶಿಕ್ಷಣ ಅಭಿಯಾನ ಆರಂಭ ( 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಒದಗಿಸಲು )
•1988 – ರಾಷ್ಟ್ರೀಯ ಸಾಕ್ಷರತಾ ಮಿಷನ್ ಸ್ಥಾಪನೆ
•2009 – ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ
•1986 – ಲೋಕಾಯುಕ್ತ ಅದಿನಿಯಮ ಜಾರಿಗೆ
•1954 – ಪಂಚಶೀಲ ತತ್ವಗಳಿಗೆ ಸಹಿ ( ನೆಹರು ಮತ್ತು ಚೌ ಎನ್ ಲಾಯ್ )
•1948. ಡಿಸೆಂಬರ್ 10 – ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆ
•1945. ಅಕ್ಟೋಬರ್ 24 – ವಿಶ್ವಸಂಸ್ಥೆ ಸ್ಥಾಪನೆ
•1945 –  ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆ
•1948 – ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆ
•1946 – ಯುನೆಸ್ಕೋ ಸ್ಥಾಪನೆ
•1946 – ಯುನಿಸೆಫ್ ಸ್ಥಾಪನೆ
•1947 – ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಸ್ಥಾಪನೆ
•1992 – ಯೂರೋಪಿಯನ್ ಯೂನಿಯನ್ ಸ್ಥಾಪನೆ
•1967 ಆಸಿಯನ್ ಸ್ಥಾಪನೆ
•1963 ಆಫ್ರಿಕನ್ ಒಕ್ಕೂಟ ಸ್ಥಾಪನೆ. ಸಮಾಜಶಾಸ್ತ್ರ
•1955 –  ಅಸ್ಪೃಶ್ಯತಾ ಅಪರಾಧಗಳ ಕಾಯ್ದೆ ಜಾರಿಗೆ
•1976 ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಗೆ
•1989 (ಕಾಯ್ದೆ) –  ಅಸ್ಪೃಶ್ಯತೆಯ ನಿರ್ಮೂಲನೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ
•1986 – ಬಾಲಕಾರ್ಮಿಕ ನಿಷೇಧ ಮತ್ತು ನಿಯಣತ್ರಣ ಕಾಯ್ದೆ ಜಾರಿಗೆ ( 20000 ರೂ ದಂಡ )
•1988 – ರಾಷ್ಟ್ಟೀಯ ಬಾಲಕಾರ್ಮಿಕ ಯೋಜನೆ ಜಾರಿಗೆ
•2006 – ಬಾಲಶ್ರಮ ನಿರ್ಮೂಲನ ಮತ್ತು ಪುನರ್ವಸತೀಕರಣ ಕಾಯ್ದೆ ಜಾರಿಗೆ
•1961 – ವರದಕ್ಷಿಣೆ ನಿಷೇದ ಕಾಯ್ದೆ ( 1986 ರಲ್ಲಿ ತಿದ್ದುಪಡಿ )
•1994 – ಪ್ರಸವ ಪೂರ್ವ ಲಿಂಗ ಪರೀಕ್ಷೆ ಪ್ರಯಿಬಂಧಕ ಕಾಯ್ದೆ ಜಾರಿಗೆ.
•1950 – ಭಾರತದ ಯೋಜನಾ ಆಯೋಗ ಸ್ಥಾಪನೆ ( ಈಗ ನೀತಿ ಆಯೋಗ ಎಂದು ಕರೆಯಲಾಗುತ್ತದೆ )
•1952 – ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆ (ಪಂಚವಾರ್ಷಿಕ ಯೋಜನೆಗಳಿಗೆ ಅನುಮೋದನೆ ನೀಡುತ್ತದೆ )
•1951. ಏಪ್ರಿಲ್ 1 – ಮೊದಲ ಪಂಚವಾರ್ಷಿಕ ಯೋಜನೆ ಆರಂಭ
•1995. ಜನವರಿ 1 – ವಿಶ್ವ ವ್ಯಾಪಾರ ಸಂಘಟನೆ ಅಸ್ತಿತ್ವಕ್ಕೆ ಬಂದಿತು.

History Notes-Historical events by year

ವರ್ಷ

ಘಟನೆ

ಕ್ರಿ.ಪೂ.2005-1500 . ಹರಪ್ಪ ನಾಗರಿಕತೆ.
ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.
ಕ್ರಿ.ಪೂ.1000 ಕಬ್ಬಿಣದ ಬಳಕೆ.
ಕ್ರಿ.ಪೂ.1000-500  ವೇದಗಳ ಕಾಲ
ಕ್ರಿ.ಪೂ.563-483 ಗೌತಮ ಬುದ್ಧನ ಕಾಲ
ಕ್ರಿ.ಪೂ.540-468 ಮಹಾವೀರನ ಕಾಲ
ಕ್ರಿ.ಪೂ.542-490 ಹರ್ಯಂಕ ಸಂತತಿ
ಕ್ರಿ.ಪೂ.413-362 ಶಿಶುನಾಗ ಸಂತತಿ.
ಕ್ರಿ.ಪೂ.362-324  ನಂದ ಸಂತತಿ.
ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ
ಕ್ರಿ.ಪೂ.324-183 ಮೌರ್ಯ ಸಂತತಿ.
ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ
ಕ್ರಿ.ಪೂ.298-273 ಬಿಂದುಸಾರನ ಕಾಲ.
ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.
ಕ್ರಿ.ಪೂ.185-147 ಶುಂಗ ಸಂತತಿ.
ಕ್ರಿ.ಪೂ.73-28 ಕಣ್ವರ ಆಳ್ವಿಕೆ.
ಕ್ರಿ.ಪೂ.235-ಕ್ರಿ. ಶ.225 ಶಾತವಾಹನರವ ಆಳ್ವಿಕೆಯ ಕಾಲ.
ಕ್ರಿ.ಪೂ.155.  ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.
ಕ್ರಿ.ಪೂ.58-57  ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)
ಕ್ರಿ.ಶ.78-101 ಕಾನಿಷ್ಕನ ಕಾಲ.
ಕ್ರಿ.ಶ.78 ಶಕ ಸಂವತ್ಸರ
ಕ್ರಿ.ಶ.320-540  ಗುಪ್ತ ಸಾಮ್ರಜ್ಯ.
ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.
ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.
ಕ್ರಿ.ಶ.535-757 ಬದಾಮಿಯ ಚಾಲುಕ್ಯರು.
ಕ್ರಿ.ಶ.300-888 ಕಂಚಿಯ ಪಲ್ಲವರು.
ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.
ಕ್ರಿ.ಶ.630-644  ಭಾರತದಲ್ಲಿ ಹೂಯೆನ್ ತ್ಸಾಂಗ್.
ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.
ಕ್ರಿ.ಶ.814-878 ಅಮೋಘವರ್ಷ ನೃಪತುಂಗ. ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.
ಕ್ರಿ.ಶ.760-1142  ಬಂಗಾಳದ ಪಾಲರು.
ಕ್ರಿ.ಶ.800-1036 ಕನೌಜಿನ ಪ್ರತಿಹಾರರು
ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.
ಕ್ರಿ.ಶ.907-1256 ಚೋಳ ಸಾಮ್ರಾಜ್ಯ.
ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.
ಕ್ರಿ.ಶ.974-1233 ಮಾಳ್ವದ ಪಾರಮಾರರು.
ಕ್ರಿ.ಶ. 1118-1190  ಬಂಗಾಳದ ಸೇನರು.
ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.
ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.
ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.
ಕ್ರಿ.ಶ.1290-1320 ಖಿಲ್ಜಿ ಸಂತತಿ.
ಕ್ರಿ.ಶ.1320-1414 ತುಘಲಕ್ ಸಂತತಿ.
ಕ್ರಿ.ಶ.1414-1451 ಸೈಯದ್ ಸಂತತಿ.
ಕ್ರಿ.ಶ. 1451-1525 ಲೂಧಿ ಸಂತತಿ.
ಕ್ರಿ.ಶ.1336-1649 ವಿಜಯನಗರದ ಆಳ್ವಕೆ.
ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ.
ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.
ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.
ಕ್ರಿ.ಶ.1627-1680 ಶಿವಾಜಿಯ ಕಾಲ.
ಕ್ರಿ.ಶ.1757 ಪ್ಲಾಸಿ ಕದನ.
ಕ್ರಿ.ಶ.1764 ಬಕ್ಸಾರ ಕದನ.
ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.
ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.
ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.
ಕ್ರಿ.ಶ.1857 ಸಿಪಾಯಿ ದಂಗೆ.
ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.
ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.
1905- ಬಂಗಾಳ ವಿಭಜನೆ.
1906- ಮುಸ್ಲಿಂ ಲೀಗ್ ಸ್ಥಾಪನೆ.
1907- ಸೂರತ್ ಅಧಿವೇಶನ/ಸೂರತ್ ಒಡಕು
1909- ಮಿಂಟೋ ಮಾಲ್ರೇ ಸುಧಾರಣೆ.
1911- ಕಲ್ಕತ್ತಾ ಅಧಿವೇಶನ.
1913 – ಗದ್ದಾರ್ ಪಕ್ಷ ಸ್ಥಾಪನೆ.
1915-[ಜನೆವರಿ-9] .ಗಾಂಧೀಜಿ ಭಾರತಕ್ಕೆ ಆಗಮನ.
1916 – ಲಕ್ನೋ ಅಧಿವೇಶನ.
1917 – ಚಂಪಾರಣ್ಯ ಸತ್ಯಾಗ್ರಹ
1918 – ಹತ್ತಿ ಗಿರಣಿ ಸತ್ಯಾಗ್ರಹ’
1919 – ರೌಲತ್ ಕಾಯಿದೆ.
1919-[ಏಪ್ರಿಲ್13]  ಜಲಿಯನ್ ವಾಲಾಬಾಗ್ ದುರಂತ.
1920 – ಖಿಲಾಪತ್ ಚಳುವಳಿ.
1922 – ಚೌರಾಚೌರಿ ಘಟನೆ.
1923 – ಸ್ವರಾಜ್ ಪಕ್ಷ ಸ್ಥಾಪನೆ.
1927- ಸೈಮನ್ ಆಯೋಗ.
1928- ನೆಹರು ವರದಿ.
1929- ಬಾ‌ಡ್ರೋಲೀ ಸತ್ಯಾಗ್ರಹ.
1930 – ಕಾನೂನ ಭಂಗ ಚಳುವಳಿ.
1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.
1937 – ಪ್ರಾಂತೀಯ ಚುಣಾವಣೆ
1939 – ತ್ರೀಪುರಾ ಬಿಕ್ಕಟ್ಟು.
1940 – ಅಗಷ್ಟ ಕೊಡುಗೆ.
1942 – ಕ್ರಿಪ್ಸ ಆಯೋಗ
1945 – ಸಿಮ್ಲಾ ಸಮ್ಮೇಳನ
1946- ಕ್ಯಾಬಿನೆಟ್ ಆಯೋಗ
1947- ಭಾರತೀಯ ಸ್ವಾತಂತ್ರ್ಯ ಕಾಯಿದೆ. .
%d bloggers like this: